ಚುನಾವಣೆ ಬಳಿಕ ಡಿಕೆಶಿಗೆ ಕಾಂಗ್ರೆಸ್‌ ಹೆಣ ಹೊರುವ ಕೆಲಸ ಕಾಯಂ: ಶೆಟ್ಟರ್‌

Published : Mar 26, 2019, 12:45 PM IST
ಚುನಾವಣೆ ಬಳಿಕ ಡಿಕೆಶಿಗೆ ಕಾಂಗ್ರೆಸ್‌ ಹೆಣ ಹೊರುವ ಕೆಲಸ ಕಾಯಂ: ಶೆಟ್ಟರ್‌

ಸಾರಾಂಶ

ಚುನಾವಣೆ ಬಳಿಕ ಡಿಕೆಶಿಗೆ ಕಾಂಗ್ರೆಸ್‌ ಹೆಣ ಹೊರುವ ಕೆಲಸ ಕಾಯಂ| ಡಿಕೆ ಶಿವಕುಮಾರ್ ಹೇಳಿಕೆಗೆ ಶೆಟ್ಟರ್ ತಿರುಗೇಟು

ಹೂವಿನಹಡಗಲಿ[ಮಾ.26]: ಕಾಂಗ್ರೆಸ್‌ ಪಕ್ಷದಲ್ಲಿ ಹೆಣ ಮತ್ತು ಪಲ್ಲಕ್ಕಿ ಹೊರುವವನು ನಾನೇ ಎಂದು ಅಹಂಕಾರದ ಮಾತುಗಳನ್ನಾಡಿರುವ ಸಚಿವ ಡಿ.ಕೆ. ಶಿವಕುಮಾರ್‌ಗೆ ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್‌ ಹೆಣ ಹೊರುವ ಕೆಲಸ ಕಾಯಂ ಆಗಲಿದೆ. ಅದನ್ನಾದರೂ ಜವಾಬ್ದಾರಿಯಿಂದ ನಿಭಾಯಿಸಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಲೇವಡಿ ಮಾಡಿದರು.

ಪಟ್ಟಣದಲ್ಲಿ ಸೋಮ​ವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಡಿಕೆಶಿಗೆ ಅ​ಧಿಕಾರದ ಅಮಲು ನೆತ್ತಿಗೇರಿದೆ. ಇದು ಬಹಳ ದಿನ ಉಳಿಯುವುದಿಲ್ಲ. ಸಂಡೂರಿನ ಕಾಂಗ್ರೆಸ್‌ ಸಮಾವೇಶದಲ್ಲಿ ಅವರ ಪಕ್ಷದ ಶಾಸಕರೇ ಗೈರಾಗಿದ್ದು, ಬರುವ ದಿನಗಳಲ್ಲಿ ಅವರ ಪಕ್ಷದವರೇ ಅವರಿಗೆ ಪಾಠ ಕಲಿಸುತ್ತಾರೆಂದು ಹೇಳಿದರು.

ನಿನ್ನ ಪಲ್ಲಕ್ಕಿ, ಹೆಣ ಎರಡನ್ನೂ ನಾನೆ ಹೊರ್ತಿನಿ: ಡಿಕೆಶಿ ಹೇಳಿಕೆಗೆ ನಾಗೇಂದ್ರ ಗಡಗಡ!

ಡಿಕೆಶಿಯ ಅಂತ್ಯ ಬಳ್ಳಾರಿಯಿಂದಲೇ ಶುರುವಾಗಲಿದೆ. ಡಿಕೆಶಿ ಕಾಂಗ್ರೆಸ್‌ ಪಲ್ಲಕ್ಕಿ ಹೊರುವುದಂತೂ ಕನಸಿನ ಮಾತು. ಬರಿ ಕಾಂಗ್ರೆಸ್‌ ಹೆಣ ಹೊರಬೇಕಾಗುತ್ತದೆ ಎಂದು ಕಾಲೆಳೆದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!