'ಸುಮಲತಾ ಕ್ಯಾಂಪೇನ್​​ನಲ್ಲಿ ಕಾಂಗ್ರೆಸ್ ಬಾವುಟ ಹಿಡಿದೇ ಬೆಂಬಲಿಸ್ತೇವೆ'

By Web DeskFirst Published Apr 3, 2019, 7:20 PM IST
Highlights

ಮಂಡ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮೈತ್ರಿ ಹೊಂದಾಣಿಕೆಯಾಗುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ಮೇರೆಗೆ ನಡುವೆಯೂ ಜಿಲ್ಲೆಯ ನಾಯಕರು ಬಹಿರಂಗವಾಗಿ ಬೆಂಬಲ ಸೂಚಿಸಲು ನಿರ್ಧರಿಸಿದ್ದು, ಮಂಡ್ಯ ಕಣ ಮತ್ತಷ್ಟು ರಣರಂಗವಾಗಿದೆ.

ಮಂಡ್ಯ, [ಏ.03]: ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್​ಗೆ ನಾಗಮಂಗಲದ ಕಾಂಗ್ರೆಸ್​ ಮುಖಂಡರು ಬೆಂಬಲ ನೀಡಿದ್ದಾರೆ.  

ಇತ್ತ, ಮಾಜಿ ಶಾಸಕ ಚೆಲುವರಾಯಸ್ವಾಮಿ ಮತ್ತು ಅವ್ರ ತಂಡಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಮಾಡುವಂತೆ ಸೂಚನೆ ನೀಡಿದ ಬೆನ್ನಲ್ಲೇ, ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಾಗಮಂಗಲದ ಕಾಂಗ್ರೆಸಿಗರು ಸುದ್ದಿಗೋಷ್ಠಿ ನಡೆಸಿ ಸುಮಲತಾ ಅವರ ಕ್ಯಾಂಪೇನ್ ನಲ್ಲಿ ಪಕ್ಷದ ಧ್ವಜಜ ಹಿಡಿದು ಬೆಂಬಲಿಸಲು ನಿರ್ಧರಿಸಿದ್ದಾರೆ.

ಮಂಡ್ಯ ಅಖಾಡದಲ್ಲಿ ಕಾಂಗ್ರೆಸ್ ಬಂಡಾಯದ ಗುಟ್ಟು ಬಿಚ್ಚಿಟ್ಟಿ GT ದೇವೇಗೌಡ

ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದ ಎಲ್.ಆರ್.ಶಿವರಾಮೇಗೌಡರಿಗೆ ಹೈಕಮಾಂಡ್ ಸೂಚನೆಯಂತೆ ಸಹಕಾರ ನೀಡಿದ್ದರೂ ನಮ್ಮ ಕೈ ಕಾರ್ಯಕರ್ತರಿಗೆ ಯಾವುದೇ ಪ್ರಯೋಜನವಾಗಿಲ್ಲ. 

ದಿನದಿಂದ ದಿನಕ್ಕೆ ನಮ್ಮವರ ಮೇಲೆ ಕಿರುಕುಳ ಹೆಚ್ಚುತ್ತಿದೆ. ನಮ್ಮ ನಾಯಕತ್ವ ಉಳಿಯಬೇಕಾದರೆ ಕಾರ್ಯಕರ್ತರ ಮಾತನ್ನು ಕೇಳಬೇಕಾಗಿರುವುದು ಅನಿವಾರ್ಯ. ನಾವುಗಳು ಪರೋಕ್ಷವಾಗಿ ಅಲ್ಲ, ಬಹಿರಂಗವಾಗಿಯೇ ಸುಮಲತಾ ಪರ ಪ್ರಚಾರ ಮಾಡುತ್ತೇವೆ ಎಂದು ಘಂಟಾಘೋಷವಾಗಿ ಹೇಳಿದರು.

ನಮ್ಮ ಅಸ್ಥಿತ್ವ ಮತ್ತು ಸ್ವಾಭಿಮಾನದ ಉಳಿವಿಗಾಗಿ ಒಕ್ಕೊರಲವಾಗಿ ಬೆಂಬಲ ನೀಡುತ್ತೇವೆ. ಸುಮಲತಾ ಗೆಲುವು ಶತಸಿದ್ಧ. ಸುಮಲತಾರ ಅವ್ರನ್ನ ವೈಯಕ್ತಿಕವಾಗಿ ಹಿಯಾಳಿಸುತ್ತಿರುವ ಶಿವರಾಮೇಗೌಡರ ನೆಡೆ ಅಕ್ಷಮ್ಯ ಅಪರಾಧ. ನಾಳೆ ನಡೆಯುವ ದರ್ಶನ್ ಕ್ಯಾಂಪೇನ್​​ನಲ್ಲಿ ಕಾಂಗ್ರೆಸ್ ಬಾವುಟ ಹಿಡಿದೇ ಪ್ರಚಾರ ಮಾಡುತ್ತೇವೆ ಎಂದರು.

click me!