ರಾಹುಲ್ ಗಾಂಧಿಗೂ ಸೆಡ್ಡು ಹೊಡೆದ ಮಂಡ್ಯ ಕಾಂಗ್ರೆಸ್ ರೆಬೆಲ್ ಸ್ಟಾರ್ಸ್

Published : Apr 13, 2019, 08:11 PM ISTUpdated : Apr 13, 2019, 08:17 PM IST
ರಾಹುಲ್ ಗಾಂಧಿಗೂ ಸೆಡ್ಡು ಹೊಡೆದ ಮಂಡ್ಯ ಕಾಂಗ್ರೆಸ್ ರೆಬೆಲ್ ಸ್ಟಾರ್ಸ್

ಸಾರಾಂಶ

ರಾಹುಲ್ ಗಾಂಧಿ ಕಾರ್ಯಕ್ರಮಕ್ಕೂ ಗೈರಾದ ರೆಬೆಲ್ ಸ್ಟಾರ್‌ಗಳು| ಮುಂದುವರೆದ ಮಂಡ್ಯ ಕಾಂಗ್ರೆಸ್ ರೆಬಲ್ ನಾಯಕರ ನಡೆ| ಕ್ಷೇತ್ರಕ್ಕೆ ರಾಹುಲ್ ಗಾಂಧಿ ಬಂದರು ಕಾಣಿಸಿಕೊಳ್ಳದ ರೆಬಲ್ ನಾಯಕರು| ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಗೈರಾದ ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ.

ಮಂಡ್ಯ, [ಏ.13]: ರಾಜ್ಯ ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮಂಡ್ಯ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಬಂದರೂ ಕಾಂಗ್ರೆಸ್ ರೆಬೆಲ್ಸ್ ನಾಯಕರು ಡೋಂಟ್ ಕೇರ್ ಎಂದಿದ್ದಾರೆ.

ಸಿದ್ದರಾಮಯ್ಯ ಸಂಧಾನಕ್ಕೂ ಬಗ್ಗದೆ ನಿಖಿಲ್ ವಿರುದ್ದ ಕಾರ್ಯತಂತ್ರ ರೂಪಿಸುತ್ತಿರುವ ಮಂಡ್ಯ ಕಾಂಗ್ರೆಸ್ ರೆಬೆಲ್ ನಾಯಕರು, ರಾಹುಲ್ ಗಾಂಧಿ ಅವರ ಸಮಾವೇಶಕ್ಕೆ ಗೈರಾಗುವ ಮೂಲಕ ಸೆಡ್ಡು ಹೊಡೆದಿದ್ದಾರೆ.

ಕೆ,ಆರ್.ನಗರದಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸಮಾವೇಶಕ್ಕೆ ಮಾಜಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ ಗೈರಾಗಿದ್ದಾರೆ. 

ನಿನ್ನೆ [ಶುಕ್ರವಾರ] ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆಂದು ಮಂಡ್ಯ ಕ್ಷೇತ್ರಕ್ಕೆ ಬಂದಿದ್ದರು. ಆದ್ರೆ ಈ ರೆಬೆಲ್ ದೂರ ಉಳಿದಿದ್ದರು. ಇದ್ರಿಂದ ಮಂಡ್ಯ ಜಿಲ್ಲಾ ಕಾಂಗ್ರೆಸ್ ನಾಯಕರ ನಡೆ ತೀವ್ರ ಕುತೂಹಲ ಮೂಡಿಸಿದೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಬೆಂಬಲಕ್ಕೆ ನಿಂತ ಕೆಲ ಕಾಂಗ್ರೆಸ್ ನಾಯಕರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಆದ್ರೆ, ಪ್ರಮುಖ ನಾಯಕರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!