ಕೊಪ್ಪಳ: ಚುನಾವಣಾಧಿಕಾರಿಗಳು ಮನೆಗೆ ಬಂದ ವೇಳೆಯೇ ಪ್ರಾಣಬಿಟ್ಟ ವೃದ್ಧೆ!

By Ravi JanekalFirst Published Apr 25, 2024, 1:41 PM IST
Highlights

ಲೋಕಸಭಾ ಚುನಾವಣೆ ಹಿನ್ನೆಲೆ ಹಿರಿಯ ಮತದಾರರಿಂದ ಮನೆಯಿಂದ ಮತದಾನಕ್ಕಾಗಿ ಚುನಾವಣಾ ಅಧಿಕಾರಿಗಳು ಮನೆಗೆ ಬಂದ ವೇಳೆಯೇ ವೃದ್ಧೆಯೊಬ್ಬ ಪ್ರಾಣಿಬಿಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಹಲಗೇರಿ ಗ್ರಾಮದಲ್ಲಿ ನಡೆದಿದೆ.

ಕೊಪ್ಪಳ (ಏ.25): ಲೋಕಸಭಾ ಚುನಾವಣೆಯು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾಗಿದೆ. ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬ ವಯಸ್ಕನೂ ಭಾಗಿಯಾಗಬೇಕು. ಹಿರಿಯ ನಾಗರಿಕರು, ಅಂಗವಿಕಲರು ಸಹ ಮತದಾನ ಮಾಡುವಂತಾಗಬೇಕು. ಈ ಹಿನ್ನೆಲೆ ಹಿರಿಯ ನಾಗರಿಕರು, ಅಂಗವಿಕಲರು ಮನೆಯಿಂದಲೇ ಮತದಾನ ಮಾಡುವಂತಹ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಚುನಾವಣಾಧಿಕಾರಿಗಳೇ ನೇರವಾಗಿ ಮನೆಗೆ ಬಂದು ಮತದಾನ ಮಾಡಿಕೊಳ್ಳುತ್ತಾರೆ.

ಕೊಪ್ಪಳ ಜಿಲ್ಲೆಯಲ್ಲಿ ಸಾವಿರಾರು ಹಿರಿಯ ಮತದಾರರು ಅಂಗವಿಕಲರಿದ್ದು, ಇವರು ಮತದಾನ ಕೇಂದ್ರಕ್ಕೆ ನಡೆದು ಬರಲು ಅಶಕ್ತರಾಗಿದ್ದಾರೆ. ಹೀಗಾಗಿ ಚುನಾವಣಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಅಂಗವಿಕಲರು, ಹಿರಿಯ ನಾಗರಿಕರಿಂದ ಮತದಾನ ಮಾಡಿಸುತ್ತಿದ್ದಾರೆ. ಹೀಗೆ ಮತದಾನ ಪ್ರಕ್ರಿಯೆಗೆ ಚುನಾವಣಾಧಿಕಾರಿಗಳು ಹೋಗಿದ್ದ ವೇಳೆಯೇ ವೃದ್ಧೆಯೊಬ್ಬಳು ಮೃತಪಟ್ಟ ವಿಚಿತ್ರ ಘಟನೆ ನಡೆದಿದೆ.

ಏ.29ಕ್ಕೆ ಪ್ರಧಾನಿ ಮೋದಿ ಹೊಸಪೇಟೆಗೆ ಆಗಮನ; ಎಸ್‌ಪಿಜಿ ತಂಡದಿಂದ ಭದ್ರತೆ ಪರಿಶೀಲನೆ

ಹೌದು. ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿರುವ ಹಿನ್ನೆಲೆ ಇಂದು ಸಹಾಯಕ ಚುನಾವಣಾ ಅಧಿಕಾರಿ ತಾಪಂ ಇಒ ದುಂಡಪ್ಪ ತುರಾದಿ, ಪಿಡಿಓ ಅಶೋಕ ರಾಂಪೂರ ಸಿಬ್ಬಂದಿ ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಹಿರಿಯ ನಾಗರಿಕರ ಮತದಾನ ಪ್ರಕ್ರಿಯೆ ನಡೆಸಿದ್ದಾರೆ. ಹಾಗೆಯೇ ವೃದ್ಧೆ ಪಾರ್ವತಮ್ಮ ಸಜ್ಜನ್(95) ಮನೆಗೆ ಬಂದಿರುವ ಅಧಿಕಾರಿಗಳು. ವಿಚಿತ್ರವೆಂದರೆ ಚುನಾವಣಾಧಿಕಾರಿಗಳು ಮನೆಗೆ ಬರುವ ವೇಳೆಯೇ ಪಾರ್ವತಮ್ಮ ಪ್ರಾಣಬಿಟ್ಟಿದ್ದಾಳೆ. ಇನ್ನೇನು ಕೆಲವೊತ್ತಿನ ಮತದಾನ ಮಾಡಬೇಕಿತ್ತು. ಆದರೆ ಚುನಾವಣಾಧಿಕಾರಿಗಳು ಮನೆಗೆ ಬರುವ ವೇಳೆ ವೃದ್ಧೆ ಪ್ರಾಣಬಿಟ್ಟಿದ್ದಾಳೆ. 

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯ ಒದಗಿಸಿದ್ದು, ಅದರಂತೆ ಜಿಲ್ಲೆಯ ಲೋಕಸಭಾ ವ್ಯಾಪ್ತಿಯಲ್ಲಿ ಏ. 25ರಿಂದ ಏ. 30ರ ವರೆಗೆ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ.

click me!