ಪುಲ್ವಾಮಾ ಬಗ್ಗೆ HDKಗೆ 2 ವರ್ಷದ ಹಿಂದೆಯೇ ಗೊತ್ತಿತ್ತಂತೆ..!

By Web Desk  |  First Published Apr 5, 2019, 4:45 PM IST

ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗುವ ಎಲ್ಲ ಸೂಚನೆ ನೀಡಿದೆ. ಭಾರತದ ಸೈನಿಕರ ಮೇಲೆ ಉಗ್ರರು ದಾಳಿ ಮಾಡುವ ವಿಚಾರ ತನಗೆ 2 ವರ್ಷದ ಹಿಂದೆಯೇ ಗೊತ್ತಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.


ಚಿಕ್ಕಮಗಳೂರು(ಏ. 05 ) ಸಿಎಂ ಕುಮಾರಸ್ವಾಮಿ ಆಡಿರುವ ಮಾತು ಸಹಜವಾಗಿ ವಿವಾದ ಎಬ್ಬಿಸಿದೆ.  ಚಿಕ್ಕಮಗಳೂರಿನ ಕೊಪ್ಪದಲ್ಲಿ ಸಿಎಂ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನನಗೆ ಎರಡು ವರ್ಷದ ಹಿಂದೆಯೇ ದಾಳಿ ಬಗ್ಗೆ ಗೊತ್ತಿತ್ತು. ನಿವೃತ ಸೈನಿಕ ಅಧಿಕಾರಿ ತಿಳಿಸಿದ್ರು. ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಭಾರತ-ಪಾಕ್ ನಡುವೆ ಸಂಘರ್ಷ ನಡೆಯುತ್ತೆ ಎಂದಿದ್ದರು.  ಏನಾದ್ರು ಕಥೆ ಸೃಷ್ಟಿ ಮಾಡಿ ಮೋದಿ ಮತ ಕೇಳುತ್ತಾರೆ ಎಂದೂ ಹೇಳಿದ್ದರು ಎಂದಿದ್ದಾರೆ.

Tap to resize

Latest Videos

ಚುನಾವಣೆ ಸಂದರ್ಭ ಎ.ಮಂಜುಗೆ ಠಕ್ಕರ್ ಕೊಟ್ಟ ಕಾಂಗ್ರೆಸ್

ಎರಡು ವರ್ಷದ ಹಿಂದೆಯೇ ನನ್ನ ಬಳಿ ಚರ್ಚೆ ಮಾಡಿದ್ದರು. ಇವತ್ತು ಅದೇ ರೀತಿಯಲ್ಲಿ ಆಗಿದೆ. ದೇಶವನ್ನು ಸುಭದ್ರವಾಗಿ ನಡೆಸುವ ಪ್ರಧಾನ ಮಂತ್ರಿ ಬೇಕಂತೆ. ಹಾಗಾದ್ರೆ ದೇಶವನ್ನು 70 ವರ್ಷ ಅಭದ್ರತೆಯಲ್ಲಿ ಆಡಳಿತ ನಡೆಸಿದ್ರಾ? ಎಂದು ಪ್ರಶ್ನೆ ಮಾಡಿದರು.

ನಾನು ನಿಮ್ಮನ್ನು ಕೈ ಜೋಡಿಸಿ ಮನವಿ ಮಾಡ್ತೇನೆ ನಂಬಬೇಡಿ. ದೇಶದಲ್ಲಿ ಕನ್ನಡದ ಪ್ರಧಾನ ಮಂತ್ರಿ 10 ತಿಂಗಳು ಕೆಲಸ ಮಾಡಿದ್ದಾರೆ. ಆಗ ಎಲ್ಲಾದ್ರೂ ಬಾಂಬ್ ದಾಳಿ,ಅಮಾಯಕರ ಬಲಿ ನಡದಿತ್ತೆ? ಯೋಧರನ್ನು ಗುಂಡಿಕ್ಕಿ ಕೊಲ್ಲುಕ ಘಟನೆ ಆಗ ನಡೆದಿತ್ತೆ? ಆದರೆ ಈಗ  ಕೆಲವರು ಅವರ ಉಳಿವಿಗೆ ದೇಶದ ಸೈನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪುಲ್ವಾಮಾ ದಾಳಿಯ ನಂತರ..

ನಮ್ಮನ್ನು ದಾರಿ ತಪ್ಪಿಸುವ ಇಂತಹ ಪ್ರಧಾನ ಮಂತ್ರಿ ಬೇಕಾ ? ಇವರ ಅಭಿವೃದ್ಧಿ ಬದಲು ಧರ್ಮದ ರಾಜಕಾರಣ ಬೇಕಾಗಿದೆ ನಮ್ಮ ಕುಟುಂಬದವರು ಶೃಂಗೇರಿಯ ಪರಮ ಭಕ್ತರು. ಧರ್ಮದ ರಕ್ಷಣೆಯಲ್ಲಿ ನಾವು ಅವರಿಗಿಂತ ಮುಂದಿದ್ದೇವೆ. ನಾವು ಯಾವ ಧರ್ಮದಲ್ಲಿ ಹುಟ್ಟಬೇಕು ಎಂದು ಕೇಳಿಕೊಂಡು ಹುಟ್ಟೋದಿಲ್ಲ ಎಂದು ಹೇಳಿದರು.


 

click me!