'ಚುನಾವಣೆಯಲ್ಲಿ ಗೆಲ್ಲಲ್ಲ, ಸಿನಿಮಾನೂ ಓಡಲ್ಲ, 23ರ ನಂತ್ರ ನಿಖಿಲ್ ನಿರುದ್ಯೋಗಿ ಆಗೋದು ಪಕ್ಕಾ'

Published : Apr 13, 2019, 09:19 PM IST
'ಚುನಾವಣೆಯಲ್ಲಿ ಗೆಲ್ಲಲ್ಲ, ಸಿನಿಮಾನೂ ಓಡಲ್ಲ, 23ರ ನಂತ್ರ ನಿಖಿಲ್ ನಿರುದ್ಯೋಗಿ ಆಗೋದು ಪಕ್ಕಾ'

ಸಾರಾಂಶ

ಯೋಧರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಸಿಎಂ ಕುಮಾರಸ್ವಾಮಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್  ಟಾಂಗ್ ನೀಡಿದ್ದಾರೆ.

ವಿಜಯಪುರ, [ಏ.13]: ಲೋಕಸಭಾ ಚುನಾವಣೆ ನಂತರ ಕುಮಾರಸ್ವಾಮಿ ಪುತ್ರ [ನಿಖಿಲ್] ನಿರುದ್ಯೋಗಿ ಆಗೋದು ಗ್ಯಾರಂಟಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವ್ಯಂಗ್ಯವಾಡಿದ್ದಾರೆ.

ಸೈನ್ಯಕ್ಕೆ ಸೇರುವವರು 2 ಹೊತ್ತಿನ ಊಟಕ್ಕೆ ಗತಿ ಇಲ್ಲದವರು: ಸಿಎಂ ಹೇಳಿಕೆಗೆ BJP ಟಾಂಗ್

ವಿಜಯಪುರ ನಗರದಲ್ಲಿ ನಡೆದ ಪ್ರಬುದ್ಧರ ಜತೆ ಸಂವಾದ ಕಾರ್ಯಕ್ರಮದಲ್ಲಿ ಬಿ.ಎಲ್. ಸಂತೋಷ್,  ಚುನಾವಣೆ ನಂತ್ರ ಸಿಎಂ ಹೆಚ್ಡಿಕೆ ಮಗ ನಿಖಿಲ್ ನಿರುದ್ಯೋಗಿ ಆಗೋದು ಪಕ್ಕಾ. ಚುನಾವಣೆಯಲ್ಲಿ‌ ನಿಖಿಲ್ ಗೆಲ್ಲಲ್ಲ, ನಿಖಿಲ್ ಮಾಡುವ ಸಿನಿಮಾ ಓಡಲ್ಲ ಎಂದು ಲೇವಡಿ ಮಾಡಿದರು.

23ರ ನಂತ್ರ ನಿಖಿಲ್ ನಿರುದ್ಯೋಗಿ ಆಗೋದು ಗ್ಯಾರಂಟಿ. ಆಗ ಕುಮಾರಸ್ವಾಮಿ ನಿಖಿಲ್ ನನ್ನ ಸೇನೆಗೆ ಸೇರಿಸಲಿ. ಅಲ್ಲಿ ಪರಿಸ್ಥಿತಿ ಹೇಗಿರುತ್ತೆ ಅನ್ನೋದು ಗೊತ್ತಾಗುತ್ತೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮ ಸೈನಿಕರು ಯಾವತ್ತೂ ಶತೃಗಳ ಗುಂಡಿಗೆ ಬೆನ್ನು ಕೊಟ್ಟಿಲ್ಲ. ಬೆನ್ನಿಗೆ ಗುಂಡು ಬಿದ್ದು ಹುತಾತ್ಮರಾದ ಉದಾಹರಣೆ ಇಲ್ಲ. ಸೈನಿಕರು ಗುಂಡಿಗೆ ಎದೆಯೊಡ್ಡಿದ್ದಾರೆ. ಭಾರತೀಯ ಸೈನಿಕರ ಬಗ್ಗೆ ದೇಶವೇ ಗೌರವ ನೀಡುತ್ತಿದೆ ಎಂದು ಕುಮಾರಸ್ವಾಮಿಗೆ ತಿವಿದು ಹೇಳಿದರು.

ಊಟಕ್ಕೆ ಗತಿ ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಎಲೆಕ್ಷನ್ ಪ್ರಚಾರದ ವೇಳೆ ಹೇಳಿದ್ದರು, ಇದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!