ನಾವು ಸೋತರೆ ಸರ್ಕಾರ ಇರುತ್ತಾ..? - ನಾನು ಮಂತ್ರಿಯಾಗಿಲ್ಲ. ಮುಖ್ಯಮಂತ್ರಿ ಆಗಿರೋದು ಕುಮಾರಸ್ವಾಮಿ| ದಳಪತಿಗಳು ಮುಂದೆಯೇ ಸಿದ್ದರಾಮಯ್ಯ ಹೀಗೆ ಹೇಳಿದ್ಯಾಕೆ.?| ಸಿದ್ದರಾಮಯ್ಯ ಮಾತಿನ ಹಿಂದಿನ ಮರ್ಮವಾದ್ರೂ ಏನು...? ಇಲ್ಲಿದೆ ಸಿದ್ದು ಮಾತಿನ ಒಟ್ಟಾರೆ ತಾತ್ಪರ್ಯ.
ಮೈಸೂರು, [ಏ.14]: ಮಂಡ್ಯ ಹಾಗೂ ಮೈಸೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಪ್ರತಿಷ್ಠೆಯಾಗಿದೆ. ಆದ್ರೆ ಈ ಎರಡೂ ಕ್ಷೇತ್ರಗಳಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲದಿರುವುದು ಉಭಯ ನಾಯಕರಿಗೆ ತಲೆನೋವಾಗಿದೆ.
ಮಂಡ್ಯದಲ್ಲಿ ಪುತ್ರ ನಿಖಿಲ್ ಗೆಲ್ಲಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಇನ್ನಿಲ್ಲದ ಕಸರತ್ತು ನಡೆಸಿದ್ದರೆ, ಮತ್ತೊಂದೆಡೆ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ತಮ್ಮ ಆಪ್ತ ವಿಜಯ್ ಶಂಕರ್ ನನ್ನು ಗೆಲ್ಲಿಸಲು ಪಣತೊಟ್ಟಿದ್ದಾರೆ. ಆದ್ರೆ ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಮಧ್ಯೆ ಒಮ್ಮತ ಮೂಡಿಬರುತ್ತಿಲ್ಲ.
ಮೈಸೂರಲ್ಲಿ ’ಕೈ’ ಅಭ್ಯರ್ಥಿ ಸೋತರೆ ನಾನು ಹೊಣೆಯಲ್ಲ; ಸಿದ್ದರಾಮಯ್ಯಗೆ ಜಿಟಿಡಿ ಶಾಕ್!
ನಿಖಿಲ್ ವಿರುದ್ಧ ಚಲುವರಾಯಸ್ವಾಮಿ ಸೇರಿದಂತೆ ಇನ್ನು ಕೆಲ ನಾಯಕರು ಬಂಡಾಯ ಸಾರಿದ್ದರೆ, ಮತ್ತೊಂದೆಡೆ ಮೈಸೂರಿನಲ್ಲಿ ಜೆಡಿಎಸ್ ಮುಖಂಡರು ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದ್ದಾರೆ. ಅಷ್ಟೇ ಅಲ್ಲದೇ ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ಅದಕ್ಕೆ ನಾವು ಹೊಣೆ ಅಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಬಹಿರಂಗವಾಗಿಯೇ ಹೇಳಿದ್ದರೆ, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್ ಕೈ ಕೊಟ್ರೆ, ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ನಾವು ಕೈ ಕೊಡ್ತೇವೆ ಎಂದು ಮತ್ತೋರ್ವ ಸಚಿವ ಸಾರಾ ಮಹೇಶ್ ಹೇಳಿದ್ದರು.
‘ಮೈಸೂರು ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆ, ನಮಗೆ ಮಂಡ್ಯ ಪ್ರತಿಷ್ಠೆ’!
ಕಾದು ದಳಪತಿಗಳ ಮೇಲೆ ಬಾಣ ಬಿಟ್ಟ ಸಿದ್ದು
ಜಿಟಿಡಿ, ಸಾ.ರಾ.ಮಹೇಶ್ ಗೆ ಪರೋಕ್ಷ ವಾರ್ನಿಂಗ್ ..!
ಸಿದ್ದು ಮಾತಿನ ತಾತ್ಪರ್ಯವೇನು..?
ಅಂದ್ರೆ ಮೈಸೂರಿನಲ್ಲಿ ಸಾರಾ ಮಹೇಶ್ ಹಾಗೂ ಜಿ.ಟಿ.ದೇವೇಗೌಡ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಒಳಗೊಳಗೆ ಕತ್ತಿ ಮಸೆಯುವುದು ಬಿಟ್ಟು ನಿಯತ್ತಾಗಿ ಕೆಲಸ ಮಾಡುವುದರ ಜತೆಗೆ ವಿಜಯ್ ಶಂಕರ್ ಅವರನ್ನು ಗೆಲ್ಲಿಸಬೇಕು ಎನ್ನುವುದು ಸಿದ್ದರಾಮಯ್ಯ ಅವರ ಈ ಮಾತಿನ ಒಟ್ಟಾರೆ ತಾತ್ಪರ್ಯವಾಗಿದೆ.