ರಾಹುಲ್ ಶಿವನ ಅವತಾರ ಅಂತಾದ್ರೆ ವಿಷ ಹಾಕಿ ನೋಡಿ: ಬಿಜೆಪಿ ಸಚಿವ!

Published : Mar 26, 2019, 12:31 PM ISTUpdated : Mar 26, 2019, 12:55 PM IST
ರಾಹುಲ್ ಶಿವನ ಅವತಾರ ಅಂತಾದ್ರೆ ವಿಷ ಹಾಕಿ ನೋಡಿ: ಬಿಜೆಪಿ ಸಚಿವ!

ಸಾರಾಂಶ

ರಾಹುಲ್ ಗಾಂಧಿ ಶಿವನ ಅವತಾರ ಎಂದ ಕಾಂಗ್ರೆಸ್ ನಾಯಕ| ವಿಷ ಕುಡಿದು ಸಾಬೀತು ಮಾಡಿ ಎಂದ ಬಿಜೆಪಿ ನಾಯಕ| 500 ಗ್ರಾಂ ವಿಷ ಕುಡಿದು ಸಾಬೀತುಪಡಿಸಲಿ ಎಂದ ಗಣಪತ್ ಸಿನ್ಹಾ ವಾಸವಾ| 'ಭಾರತದಲ್ಲಿ ಲೋಕಸಭಾ ಚುನಾವಣೆ ಇದ್ದರೆ ಪಾಕಿಸ್ತಾನದಲ್ಲಿ 'ಶೋಕ ಸಭಾ' ವಾತಾವರಣ ಇದೆ'| ಚುನಾವಣೆ ಮುಂದೂಡಿ ಪಾಕಿಸ್ತಾನಕ್ಕೆ ಪಾಠ ಕಲಿಸುವಂತೆ ಸಲಹೆ ನೀಡಿದ ವಾಸವಾ|

ಅಹಮದಾಬಾದ್(ಮಾ.26): ರಾಹುಲ್ ಗಾಂಧಿ ಶಿವನ ಅವತಾರ ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡನೋರ್ವನ ಹೇಳಿಕೆಗೆ ಗುಜರಾತ್ ಸಚಿವ ಗಣಪತ್ ಸಿನ್ಹಾ ವಾಸವಾ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಶಿವನ ಅವತಾರ ಅನ್ನೋದಾದರೆ ರಾಹುಲ್ ಗಾಂಧಿಗೆ ವಿಷ ಹಾಕಿ ಪರೀಕ್ಷೆ ಮಾಡಬೇಕು ಎಂದು ವಾಸವಾ ವ್ಯಂಗ್ಯವಾಡಿದ್ದಾರೆ. ವಿಶ್ವದ ಒಳಿತಿಗಾಗಿ ಶಿವ ವಿಷ ಕುಡಿದು ವಿಷಕಂಠ ಎನ್ನಿಸಿಕೊಂಡ, ಅದೇ ರೀತಿ ರಾಹುಲ್ 500 ಗ್ರಾಂ ವಿಷ ಕುಡಿದಾದರೂ ತಾನು ಶಿವನ ಅವತಾರ ಎಂದು ಸಾಬೀತುಪಡಿಸಬೇಕು ಎಂದು ವಾಸವಾ ಹೇಳಿದ್ದಾರೆ.

ಭಾರತದಲ್ಲಿ ಲೋಕಸಭಾ ಚುನಾವಣೆ ಇದ್ದರೆ ಪಾಕಿಸ್ತಾನದಲ್ಲಿ 'ಶೋಕ ಸಭಾ' ವಾತಾವರಣ ಇದೆ ಎಂದಿರುವ ವಾಸವಾ, ಅಗತ್ಯ ಬಿದ್ದರೆ ಲೋಕಸಭೆ ಚುನಾವಣೆಯನ್ನು ಮುಂದೂಡಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಚುನಾವಣೆ ಸುದ್ದಿಗಳು

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!