
ಬೆಂಗಳೂರು[ಏ.09]: ಕರ್ನಾಟಕ ಲೋಕಸಭಾ ಅಖಾಡದಲ್ಲಿ ಒಟ್ಟು 478 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮೊದಲ ಹಂತದಲ್ಲಿ 241 ಮಂದಿ ಅಖಾಡದಲ್ಲಿದ್ದರೆ, ಎರಡನೇ ಹಂತಕ್ಕೆ ನಡೆಯುವ ಚುನಾವಣೆಯಲ್ಲಿ 237 ಮಂದಿ ಕಣದಲ್ಲಿದ್ದಾರೆ. ಚುನಾವಣೆಗೆ ಸ್ಪರ್ಧಿಸುತ್ತಿರುವ ಒಟ್ಟು ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಚುನಾವಣಾ ಆಯೋಗವು ಸೋಮವಾರ ಪ್ರಕಟಿಸಿದೆ. ಹಾಗಿದ್ದರೆ ಲೋಕಸಭೆಗೆ ಪ್ರವೇಶಿಸಲು ರೇಸ್ ನಲ್ಲಿರುವ ಅಭ್ಯರ್ಥಿಗಳ ವಿದ್ಯಾರ್ಹತೆ ಏನು? ಅವರು ಪಡೆದ ಅತ್ಯುನ್ನತ ಶೈಕ್ಷಣಿಕ ಅರ್ಹತೆ ಏನು? ಇಲ್ಲಿದೆ ಪ್ರಮುಖ ಅಭ್ಯರ್ಥಿಗಳ ವಿದ್ಯಾರ್ಹತೆ ವಿವರ
ಸುಮಲತಾ ಅಂಬರೀಶ್[ಪಕ್ಷೇತರ]: SSLC
ನಿಖಿಲ್ ಕುಮಾರಸ್ವಾಮಿ[ಜೆಡಿಎಸ್]: BBA(ವ್ಯವಹಾರ ಆಡಳಿತದಲ್ಲಿ ಪದವಿ]
ಎ. ಮಂಜು[ಬಿಜೆಪಿ]: BA, LLB
ಪ್ರಜ್ವಲ್ ರೇವಣ್ಣ[ಜೆಡಿಎಸ್]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]
ಜಿ. ಎಸ್. ಬಸವರಾಜು[ಬಿಜೆಪಿ]: B.Sc, B.L
ಎಚ್. ಡಿ. ದೇವೇಗೌಡ[ಜೆಡಿಎಸ್]: ಡಿಪ್ಲೊಮಾ ಸಿವಿಲ್ ಇಂಜಿನಿಯರಿಂಗ್
ಡಿ. ವಿ. ಸದಾನಂದಗೌಡ[ಬಿಜೆಪಿ]: LLB
ಕೃಷ್ಣ ಬೈರೇಗೌಡ[ಕಾಂಗ್ರೆಸ್]: ಅಂತರಾಷ್ಟ್ರೀಯ ವ್ಯವಹಾರದಲ್ಲಿ ಸ್ನಾತಕೋತ್ತರ ಪದವಿ
ಪಿ. ಸಿ. ಮೋಹನ್[ಬಿಜೆಪಿ]: ಪಿಯುಸಿ
ರಿಜ್ವಾನ್ ಅರ್ಷದ್[ಕಾಂಗ್ರೆಸ್]: B.Com
ಪ್ರಕಾಶ್ ರಾಜ್[ಪಕ್ಷೇತರ]: B.Com
ತೇಜಸ್ವಿ ಸೂರ್ಯ[ಬಿಜೆಪಿ]: BAL, LLB[ಕಾನೂನು ಪದವಿ]
ಬಿ. ಕೆ. ಹರಿಪ್ರಸಾದ್[ಕಾಂಗ್ರೆಸ್]: B.Com
ಶೋಭಾ ಕರಂದ್ಲಾಜೆ[ಬಿಜೆಪಿ]: ಸೋಶಿಯಲ್ ವರ್ಕ್ ಹಾಗೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
ಪ್ರಮೋದ್ ಮಧ್ವರಾಜ್[ಜೆಡಿಎಸ್]: ಪಿಯುಸಿ
ನಳಿನ್ ಕುಮಾರ್ ಕಟೀಲ್[ಬಿಜೆಪಿ]: SSLC
ಮಿಥುನ್ ರೈ[ಕಾಂಗ್ರೆಸ್]: BBM(ವ್ಯವಹಾರ ಆಡಳಿತದಲ್ಲಿ ಪದವಿ]
ಪ್ರತಾಪ್ ಸಿಂಹ[ಬಿಜೆಪಿ]: MCJ(ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ]
ಸಿ.ಎಚ್.ವಿಜಯಶಂಕರ್[ಕಾಂಗ್ರೆಸ್]: BA
ವಿ. ಶ್ರೀನಿವಾಸ ಪ್ರಸಾದ್[ಬಿಜೆಪಿ]: MA
ಧ್ರುವ ನಾರಾಯಣ[ಕಾಂಗ್ರೆಸ್]: M.Sc(ಕೃಷಿ ವಿಜ್ಞಾನದಲ್ಲಿ ಪದವಿ]
ಬಿ. ಎನ್. ಬಚ್ಚೇಗೌಡ[ಬಿಜೆಪಿ]: B.Sc, BL
ವೀರಪ್ಪ ಮೊಯ್ಲಿ[ಕಾಂಗ್ರೆಸ್]: BA, BL
ಮುನಿಸ್ವಾಮಿ[ಬಿಜೆಪಿ]: PUC
ಕೆ. ಎಚ್. ಮುನಿಯಪ್ಪ[ಕಾಂಗ್ರೆಸ್]: ಕಾನೂನು ಪದವಿ
ಅಶ್ವತ್ಥ ನಾರಾಯಣ[ಬಿಜೆಪಿ]: SSLC
ಡಿ.ಕೆ.ಸುರೇಶ್[ಕಾಂಗ್ರೆಸ್]: PUC
ಎ. ನಾರಾಯಣಸ್ವಾಮಿ[ಬಿಜೆಪಿ]: BA
ಬಿ. ಎನ್. ಚಂದ್ರಪ್ಪ[ಕಾಂಗ್ರೆಸ್]: MA[ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ]
ಅಣ್ಣಾಸಾಹೇಬ್ ಜೊಲ್ಲೆ[ಬಿಜೆಪಿ]: PUC
ಪ್ರಕಾಶ್ ಹುಕ್ಕೇರಿ[ಕಾಂಗ್ರೆಸ್]: SSLC
ಸುರೇಶ್ ಅಂಗಡಿ[ಬಿಜೆಪಿ]: B.Com, LLB
ಡಾ. ವಿರೂಪಾಕ್ಷಪ್ಪ ಸಾಧುನವರ್[ಕಾಂಗ್ರೆಸ್]: MBBS
ಗದ್ದಿಗೌಡರ್[ಬಿಜೆಪಿ]: BA, LLB
ವೀಣಾ ಕಾಶೆಪ್ಪನವರ್[ಕಾಂಗ್ರೆಸ್]: B.Com
ರಮೇಶ್ ಜಿಗಜಿಣಗಿ[ಬಿಜೆಪಿ]: BA
ಡಾ.ಸುನೀತಾ ಚೌವ್ಹಣ್[ಜೆಡಿಎಸ್]: Ph.D
ಉಮೇಶ್ ಜಾಧವ್[ಬಿಜೆಪಿ]: MS
ಮಲ್ಲಿಕಾರ್ಜುನ ಖರ್ಗೆ[ಕಾಂಗ್ರೆಸ್]: BA, LLB
ರಾಜಾ ಅಮೇಶ್ವರ ನಾಯಕ್[ಬಿಜೆಪಿ]: BA, LLB
ಬಿ. ವಿ. ನಾಯಕ್[ಕಾಂಗ್ರೆಸ್]: LLB
ಭಗವಂತ ಖೂಬಾ[ಬಿಜೆಪಿ]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]
ಈಶ್ವರ್ ಖಂಡ್ರೆ [ಕಾಂಗ್ರೆಸ್]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]
ಕರಡಿ ಸಂಗಣ್ಣ[ಬಿಜೆಪಿ]: SSLC
ರಾಜಶೇಖರ್ ಹಿಟ್ನಾಳ್[ಕಾಂಗ್ರೆಸ್]: PUC
ವೈ. ದೇವೇಂದ್ರಪ್ಪ[ಬಿಜೆಪಿ]: 7ನೇ ತರಗತಿ
ವಿ. ಎಸ್. ಉಗ್ರಪ್ಪ[ಕಾಂಗ್ರೆಸ್]: ಕಾನೂನು ಪದವಿ
ಶಿವಕುಮಾರ್ ಉದಾಸಿ[ಬಿಜೆಪಿ]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]
ದ್ಯಾವನಗೌಡ ಪಾಟೀಲ್[ಕಾಂಗ್ರೆಸ್]: B.E[ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ]
ಪ್ರಹ್ಲಾದ್ ಜೋಶಿ[ಬಿಜೆಪಿ]: BA
ವಿನಯ್ ಕುಲಕರ್ಣಿ[ಕಾಂಗ್ರೆಸ್]: B.Sc
ಅನಂತ ಕುಮಾರ್ ಹೆಗಡೆ[ಬಿಜೆಪಿ]: PUC
ಆನಂದ್ ಅಸ್ನೋಟಿಕರ್[ಜೆಡಿಎಸ್]: MA
ಜಿ.ಎಂ.ಸಿದ್ದೇಶ್ವರ್[ಬಿಜೆಪಿ]: SSLC
ಎಚ್. ಬಿ. ಮಂಜಪ್ಪ[ಕಾಂಗ್ರೆಸ್]: SSLC
ಬಿ.ವೈ.ರಾಘವೇಂದ್ರ[ಬಿಜೆಪಿ]: BBM
ಮಧು ಬಂಗಾರಪ್ಪ[ಜೆಡಿಎಸ್]: BA
ಅಭ್ಯರ್ಥಿಗಳ ಈ ಶೈಕ್ಷಣಿಕ ವಿದ್ಯಾರ್ಹತೆ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಆಧಾರದಲ್ಲಿ ನಮೂದಿಸಲಾಗಿದೆ.
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...