ಸದೃಢ ಸರ್ಕಾರ, ಬಲಿಷ್ಠ ಭಾರತ: 'ರಿಪಬ್ಲಿಕ್' ಜೊತೆ ಮೋದಿ ಸಂದಶನ!

By Web DeskFirst Published Mar 29, 2019, 4:05 PM IST
Highlights

2019ರ ಪ್ರಧಾನಿ ನರೇಂದ್ರ ಮೋದಿ ಮೊದಲ ಸಂದರ್ಶನ| ರಿಪಬ್ಲಿಕ್ ಮಿಡಿಯಾ ನೆಟವಕ್ಸ್F ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಸಂದರ್ಶನ| ಐದು ವರ್ಷಗಳ ಕಾಲ ಭಾರತ ನಡೆದು ಬಂದ ದಾರಿಯ ಅವಲೋಕನ| ಭಾರತದ ಕುರಿತು ವಿಶ್ವದ ಚಿಂತನೆ ಬದಲಾಗಿದೆ ಎಂದ ಪ್ರಧಾನಿ| 2019ರಲ್ಲಿ ಸದೃಢ ಸರ್ಕಾರಕ್ಕೆ ಜನತೆಯ ಆರ್ಶೀವಾದವಿದೆ ಎಂದ ಮೋದಿ| ಪೂರ್ಣ ಬಹುಮತದ ಸರ್ಕಾರ ರಚಿಸುವ ಭರವಸೆ ವ್ಯಕಪಡಿಸಿದ ಪ್ರಧಾನಿ| ಪ್ರತಿಪಕ್ಷಗಳ ರಾಜಕೀಯ ನೀತಿಗಳ ಮೇಲೆ ಮೋದಿ ಪ್ರಹಾರ| ಶತ್ರು ರಾಷ್ಟ್ರಗಳಿಗೆ ಭಾರತದ ಶಕ್ತಿ ಪ್ರದರ್ಶಿಸಿದ ಸಮಾಧಾನವಿದೆ ಎಂದ ಪ್ರಧಾನಿ|

ಮುಂಬೈ(ಮಾ.29): ಲೋಕಸಭೆ ಚುನಾವಣೆಗೆ ಇನ್ನೇನು ಕ್ಷಣಗಣನೆ ಶುರುವಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ, ಪತ್ರಕರ್ತ ಮತ್ತು ರಿಪಬ್ಲಿಕ್ ಮಿಡಿಯಾ ನೆಟವರ್ಕ್ಸ್ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಸಂದರ್ಶನ ನೀಡಿದ್ದಾರೆ.

| Lot of global planning is needed before an event like ASAT test: PM Narendra Modi to Arnab Goswami on . pic.twitter.com/OLoxmk8AdT

— Republic (@republic)

2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಟಿವಿ ಸಂದರ್ಶನ ಇದಾಗಿದ್ದು, ಕಳೆದ ಐದು ವರ್ಷದಲ್ಲಿ ಭಾರತ ನಡೆದು ಬಂದ ದಾರಿ ಮತ್ತು ಲೋಕಸಭಾ ಚುನಾವಣೆಯ ಕುರಿತು ಮೋದಿ ಮನಬಿಚ್ಚಿ ಮಾತನಾಡಿದ್ದಾರೆ.

| During Model Code of Conduct, can government say it's not on duty? : PM Narendra Modi pic.twitter.com/Kts0tCOLaw

— Republic (@republic)

ಸಂದರ್ಶನದಲ್ಲಿ ದೇಶದ ಜನತೆ 2019ರಲ್ಲಿ ಸದೃಢ ಮತ್ತ ಸಕ್ಷಮ ಸರ್ಕಾರದ ನಿರೀಕ್ಷೆಯಲ್ಲಿದ್ದು, ಜನತೆಯ ಆಶಯದಂತೆ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

| People have seen 30 years of instability and they want stability now: PM Narendra Modi on . pic.twitter.com/jqmGwrKGi3

— Republic (@republic)

2014ರಲ್ಲಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿಯವರೆಗೂ ಭಾರತ ನಡೆದು ಬಂದ ದಾರಿಯನ್ನು ವಿವರಿಸಿದ ಪ್ರಧಾನಿ, ಭಾರತದ ಕುರಿತು ವಿಶ್ವದ ಚಿಂತನೆ ಬದಲಾಗಿರುವುದು ತಮ್ಮ ಆಡಳಿತದ ಮಹತ್ವದ ಸಾಧನೆ ಎಂದು ಹೇಳಿದ್ದಾರೆ.

| People have seen 30 years of instability and they want stability now: PM Narendra Modi on . pic.twitter.com/jqmGwrKGi3

— Republic (@republic)

ಭ್ರಷ್ಟಾಚಾರ ಸಹಿಸದ, ಭಯೋತ್ಪಾದನೆ ಕುರಿತು ಶೂನ್ಯ ಸಹಿಷ್ಣುತೆ ಹೊಂದಿರುವ ಮತ್ತು ಸದೃಢ ಆರ್ಥಿಕತೆಯ ಬಲಿಷ್ಠ ಭಾರತದ ನಿರ್ಮಾಣ ಕಾರ್ಯ ಶುರುವಾಗಿದೆ ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದಾರೆ.

| The people of the country have made up their minds, they want a government with an absolute majority: Prime Minister Narendra Modi on pic.twitter.com/RTWmmPaDzd

— Republic (@republic)

ಅಂತೆಯೇ ಪುಲ್ವಾಮಾ ಆತ್ಮಹತ್ಯಾ ದಾಳಿ, ಬಾಲಾಕೊಟ್ ವಾಯುದಾಳಿಯ ಕುರಿತೂ ಮಾತನಾಡಿರುವ ಪ್ರಧಾನಿ, ಭಾರತವನ್ನು ದುರ್ಬಲಗೊಳಿಸುವ ಶತ್ರು ರಾಷ್ಟ್ರದ ಯಾವುದೇ ಹುನ್ನಾರವನ್ನು ತಡೆಯುವಲ್ಲಿ ಭಾರತ ಸಿದ್ಧವಾಗಿದೆ ಎಂದು ಗುಡುಗಿದರು.

| The BJP will get more seats than 2014 this time: Prime Minister Narendra Modi on pic.twitter.com/cPJlW7e5nU

— Republic (@republic)

ಇದೇ ವೇಳೆ ಪ್ರತಿಪಕ್ಷಗಳ ಮೇಲೆ ಹರಿಹಾಯ್ದಿರುವ ಪ್ರಧಾನಿ, ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗಲೂ ವಾಯುದಾಳಿಯ ಸಾಕ್ಷಿ ಕೇಳುವ ಮೂಲಕ ನಮ್ಮ ಸೈಬಿಕರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸಕ್ಕೆ ಕೈ ಹಾಕಿವೆ ಎಂದು ಕಿಡಿಕಾರಿದರು.

| They see statesmanship in Pakistan PM's statements and they doubt their own PM. The people should recognise these people: Prime Minister Narendra Modi on pic.twitter.com/HIIqYrMjya

— Republic (@republic)
click me!