
ಮೈಸೂರು(ಏ. 14) ನಾನು ಮತ್ತೆ ಚಾಮುಂಡೇಶ್ವರಿಯಲ್ಲಿ ಚುನಾವಣೆ ನಿಲ್ಲುವುದಿಲ್ಲ. ನೀವೆಲ್ಲ ಈ ಕ್ಷೇತ್ರವನ್ನ ಅಭಿವೃದ್ಧಿ ಮಾಡಬೇಕು ಎನ್ನುತ್ತ ಬಹಿರಂಗ ವೇದಿಕೆಯಲ್ಲೆ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಹಾಗಾಗಿ ಸೋಲಿನ ಮೂಲಕವೇ ಸಿದ್ದರಾಮಯ್ಯ ಕ್ಷೇತ್ರ ಬಿಟ್ಟು ಕೊಟ್ಟರಾ ಎಂಬ ಪ್ರಶ್ನೆ ಮೂಡಿದೆ. ಜಿಡಿ ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವೆ ಅಪಸ್ವರಗಳು ಕೇಳಿ ಬಂದಿದ್ದವು.
ಚಾಮುಂಡೇಶ್ವರಿಯಲ್ಲಿ ಋಣ ಮುಗಿಸಿದ್ರಾ ಸಿದ್ದರಾಮಯ್ಯ? ತಾವು ಚುನಾವಣೆ ನಿಲ್ಲೋಲ್ಲ ಅಂತ ನಿರ್ಧಾರ ಮಾಡಿಯೇ ಜಿ.ಟಿ.ದೇವೇಗೌಡ ಜತೆ ವೇದಿಕೆಯಲ್ಲಿ ಕಾಣಿಸಿಕೊಂಡರಾ? ಎಂಬ ಚರ್ಚೆಗೂ ಮೈಸೂರಿನ ಪ್ರಚಾರ ಕಾರಣವಾಗಿದೆ.