ಲೋಕಸಭೆ ಎಲೆಕ್ಷನ್ ಹೊಸ್ತಿಲಲ್ಲೇ ಬಿಜೆಪಿಗೆ 37 ಮುಖಂಡರು ರಾಜೀನಾಮೆ

By Web DeskFirst Published Apr 9, 2019, 4:15 PM IST
Highlights

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬರೋಬ್ಬರಿ 37  ಬಿಜೆಪಿ ಮುಖಂಡರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ.

ಕೊಹಿಮಾ(ಏ.09): ಲೋಕಸಭೆ ಚುನಾವಣೆ ಮತದಾನದ ದಿನ ಸಮೀಪಿಸುತ್ತಿದ್ದಂತೆ ನಾಗಾಲ್ಯಾಂಡ್ ನಲ್ಲಿ ಪಕ್ಷಾಂತರ ಪರ್ವ ಚುರುಕು ಪಡೆದಿದೆ. 

ಹಿರಿಯ, ಕಿರಿಯ ನಾಯಕರು ಒಳಗೊಂಡ ದೊಡ್ಡ ತಂಡವೊಂದು ಬಿಜೆಪಿ ತೊರೆದಿದ್ದು, ಕೇಸರಿಪಡೆಗೆ ಭಾರೀ ಹಿನ್ನಡೆಯಾಗಿದೆ. ನಾಗಾಲ್ಯಾಂಡ್ ಬಿಜೆಪಿಯ ಪ್ರಮುಖ 37 ಮುಖಂಡರು ಮಂಗಳವಾರ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

ರಾಜ್ಯದ ಹಿರಿಯ ಕಾರ್ಯಕಾರಿ ಸದಸ್ಯರು ಸೇರಿದಂತೆ 37 ಪ್ರಮುಖ ಬಿಜೆಪಿ ಮುಖಂಡರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇಸರಿಪಡೆಗೆ ಭಾರಿ ಹಿನ್ನಡೆಯಾಗಿದೆ.

ನಾಗಾಲ್ಯಾಂಡ್ ಬಿಜೆಪಿ ಅಧ್ಯಕ್ಷ ತೆಮ್ಜೆನ್ ಇಮ್ನಾ ಅಲಾಂಗ್ ಲೊಂಗ್ಕುಮೆರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ನಾಯಕರು, ಪಕ್ಷದ ತತ್ವ ಮತ್ತು ಸಿದ್ಧಾಂಗಳು ಹಿಂದೂತ್ವ ನೀತಿಯನ್ನು ವಿರೋಧಿಸಿ ತಾವು ಪಕ್ಷ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.

37 ಮುಖಂಡರು ತಮ್ಮ ರಾಜೀನಾಮೆಗೆ, ಪೌರತ್ವ ಮಸೂದೆ ವಿಚಾರದಲ್ಲಿ ಕೇಂದ್ರ ನಾಯಕರ ನಡೆ ಮತ್ತು ನಾಗಾ ರಾಜಕೀಯ ವಿಚಾರ ಸೇರಿದಂತೆ ಆರು ಪ್ರಮುಖ ಕಾರಣಗಳನ್ನು ನೀಡಿದ್ದಾರೆ.

click me!