ಚುನಾವಣೋತ್ತರ ಸಮೀಕ್ಷೆ: ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ

Published : May 19, 2019, 10:41 PM ISTUpdated : May 19, 2019, 10:49 PM IST
ಚುನಾವಣೋತ್ತರ ಸಮೀಕ್ಷೆ:  ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ

ಸಾರಾಂಶ

ಇಂದು ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಬಿಜೆಪಿಗೆ ಬಹುಮತ ಸಿಗಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ. ಇನ್ನು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.   

ಬೆಂಗಳೂರು, [ಮೇ.19]: ನಾವು 300 ಸೀಟು ಗೆಲ್ತೇವೆ ಅಂತ ಪ್ರಧಾನಿ ಹೇಳಿದ್ದರು. ನಾವು ಇನ್ನೂ ಹೆಚ್ಚು ಸ್ಥಾನ ಗೆಲ್ತೇವೆ. ಮೋದಿಯವರು ಪ್ರಧಾನಿ ಆಗುವುದು ನಿಶ್ಚಿತ. ರಾಜ್ಯದಲ್ಲಿ 22 ಸೀಟು ಗೆಲ್ಲೋದು ನಿಶ್ಚಿತ. ಎಲ್ಲ ಸಮೀಕ್ಷೆಗಳಲ್ಲಿಯೂ ಇದು ಸ್ಪಷ್ಟವಾಗಿದೆ ಎಂದು ಹೇಳಿದರು.

ಮೊದಲಿಗೆ ರಾಜ್ಯದಲ್ಲಿ 22 ಸೀಟು ಗೆಲ್ಲುತ್ತೇವೆ ಎಂದು ನಂಬಿರಲಿಲ್ಲ. ನಮ್ಮ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಎರಡು ಉಪಚುನಾವಣೆಯಲ್ಲೂ10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ. ಮೇ 23ರಂದು ವಾಸ್ತವಿಕ ಸತ್ಯ ಎಲ್ಲರಿಗೂ ಗೊತ್ತಾಗಲಿದೆ ಎಂದು ಬಿಎಸ್‌ವೈ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಇವಿಎಮ್ ಮಷಿನ್‌ನಲ್ಲೇ ದೋಷವಿದೆ ಎಂದು ಮಮತಾ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್‌ವೈ, ಯಾರಿಗೆ ಚುನಾವಣೆ ಸೋಲು ಒಪ್ಪಿಕೊಳ್ಳೋಕೆ ಆಗಲ್ಲ. ಅವರು ಇಂಥ ಮಾತನ್ನ ಹೇಳುತ್ತಾರೆ. 

ಮಮತಾ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅಮಿತ್ ಶಾ ರ್ಯಾಲಿಗೂ ಭದ್ರತೆಯನ್ನ ನೀಡಿರಲಿಲ್ಲ. ಹತಾಶರಾಗಿ ಅವರು ಇಂಥ ಆರೋಪ ಮಾಡಿದ್ದಾರೆ ಎಂದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!