ಏನಾಗಿಲ್ಲ, ಅದು ಮೊಬೈಲ್ ಲೈಟ್ ಅಷ್ಟೇ: ಗೃಹ ಸಚಿವಾಲಯ!

Published : Apr 11, 2019, 07:00 PM IST
ಏನಾಗಿಲ್ಲ, ಅದು ಮೊಬೈಲ್ ಲೈಟ್ ಅಷ್ಟೇ: ಗೃಹ ಸಚಿವಾಲಯ!

ಸಾರಾಂಶ

ಹೆದರಬೇಡಿ ರಾಹುಲ್ ಗಾಂಧಿಗೆ ಏನಾಗಲ್ಲ ಎಂದ ಗೃಹ ಇಲಾಖೆ| ಅಮೇಥಿಯಲ್ಲಿ ಭದ್ರತಾ ಲೋಪವಾಗಿಲ್ಲ ಎಂದ ಕೇಂದ್ರ ಗೃಹ ಇಲಾಖೆ| ರಾಹುಲ್ ಮೇಲೆ ಬಿದ್ದಿದ್ದು ಪಕ್ಷದ ಫೋಟೋಗ್ರಾಫರ್ ಮೊಬೈಲ್ ಫೋನ್ ಲೈಟ್| ವಿಶೇಷ ರಕ್ಷಣಾ ಪಡೆ ತನಿಖೆಯಿಂದ ಸತ್ಯ ಬಹಿರಂಗ| ಕೇಂದ್ರ ಗೃಹ ಇಲಾಖೆ ವಕ್ತಾರ ಭರತ್ ಭೂಷಣ್ ಮಾಹಿತಿ|

ನವದೆಹಲಿ(ಏ.11): ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂಧಿ ಅಮೇಥಿಯಲ್ಲಿ ನಾಮಪತ್ರ  ಸಲ್ಲಿಸುವಾಗ ಭದ್ರತಾ ಲೋಪವಾಗಿದೆ ಎಂಬ ಕಾಂಗ್ರೆಸ್ ವಾದವನ್ನು ಕೇಂದ್ರ ಗೃಹ ಸಚಿವಾಲಯ ಅಲ್ಲಗಳೆದಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಇಲಾಖೆಯ ವಕ್ತಾರ ಭರತ್ ಭೂಷಣ್, ರಾಹುಲ್ ಮೇಲೆ ಹಸಿರು ಬೆಳಕು ಪ್ರದರ್ಶಿತವಾಗಿರುವುದು ಪಕ್ಷದ ಛಾಯಾಗ್ರಾಹಕರೊಬ್ಬರು ಬಳಸಿದ ಮೊಬೈಲ್ ಫೋನ್‌ನಿಂದ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ಕುರಿತು ವಿಶೇಷ ರಕ್ಷಣಾ ಪಡೆ(ಎಸ್‌ಜಿಪಿ) ಇದರ ಬಗ್ಗೆ ತನಿಖೆ ಮಾಡಿದ್ದು, ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಭರತ್ ಭೂಷಣ್ ತಿಳಿಸಿದ್ದಾರೆ.

ಅಲ್ಲದೇ ಭದ್ರತಾ ಲೋಪ ಕುರಿತು ಕಾಂಗ್ರೆಸ್ ಪಕ್ಷ ಬರೆದಿದೆ ಎನ್ನಲಾದ ಪತ್ರ ಇದುವರೆಗೂ ಗೃಹ ಇಲಾಖೆಗೆ ತಲುಪಿಲ್ಲ ಎಂದು ಭರತ್ ಭೂಷಣ್ ಸ್ಪಷ್ಟಪಡಿಸಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!