ದೆಹಲಿ ಗದ್ದುಗೆ ಹೆಬ್ಬಾಗಿಲು ಯುಪಿಯಲ್ಲಿ ಬಿಜೆಪಿಗೆ ಸಿಗೋದೆಷ್ಟು?

By Web DeskFirst Published May 19, 2019, 11:35 PM IST
Highlights

ಲೋಕ ಸಮರಕ್ಕೆ ನಡೆಯದ 7 ಹಂತದ ಚುನಾವಣೆ ಮುಗಿದಿದೆ. ಅದರೊಂದಿಗೆ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಆದರೆ ದೇಶದ ಗದ್ದುಗೆ ಹಿಡಿದು ಕೊಡುವ ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸಿಗಲಿದೆ?

ನವದೆಹಲಿ[ಮೇ. 19]  ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ  ಬಿಜೆಪಿ 71 ಸ್ಥಾನಗಳಲ್ಲಿ ಜಯಗಳಿಸಿತ್ತು. ಹಾಗಾದರೆ ಈ ಬಾರಿ ಗಳಿಸಿಕೊಳ್ಳುವುದೆಷ್ಟು?

ಕೇಂದ್ರದಲ್ಲಿ ಅಧಿಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಕೇಸರಿ ಅಲೆ ತಗ್ಗಲಿದೆ ಎಂದು ಸಮೀಕ್ಷೆ ಹೇಳಿದೆ. ಬಹುತೇಕ ಸಮೀಕ್ಷೆಗಳು ಹೇಳುವಂತೆ ಬಿಜೆಪಿ ಕೆಲ ಸ್ಥಾನ ಕಳೆದುಕೊಳ್ಳಲಿದೆ.

ಎಕ್ಸಿಟ್ ಪೋಲ್ ನೋಡಿ ಮಮತಾ ಮಾಡಿದ ಶಾರ್ಟ್ ಟ್ವೀಟ್!

ಚುನಾವಣೋತ್ತರ ಸಮೀಕ್ಷೆ ಉತ್ತರ ಪ್ರದೇಶ ಲೆಕ್ಕಾಚಾರ

ಎಬಿಪಿ ನ್ಯೂಸ್ - ಎನ್ ಡಿಎ 22, ಯುಪಿಎ 2 ಹಾಗೂ ಇತರರು 56

ಟೈಮ್ಸ್ ನೌ-  ಎನ್ ಡಿಎ 43, ಕಾಂಗ್ರೆಸ್ 2, ಇತರರು 25 

ರಿಪಬ್ಲಿಕ್ - ಎನ್ ಡಿಎ 38, ಯುಪಿಎ 2 ಹಾಗೂ ಇತರರು 40

ಎನ್ ಡಿ ಟಿವಿ- ಬಿಜೆಪಿ 55,  ಮಹಾಘಟಬಂಧನ 25

click me!