ಇದ್ದಕ್ಕಿದ್ದಂತೆ ಹಾಸನ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗಿದೆ. ಎ. ಮಂಜು ಬಿಜೆಪಿಗೆ ಬಂದು ಅಭ್ಯರ್ಥಿಯಾದ ಅವರ ಕಾರಣಕ್ಕೆ ಅವರ ಪುತ್ರನ ಮೇಲೆ ಕಾಂಗ್ರೆಸ್ ಶಿಸ್ತು ಕ್ರಮ ಜರಗಿಸಿದೆ.
ಹಾಸನ(ಏ. 05) ಹಾಸನ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಡಾ.ಮಂಥರ್ಗೌಡ ಅವರನ್ನು ವಜಾ ಮಾಡಲಾಗಿದೆ. ಮಾಜಿ ಸಚಿವ ಎ.ಮಂಜು ಪುತ್ರ ಹಾಗೂ ಜಿಪಂ ಸದಸ್ಯ ಡಾ.ಮಂಥರ್ಗೌಡ ಅವರಿಗೆ ಕಾಂಗ್ರೆಸ್ ಗೇಟ್ ಪಾಸ್ ನೀಡಿದೆ.
ಎ.ಮಂಜು, ಇತ್ತೀಚೆಗಷ್ಟೇ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಹಾಸನದ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದ ಕಾರಣ ನೀಡಿ ವಜಾ ಮಾಡಲಾಗಿದೆ.
ಮಂಡ್ಯದಲ್ಲಿ ನಿಖಿಲ್‌ಗೆ ಯಾಕೆ ವೋಟ್ ಕೊಡಬೇಕು? ಅಜ್ಜಿಯ ಈ ಮಾತನ್ನು ಕೇಳಿ
ಹಾಗೆಯೇ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗದ ಹಿನ್ನೆಲೆ. ಈ ಸಂಬಂಧ ನೋಟಿಸ್ ನೀಡಿದ್ರೂ ಯಾವುದೇ ಉತ್ತರ ಬಂದಿರಲಿಲ್ಲ. ಹೀಗಾಗಿ ಮಂಥರ್ಗೌಡ ತಲೆದಂಡ ಮಾಡಲಾಗಿದೆ ರಾಜ್ಯ ಪ್ರದೇಶ ಯೂತ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕೆಂಪರಾಜ್ ಕೆ.ಗೌಡ ಆದೇಶ ನೀಡಲಾಗಿದೆ. ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಪುತ್ರ ಸುಜನ್ ಗೌಡ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.