ಚುನಾವಣೆ ಹತ್ತಿರವಾಗುತ್ತಿದ್ದಂತೆ ಸೋಶೀಯಲ್ ಮೀಡಿಯಾದ ಪ್ರತಿಯೊಂದು ಹೆಜ್ಜೆಗಳ ಮೇಲೂ ಕಣ್ಣಿಡಲಾಗುತ್ತದೆ.ಯಾವುದೆ ಪಕ್ಷದ ಪರವಾಗಿ ಅಥವಾ ವಿರುದ್ಧವಾಗಿ ಸಲ್ಲದ ಬರಹ ಬರೆದರೆ ಸರಕಾರಿ ನೌಕರರು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಕಲಬುರಗಿ(ಏ. 09) ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಬಗ್ಗೆ ಪೋಸ್ಟ್ ಮಾಡುವ ಮುನ್ನ ಸರಕಾರಿ ನೌಕರರಿಗೆ ಇದು ಎಚ್ಚರಿಕೆ ಘಂಟೆ. ಚುನಾವಣಾ ರಾಜಕೀಯಕ್ಕೆ ಕಲಬುರಗಿಯಲ್ಲಿ ಸರಕಾರಿ ಶಿಕ್ಷಕ ಸಸ್ಪೆಂಡ್ ಆಗಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಪರ ಮತ್ತು ಪ್ರಧಾನಿ ಮೋದಿ ವಿರುದ್ಧ ಫೇಸಬುಕ್ ನಲ್ಲಿ ಬರಹ ಹಾಕಿದ್ದಕ್ಕೆ ಶಿಕ್ಷರೊಬ್ಬರು ಶಿಕ್ಷೆಗೆ ಗುರಿಯಾಗಿದ್ದಾರೆ. ಕಲಬುರಗಿ ಜಿಲ್ಲೆ ಭೀಮಳ್ಳಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವಿಠಲ್ ವಗ್ಗನ್ ಅವರನ್ನು ಅಮಾನತು ಮಾಡಲಾಗಿದೆ.
ಬಿಜೆಪಿ ಕಾರ್ಯಕರ್ತರು ಈ ಬಗ್ಗೆ ನೀಡಿರುವ ದೂರು ಆಧರಿಸಿ ಕಲಬುರಗಿ ಡಿಡಿಪಿಐ ಕ್ರಮ ತೆಗೆದುಕೊಂಡಿದ್ದಾರೆ. ಜಿಲ್ಲಾಧಿಕಾರಿ ಆದೇಶಕ್ಕೆ ಅನುಗುಣವಾಗಿ ಸಹ ಶಿಕ್ಷಕ ವಿಠಲ ವಗ್ಗನ್ ಅವರನ್ನು ಅಮಾನತು ಮಾಡಲಾಗಿದೆ.
ಸುವರ್ಣ ನ್ಯೂಸ್ ಗೆ ಕಲಬುರಗಿ ಡಿಡಿಪಿಐ ಶಾಂತಗೌಡ ಪಾಟೀಲ್ ಮಾಹಿತಿ ನೀಡಿದ್ದಾರೆ. ಇದೇ ರೀತಿ ಫೇಸ್ ಬುಕ್ ನಲ್ಲಿ ಬಿಜೆಪಿ ಪರ ಪ್ರಚಾರ ಮಾಡಿರುವ ಆರೋಪದ ಮೇಲೆ ಗಾಣಗಾಪೂರ ಸರಕಾರಿ ಶಾಲಾ ಶಿಕ್ಷಕ ಲಕ್ಷ್ಮಣ ಜೋಗೂರ ಎನ್ನುವರು ಅಮಾನತುಗೊಂಡಿದ್ದರು.