ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ : ಸುಮಿತ್ರಾ ಮಹಾಜನ್

Published : Apr 05, 2019, 04:15 PM IST
ಮುಂದಿನ  ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ : ಸುಮಿತ್ರಾ ಮಹಾಜನ್

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಹಲವು ಬಿಜೆಪಿ ನಾಯಕರು ಚುನಾವಣಾ ಕಣದಿಂದ ಹೊರಕ್ಕೆ ಉಳಿದಿದ್ದು, ಈ ಸಾಲಿಗೆ ಇದೀಗ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಕೂಡ ಸೇರಿದ್ದಾರೆ.

ನವದೆಹಲಿ :  ಲೋಕಸಭಾ ಸ್ಪೀಕರ್  ಸುಮಿತ್ರಾ ಮಹಾಜನ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. 

ಏಪ್ರಿಲ್ 12ಕ್ಕೆ ಸುಮಿತ್ರಾ ಮಹಾಜನ್ ವಯಸ್ಸಯ 76 ಆಗಲಿದ್ದು,  ಈ ನಿಟ್ಟಿನಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಅಲ್ಲದೇ ಇಂದೋರ್ ಕ್ಷೇತ್ರದಿಂದ ಇದುವರೆಗೂ ಕೂಡ ಬಿಜೆಪಿ ಮಹಾಜನ್ ಹೆಸರು ಘೋಷಣೆಯಾಗಿಲ್ಲ. 

ಅಲ್ಲದೇ ಬಿಜೆಪಿಯಲ್ಲಿ ನಿಯಮವೊಂದನ್ನು ಕಾಯ್ದುಕೊಳ್ಳಲಾಗಿದ್ದು, 75 ವರ್ಷ ದಾಟಿದ ಯಾರಿಗೂ ಟಿಕೆಟ್ ನೀಡುವುದಿಲ್ಲ. 

ಅದರಂತೆ ಇದೀಗ ಸುಮಿತ್ರಾ ಮಹಾಜನ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಯಾವುದೇ ರೀತಿಯ ಅಸಮಾಧಾನವಿಲ್ಲದೇ ಪಕ್ಷದ ನಿರ್ಧಾರ ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. 

ಈಗಾಗಲೇ 75 ವರ್ಷ ದಾಟಿದ ಅನೇಕ ಬಿಜೆಪಿ ನಾಯಕರಿಗೆ ಟಿಕೆಟ್ ದೊರಕಿಲ್ಲ. ಅದರಲ್ಲಿ ಹಿರಿಯ ನಾಯಕ ಎಲ್. ಅಡ್ವಾಣಿಯವರಿಗೂ ಈ ಬಾರಿ ಟಿಕೆಟ್ ದೊರಕಿದೆ. 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!