
ಬೆಂಗಳೂರು[ಮೇ. 19] ಟೈಮ್ಸ್ ನೌ, ಸಿ-ವೋಟರ್, ಚಾಣಕ್ಯ ಸೇರಿದಂತೆ ಎಲ್ಲ ಸಮೀಕ್ಷೆಗಳು ಮೋದಿಗೆ ಮತ್ತೆ ಬಹುಮತ ಎಂದಿರುವುದಕ್ಕೆ ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ಉತ್ತರ ನೀಡಿದ್ದರು.
ನಾನು ಇಂಥ ಎಕ್ಸಿಟ್ ಪೋಲ್ ಎಂಬ ಗಾಸಿಪ್ ಗಳನ್ನು ನಂಬುವುದಿಲ್ಲ. ಇದೊಂದು ಗೇಮ್ ಪ್ಲ್ಯಾನ್ .. ಇವಿಎಂ ಮಶಿನ್ ಗಳನ್ನು ಬದಲಾಯಿಸುವ ತಂತ್ರವೂ ಇದರ ಹಿಂದೆ ಇದ್ದರೂ ಇರಬಹುದು. ಎದುರಾಳಿ ಪಕ್ಷಗಳು ಇದಕ್ಕೆಲ್ಲ ಅಂಜದೆ ಶಕ್ತಿಶಾಲಿಯಾಗಿ, ಧೈರ್ಯಯುತವಾಗಿ ಒಂದಾಗಿ ನಿಲ್ಲಬೇಕು ಎಂದು ಮಮತಾ ಟ್ವೀಟ್ ಮೂಲಕ ಕೇಳಿಕೊಂಡಿದ್ದರು.
ಎಕ್ಸಿಟ್ ಪೋಲ್ ನೋಡಿ ಮಮತಾ ಮಾಡಿದ ಶಾರ್ಟ್ ಟ್ವೀಟ್!
ಇದಕ್ಕೆ ಉತ್ತರ ನೀಡಿರುವ ಕರ್ನಾಟಕ ಬಿಜೆಪಿ, ನಿಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ.. ನಿಮಗೆ ರಸಗುಲ್ಲ ಕಳಿಸಿಕೊಡುತ್ತೇವೆ.. ಸ್ವಲ್ಪ ಬಲಿಷ್ಠವಾಗಿರಿ ಎಂದು ಕಾಲೆಳೆದಿದೆ.