Asianet Suvarna News Asianet Suvarna News

ರಾಹುಲ್ ಗಾಂಧಿ ಹತ್ಯೆ ಯತ್ನ?: ಅಮೇಥಿಯಲ್ಲಿ ಬಿದ್ದ ಲೇಸರ್ ಬೆಳಕು!

ರಾಹುಲ್ ಗಾಂಧಿ ಹತ್ಯೆಗೆ ನಡಿತಿದೆಯಾ ಸಂಚು?| ಅಮೇಥಿಯಲ್ಲಿ ರಾಹುಲ್ ಮೈಮೇಲೆ ಲೇಸರ್ ಬೆಳಕು| ಸ್ನೈಪರ್ ಗನ್ ಬಳಸಿ ರಾಹುಲ್ ಹತ್ಯೆ ಯತ್ನ ಎಂದ ಕಾಂಗ್ರೆಸ್| ಒಟ್ಟು ಏಳು ಬಾರಿ ರಾಹುಲ್ ಹತ್ಯೆಗೆ ಯತ್ನಿಸಲಾಗಿದೆ ಎಂಬ ಆರೋಪ| ರಾಹುಲ್ ಹತ್ಯೆ ಯತ್ನ ನಡೆದಿದೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ| ಅಮೇಥಿ ರೋಡ್ ಶೋ ವೇಳೆ ರಾಹುಲ್ ಮೇಲೆ ಸ್ನೈಪರ್ ಗನ್ ಲೇಸರ್ ಬೆಳಕು|

Sniper Gun Aimed At Rahul Gandhi Accuses Congress
Author
Bengaluru, First Published Apr 11, 2019, 1:35 PM IST
  • Facebook
  • Twitter
  • Whatsapp

ಅಮೇಥಿ(ಏ.11): 2019ರ ಲೋಕಸಭೆ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ಪ್ರಕ್ರಿಯೆ ಶುರುವಾಗಿದೆ. ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹತ್ಯೆಗೆ ಸಂಚು ನಡೆದಿದೆ ಎಂಬ ಕಾಂಗ್ರೆಸ್ ಆರೋಪ ದೇಶವನ್ನು ಬೆಚ್ಚಿ ಬೀಳಿಸಿದೆ. 

"

ನಿನ್ನೆಯಷ್ಟೇ ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಿದ್ದ ರಾಹುಲ್ ಗಾಂಧಿ ಪ್ರಚಾರದ ವೇಳೆ ಸ್ನೈಪರ್ ಗನ್ ಲೇಸರ್ ಬೆಳಕು ರಾಹುಲ್ ಗಾಂಧಿ ಅವರ ಮೇಲೆ ಬಿದ್ದಿದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.

ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿರುವ ಕಾಂಗ್ರೆಸ್, ಇದುವರೆಗೂ ಒಟ್ಟು 7 ಬಾರಿ ರಾಹುಲ್ ಗಾಂಧಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ತಿಳಿಸಿದೆ.

ಅಮೇಥಿಯಲ್ಲಿ ನಡೆದ ರಾಹುಲ್ ಗಾಂಧಿ ರೋಡ್ ಶೋ ವೇಳೆ ಸ್ನೈಪರ್ ಗನ್ ಮೂಲಕ ರಾಹುಲ್ ಹತ್ಯೆಗೆ ಸಂಚು ರೂಪಿಸಲಾಗಿದ್ದು, ಹಲವು ಬಾರಿ ರಾಹುಲ್ ಮೇಲೆ ಲೇಸರ್ ಬೆಳಕು ಬಿದ್ದಿರುವುದು ಆತಂಕ ಮೂಡಿಸಿದೆ ಎಂದು ಕಾಂಗ್ರೆಸ್ ವಾದಿಸಿದೆ.

ಆದರೆ ಕಾಂಗ್ರೆಸ್ ಈ ಕುರಿತು ಯಾವುದೇ ಸಾಕ್ಷ್ಯ ನೀಡಿಲ್ಲವಾದರೂ, ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ ಜೀವಕ್ಕೆ ಅಪಾಯವಿದೆ ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರದ ಭದ್ರತೆ ಕುರಿತು ಅನುಮಾನ ವ್ಯಕ್ತಪಡಿಸಿದೆ.

ದೇಶದಲ್ಲಿ ಏ.11ರಿಂದ ಮೇ19ರವರೆಗೆ ಏಳು ಹಂತಗಳಲ್ಲಿ ಮತದಾನ, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios