ಅಪಸ್ವರ ಎತ್ತಿದ್ದ 'ಕೈ' ನಾಯಕ ಪ್ರಜ್ವಲ್ ಪ್ರಚಾರಕ್ಕೆ ಸಾಥ್!

Published : Mar 29, 2019, 04:09 PM ISTUpdated : Mar 29, 2019, 04:31 PM IST
ಅಪಸ್ವರ ಎತ್ತಿದ್ದ 'ಕೈ' ನಾಯಕ ಪ್ರಜ್ವಲ್ ಪ್ರಚಾರಕ್ಕೆ ಸಾಥ್!

ಸಾರಾಂಶ

ಪ್ರಜ್ವಲ್ ರೇವಣ್ಣ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತೆರಳಿದ ನಂತರ ಕಾಂಗ್ರಸ್ ನಾಯಕರು ಹಾಸನದಲ್ಲಿ ದೋಸ್ತಿ ಪ್ರಚಾರಕ್ಕೆ ಮುಂದಾಗಿದ್ದಾರೆ.

ಹಾಸನ(ಮಾ. 29)  ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಪ್ರಚಾರಕ್ಕೆ ಜೊತೆಯಾದ ಕಾಂಗ್ರೆಸ್ ನಾಯಕರು ಸಾಥ್ ಕೊಟ್ಟಿದ್ದಾರೆ

ಬೇಲೂರು-ಅರಸೀಕೆರೆ ಭಾಗದಲ್ಲಿ ನಾಯಕರು ಜಂಟಿ ಪ್ರವಾಸ ಕೈಗೊಂಡಿದ್ದಾರೆ.  ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಜೊತೆ ಸೇರಿ ಮತಯಾಚನೆಗೆ ಕಾಂಗ್ರೆಸ್ ಮುಖಂಡ ಬಿ.ಶಿವರಾಂ ಸಹ ಜತೆಯಾಗಿದ್ದಾರೆ.

ಬಾಕಿ ಇದ್ದ 3 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ

ರಾಜ್ಯ ಸಮ್ಮಿಶ್ರ ಸರಕಾರ ಉತ್ತಮ ಯೋಜನೆ ಜಾರಿ ಮಾಡಿದೆ. ನನ್ನನ್ನು ಗೆಲ್ಲಿಸುವ ಮೂಲಕ ಸರಕಾರವನ್ನು ಬಲಗೊಳಿಸಿ  ಎಂದು ಪ್ರಜ್ವಲ್ ಮನವಿ ಮಾಡಿದರು.

ಪ್ರಜ್ವಲ್ ಯುವನಾಯಕ,  ನಮಗೆ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಅವರನ್ನು ಗೆಲ್ಲಿಸಲು ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಹೋಗುತ್ತಿವೆ ಎಂದು ಕಾಂಗ್ರೆಸ್ ಮುಖಂಡ ಶಿವರಾಂ ಹೇಳಿದರು.

ಈವರೆಗೆ ನಾವಿಬ್ಬರೂ ವಿರುದ್ಧ ದಿಕ್ಕಿನಲ್ಲಿದ್ದೆವು. ಈಗ ಜೊತೆಯಾಗಿ ಹೋಗುತ್ತಿದ್ದೇವೆ. ಆ ಮೂಲಕ ಜನರು, ಕಾರ್ಯ ಕರ್ತರಲ್ಲಿ ಏಕ ಭಾವನೆ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಅರಸೀಕೆರೆಯಲ್ಲೂ ಕೈ-ದಳ ಜಂಟಿಯಾಗಿಯೇ ಪ್ರಚಾರ ಮಾಡಿತು.ಸಚಿವ ಹೆಚ್.ಡಿ.ರೇವಣ್ಣ, ಬಿ.ಶಿವರಾಂ, ಅಭ್ಯರ್ಥಿ ಪ್ರಜ್ವಲ್ ಮೊದಲಾದವರು ಅರಿಸಿಕೇರೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 

 

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!