‘ರಾಮನವಮಿ ಮಜ್ಜಿಗೆ, ಪಾನಕಕ್ಕೂ ಟ್ಯಾಕ್ಸ್ ಅಂದ್ರೇ ಏನ್ ಮಾಡ್ಬೇಕೋ.?’

By Web DeskFirst Published Apr 3, 2019, 8:08 PM IST
Highlights

ತುಮಕೂರಿನಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಬಸವರಾಜು ವಿರುದ್ದ ನಮ್ಮ ಹೋರಾಟ ಅಲ್ಲ. ನಮ್ಮ ಹೋರಾಟ ಕೇಂದ್ರ ಸರಕಾರದ ದುರಾಡಳಿತದ ವಿರುದ್ಧ ಎಂದಿದ್ದಾರೆ.

ತುಮಕೂರು[ಏ. 03]  ಕೊರಟಗೆರೆಯಲ್ಲಿ‌ ಬಿಜೆಪಿಗೆ ಠೇವಣಿ‌ ಸಿಗಬಾರದು. ಬಸವರಾಜು ವಿರುದ್ದ ನಮ್ಮ ಹೋರಾಟ ಅಲ್ಲ. ಮೋದಿ‌ ಅವರನ್ನು ಪ್ರಧಾನಿ ಮಾಡೋಕೆ ಮತ ಹಾಕಿ ಅಂತಾ ಅವರೇ ಕೇಳುತ್ತಾರೆ. ಯಾಕೆ ಅಂದ್ರೇ ಅವರು ಮಾಡಿರೋ ಸಾಧನೇ ಏನು ಇಲ್ಲಾ ಎಂದು ಡಿಸಿಎಂ ಡಾ. ಜಿ.ಪರಮೇಶ್ವರ ವಾಗ್ದಾಳಿ ನಡೆಸಿದರು.

ಏನಾದ್ರೂ ಸಾಧನೆ ಮಾಡಿದ್ರೇ, ಇವತ್ತು ಅದನ್ನೇ ಹೇಳಿ ಮತ ಕೇಳ್ಬೋದಿತ್ತು. ವೈಯಕ್ತಿಕವಾಗಿ ಟೀಕೆ ಮಾಡಿ ಬಿಜೆಪಿ ಸಂಸ್ಕೃತಿ ಏನು ಅಂತಾ ತೋರಿಸುತ್ತಿದ್ದಾರೆ. ಈಶ್ವರಪ್ಪ, ಎಚ್ ಡಿಕೆ ನೆಗೆದುಬಿದ್ದೋಗ್ತಾರೆ ಅಂಥ ಮಾತಾಡ್ತಾರೆ. ಸಾರ್ವಜನಿಕ ಬದುಕಿ‌ನಲ್ಲಿ ಹೇಗೇ ಮಾತಾಡ್ಬೇಕು ಎಂಬುದನ್ನು ಮೊದಲು ಕಲಿಯಿರಿ ಎಂದು ಸಲಹೆ ನೀಡಿದರು.

ಇಬ್ರಾಹಿಂ-ಯಡಿಯೂರಪ್ಪ ನಡುವೆ 'ಗಂಡಸ್ತನ'ದ ಕಿತ್ತಾಟ

ತೇಜಸ್ವಿ ಸೂರ್ಯ ಅಂತಾ‌ ಹೊಸದಾಗಿ ಬಂದಿದ್ದಾರೆ. ಅವ್ರು ಸೂರ್ಯಾನಾ, ಚಂದ್ರ ಅಲ್ವಾ ಎಂದು ಲೇವಡಿ ಮಾಡುತ್ತಲೇ ಮಾತನಾಡಿದ ಪರಂ,  ಮೋದಿ ಐದು ವರ್ಷ ಏನ್ ಮಾಡಿದ್ದಾರೆ ಅಂತಾ ಹೇಳಲಿ. ವಂಚಕರು ಹೋಗಿ ಲಂಡನ್ ನಲ್ಲಿ ಕೋಟಿ ಕೋಟಿ ಹಣ ಇಟ್ಟಿದ್ದಾರೆ. ಅದೆಲ್ಲಾ ಹಣ ಕಪ್ಪು ಆಗಿದ್ಯಂತೆ. ಇವ್ರು ಅದುನ್ನಾ ಬೆಳ್ಳುಗ್ ಮಾಡಿ ನಿಮ್ಗೆ ಹಾಕ್ಬಿಡ್ತೀನಿ ಅಂದ್ರು. ನೀವೆಲ್ಲಾ ಬೆಳಗ್ಗೇನೇ ಎದ್ದು ಹೋಗಿ ಅಕೌಂಟ್ ಮಾಡ್ಸಿ ರೆಡಿ ಆಗ್ಬಿಟ್ರೀ. ಆದರೆ ಐದು ವರ್ಷ ಏನೇನ್ ಮಾಡಿದ್ರು ಅಂತಾ ಎಲ್ರಿಗೂ ಗೊತ್ತಿದೆ ಎಂದು ಬ್ಯಾಕ್ ಮನಿ ವಿಚಾರವನ್ನು ಮತ್ತೆ ಕೆದಕಿದರು.

ನಮ್ಗೆ ಆನ್ ಲೈನ್ ನಲ್ಲಿ ರಿಜಿಸ್ಟರ್ ಮಾಡಿರೋ ರೈತರ ಪಟ್ಟಿ ಕೊಡಿ. ನಾವೆಲ್ಲಾ ತಯಾರು ಮಾಡಿ 10 ಲಕ್ಷ ರೈತರ ಹೆಸರನ್ನ ಕಳಿಸಿದ್ವಿ. ಆದರೇ ಕೇವಲ 10 ಜನಕ್ಕೆ ಎರಡು ಸಾವಿರ ರೂಪಾಯಿ ಬಂದಿದೆ. ಮೋದಿ ಅವ್ರೇ, ನಿಮ್ಮನ್ನ ರೈತರು ಕ್ಷಮಿಸಲ್ಲ. ಸಾವಿರಾರು ಕೋಟಿ ಹೊಡ್ಕೊಂಡು ದೇಶ ಬಿಟ್ಟು ಹೋದವ್ರಿಗೆ ಸಹಾಯ ಮಾಡಿದ್ದಿರಲ್ಲಾ.  ಕಾಂಗ್ರೆಸ್ ಪಕ್ಷ ಅಧಿಕಾರಿದಲ್ಲಿ‌ ಇದ್ದಾಗ ನರೇಗಾ ಯೋಜನೆ ತಂದಿದ್ದೇವು. ನಿಮ್ಮ ಅಧಿಕಾರದಲ್ಲಿ ಅದನ್ನೂ ನಿಲ್ಲಿಸೋಕೆ ಹೋಗಿದ್ರಿ ಎಂದು ಆರೋಪಿಸಿದರು.

ಮಂಡ್ಯದಲ್ಲಿ ಪ್ರಚಾರ ಮಾಡ್ತಿದ್ದ ಯಶ್ ಗೆ ಗ್ರಾಮಸ್ಥರ ವಾರ್ನಿಂಗ್!

ನೋಟು ಅಮಾನ್ಯೀಕರಣ ನಡೆಸಿ ಆರ್ಥಿಕ ವ್ಯವಸ್ಥೆಯನ್ನ ಬುಡಮೇಲು ಮಾಡಿದ್ದೀರಾ. ನೋಟು ಬದಲಾಯಿಸೋಕೆ ಕ್ಯೂನಲ್ಲಿ‌ ನಿಂತು ಎಷ್ಟೋ ಜನರು ಸತ್ತೋದ್ರು. ನಿಮ್ ಮನೆ ಹಾಳಾಗ್‌ ಹೋಗ ಸತ್ತವರಿಗಾದ್ರೂ ಪರಿಹಾರ ನೀಡಿದ್ರಾ. ಮಜ್ಜಿಗೆಗೆ ಶೇ. 18 ಜಿಎಸ್ಟಿ ಟ್ಯಾಕ್ಸ್ ಹಾಕೋರಿಗೆ ನಾವ್ ಓಟ್ ಹಾಕ್ಬೇಕಾ.? ರಾಮನವಮಿಗೆ ಮಜ್ಜಿಗೆ, ಪಾನಕ ಎಲ್ಲಾ ಪುಕ್ಸಟ್ಟೆ ಕುಡಿತಿದ್ವಿ, ಮುಂದೆ ಅದಕ್ಕೂ ಟ್ಯಾಕ್ಸ್ ಅಂದ್ರೇ ಏನ್ ಮಾಡ್ಬೇಕೋ.? ಎಂದು ಪ್ರಶ್ನೆ ಮಾಡಿದರು.

ನಮ್ಮಲ್ಲಿ ಯಾವುದೇ ಸಣ್ಣಪುಟ್ಟ ಬದಲಾವಣೆಗಳು ಇರ್ಲಿ. ಅದನೆಲ್ಲಾ ಬದಿಗೊಟ್ಟು ಬಿಜೆಪಿ ವಿರುದ್ಧ ಗೆಲ್ಲಬೇಕು. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದಮೇಲೆ. ಬಿಪಿಎಲ್ ಕಾರ್ಡ್ ನ ರೈತರಿಗೆ 82 ಸಾವಿರ ಹಾಕಲಾಗುತ್ತೆ. ನರೇಂದ್ರ ಮೋದಿ ಥರ ನಾವ್ ಸುಳ್ಳು ಹೇಳಲ್ಲ. ಶೋಷಿತರ ಮೇಲೆ ಆಗ್ತಿರೋ ದಬ್ಬಾಳಿಕೆ ತಡೆಗೆ  ಕಠಿಣ ಕಾನೂನು ಜಾರಿ ಮಾಡುತ್ತೇವೆ ಎಂದು ಪರಮೇಶ್ವರ್ ಭರವಸೆ ನೀಡಿದರು.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 

click me!