ಅಡ್ವಾಣಿ ಮುಂದಿನ ವಾಸ್ತವ್ಯ ಎಲ್ಲಿ?

By Web DeskFirst Published Apr 9, 2019, 3:48 PM IST
Highlights

ಈ ಬಾರಿ ಚುನಾವಣೆಯಲ್ಲಿ ಗಾಂಧಿನಗರದಿಂದ ಅಡ್ವಾಣಿಗಿಲ್ಲ ಟಿಕೆಟ್ | 70 ವರ್ಷಗಳಿಂದ ದೆಹಲಿ ರಾಜಕೀಯದಲ್ಲಿ ಪಳಗಿದವರು | ಚುನಾವಣೆ ನಂತರ ದೆಹಲಿಯಿಂದ ಎಲ್ಲಿಗೆ ತೆರಳಲಿದ್ದಾರೆ? 

ನವದೆಹಲಿ (ಏ. 09): 1952 ರಲ್ಲಿ ದಿಲ್ಲಿಗೆ ರಾಜಕೀಯಕ್ಕೆ ಬಂದ ನಂತರ ಬಹುತೇಕ 70 ವರ್ಷ ಅಡ್ವಾಣಿ ಕೇಂದ್ರ ದಿಲ್ಲಿಯ ಚಾಣಕ್ಯಪುರಿಯಲ್ಲಿಯೇ ಮನೆ ಮಾಡಿಕೊಂಡು ಇದ್ದಾರೆ.

ಸುಮಿತ್ರಾ ಮಹಾಜನ್‌ಗೆ ಟಿಕೆಟ್ ಕೊಡದಿರಲು ಕಾರಣವೇನು?

ಮೊದಲಿಗೆ ಕೆಲ ವರ್ಷ ಅಟಲ್‌ಜಿ ಮನೆಯಲ್ಲಿ ಇದ್ದ ಅಡ್ವಾಣಿ, ಜನತಾ ಸರ್ಕಾರದಲ್ಲಿ ಮಂತ್ರಿಯಾದ ನಂತರ ಪಂಡಾರಾ ರೋಡ್‌ನಲ್ಲಿ ಸರ್ಕಾರಿ ಬಂಗಲೆಯಲ್ಲಿದ್ದರು. ನಂತರ ಉಪ ಪ್ರಧಾನಿ ಆದಾಗ ಭದ್ರತಾ ಕಾರಣಗಳಿಂದ ಪ್ರಥ್ವಿರಾಜ್‌ ರೋಡ್‌ ನಿವಾಸಕ್ಕೆ ಬಂದವರು ಈಗಲೂ ಅಲ್ಲಿಯೇ ಇದ್ದಾರೆ.

ಮೋದಿ ಸಾಹೇಬ್ರ ನಿದ್ದೆಗೆಡಿಸಲು ಪ್ರಿಯಾಂಕ ಹೊಸ ತಂತ್ರ?

ಆದರೆ ಮೇ 23 ರ ನಂತರ ಅಡ್ವಾಣಿ ಸರ್ಕಾರಿ ಮನೆಯಲ್ಲಿ ಇರುವಂತಿಲ್ಲ. ಅವರ ಮಗಳ ಹೆಸರಲ್ಲಿ ಗುರುಗ್ರಾಮದಲ್ಲಿ ಖಾಸಗಿ ಮನೆ ಇದ್ದು, ಅಡ್ವಾಣಿ ಅಲ್ಲಿ ಶಿಫ್ಟ್‌ ಆಗಬಹುದಂತೆ. ಝಡ್‌ ಪ್ಲಸ್‌ ಸೆಕ್ಯುರಿಟಿ ಇರುವ ಅಡ್ವಾಣಿ ಅವರು ಖಾಸಗಿ ನಿವಾಸಕ್ಕೆ ಶಿಫ್ಟ್‌ ಆಗುವುದು ಭದ್ರತೆ ದೃಷ್ಟಿಯಿಂದ ಸ್ವಲ್ಪ ಕಿರಿಕಿರಿ ತರಬಹುದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಕಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

click me!