ನಿಖಿಲ್ ಎಲ್ಲಿದ್ಯಪ್ಪ..? ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ

Published : Apr 14, 2019, 04:50 PM IST
ನಿಖಿಲ್ ಎಲ್ಲಿದ್ಯಪ್ಪ..? ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ

ಸಾರಾಂಶ

ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾದ ಬಳಿಕ ನಿಖಿಲ್ ಎಲ್ಲಿದ್ಯಪ್ಪ ಎಂಬ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ನಿಖಿಲ್ ಎಲ್ಲಿದ್ಯಪ್ಪ ಎನ್ನುವ ಪ್ರಶ್ನೆಗೆ ಸ್ವತಃ ಸಿಎಂ ಕುಮಾರಸ್ವಾಮಿ ಉತ್ತರಿಸಿದ್ದಾರೆ.

ಮಂಡ್ಯ,, (ಏ.14): ಇಂದು [ಬಾನುವಾರ] ಸಿಎಂ ಕುಮಾರಸ್ವಾಮಿ ತಮ್ಮ ಮಗನ  ನಿಖಿಲ್​​​ ಪರ ಕೆ.ಆರ್. ನಗರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಪ್ರಚಾರ ನಡೆಸಿದರು. 

ಈ  ವೇಳೆ ನಿಖಿಲ್ ಎಲ್ಲಿದ್ಯಪ್ಪ, ಎಂದು ಬಹಳ ಚರ್ಚೆಯಾಗ್ತಿದೆ. ಈ ಬಗ್ಗೆ ಸ್ವಲ್ಪ ಮಾತನಾಡಿ ಎಂದು ಓರ್ವ ಯುವಕ ಸಿಎಂಗೆ ಕೇಳಿದ. ಇದಕ್ಕೆ ಪ್ರತಕ್ರಿಯಿಸಿದ ಕುಮಾರಸ್ವಾಮಿ, ನಿಖಿಲ್ ಎಲ್ಲಿದ್ಯಪ್ಪ ಅಂದ್ರೆ ನಮ್ಮ ಹೃದಯಲ್ಲಿದ್ದಾನೆ ಅಂತಾ ಹೇಳಬೇಕು ಎಂದು ಯುವಕರಿಗೆ ತಿಳಿಸಿದರು.

ಯುವಕರು ಈ ಟ್ರೋಲ್​ಗಳ ಬಗ್ಗೆ ತಲೆ ಕಡೆಸಿಕೊಳ್ಳಬೇಡಿ. ಆ ಟ್ರೋಲ್ ಮಾಡುವವರು ಯಾರು..? ನಿಖಿಲ್ ಎಲ್ಲಿದ್ಯಪ್ಪ ಎಂದರೆ ನಮ್ಮ ಹೃದಯದಲ್ಲಿದ್ದಾನೆ ಎನ್ನಬೇಕು ತಿಳಿ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಒಂದು ತಂಡ ಕೆಟ್ಟ ರೀತಿಯಲ್ಲಿ ಈ ರೀತಿ ಬಿಂಬಿಸ್ತಿದೆ.  ಈ ರೀತಿಯ ಕೆಟ್ಟ ಅಭಿರುಚಿ ಇಟ್ಟುಕೊಂಡಿರೋದು ಸಮಾಜ ಹಾಳು ಮಾಡುವಂಥದ್ದು. ಇಂತಹವರ ಬಗ್ಗೆ ನಾವು ಬಹಳ ಎಚ್ಚರಿಕೆಯಿಂದ ಇರಬೇಕು ಎಂದ ಸಿಎಂ ಹೇಳಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!