‘ಕರಾವಳಿಗರಿಗೆ ಬುದ್ಧಿ ಇಲ್ಲ ಎನ್ನುವರ ತಲೆ ತಿರುಗಿರಬೇಕು’

Published : Apr 07, 2019, 06:47 PM ISTUpdated : Apr 07, 2019, 06:55 PM IST
‘ಕರಾವಳಿಗರಿಗೆ ಬುದ್ಧಿ ಇಲ್ಲ ಎನ್ನುವರ ತಲೆ ತಿರುಗಿರಬೇಕು’

ಸಾರಾಂಶ

ಬಿಎಸ್ ಯಡಿಯೂರಪ್ಪ ಸಿಎಂ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಉಡುಪಿ[ಏ. 07]  ಕರಾವಳಿಗೆ ಬುದ್ಧಿಯಿಲ್ಲ ಅಂತಾರೆ. ರಾಹುಲ್ ಗಾಂಧಿಯ ಕೃಪೆಯಿಂದ ಸಿಎಂ ಆದೆ ಅಂತಾರೆ. ಪುಲ್ವಾಮಾ ಘಟನೆ ಗೊತ್ತಿತ್ತು ಅಂತ ಹೇಳ್ತಾರೆ. ಹೀಗೆ ಹೇಳುವ ಸಿಎಂ ಕುಮಾರಸ್ವಾಮಿಗೆ ತಲೆ ತಿರುಗಿರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ

ಕುಮಾರಸ್ವಾಮಿ ಲಜ್ಜೆಗೆಟ್ಟ ಬೇಜವಾಬ್ದಾರಿ ಸಿಎಂ. ಸಿಎಂ ಕರ್ನಾಟಕ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ. ಇಂತಹ ತುಘಲಕ್ ದರ್ಬಾರ್ ಸಿಎಂ ನಮಗೆ ಬೇಡ ಎಂದು ಹೇಳಿದರು

ಬಿಜೆಪಿ ದೇಶದಲ್ಲಿ 300 ಸೀಟು ಗೆಲ್ಲುತ್ತದೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಸೋಲುತ್ತಾರೆ.  ಕೋಲಾರ ಜಿಲ್ಲೆಯನ್ನು ನಾವು ಗೆಲ್ಲುತ್ತೇವೆ. ಮಾಜಿ ಪ್ರಧಾನಿ ದೇವೇಗೌಡ ಮನೆಗೆ ಹೋಗ್ತಾರೆ. ಮಂಡ್ಯದಲ್ಲಿ ಸುಮಲತಾ ಗೆ ಅವಮಾನ ಮಾಡುತ್ತಿದ್ದಾರೆ.ನಾನು ಮಂಡ್ಯದಿಂದ ಬಂದವನು, ಸುಮಲತಾಗೆ ಬೇಷರತ್ ಬೆಂಬಲ ಕೊಟ್ಟಿದ್ದೇವೆ. ಅಂಬರೀಶ್ ಮೇಲೆ ಅಂದೂ ಇಂದೂ ಗೌರವ ಇದೆ ಎಂದರು.

ಯಾರಿಗೆ ಒಲಿಯುತ್ತಾರೆ ಚೆಲುವರಾಯಸ್ವಾಮಿ

ಕಾಂಗ್ರೆಸ್ ದೇಶವನ್ನು ದಿವಾಳಿ ಮಾಡಿತ್ತು. ಮೋದಿ ದೇಶವನ್ನು ಸದೃಢ ಮಾಡಿದ್ದಾರೆ. ರಾಹುಲ್ ಗಾಂಧಿ ಒಬ್ಬ ಬಚ್ಚಾ. ರಾಹುಲ್ ಹುಡುಗಾಟಿಕೆ ಮಾತು ಆಡುತ್ತಾನೆ ಎಂದು ಏಕವಚನದಲ್ಲೇ ದಾಳಿ ಮಾಡಿದರು.

ಕುಮಾರಸ್ವಾಮಿದ್ದು  20% ಕಮಿಷನ್ ಸರಕಾರ. ಐಟಿ ಅಧಿಕಾರಿಗಳು ಅವರ ಕರ್ತವ್ಯ ಮಾಡಲಿ ಮುಖ್ಯಮಂತ್ರಿ ಐಟಿ ಅಧಿಕಾರಿಗಳ ಆಪರೇಷನ್ ಬಯಲು ಮಾಡಿದ್ರು. ರಾಜ್ಯದ ಜನ ಇದನ್ನು ಕ್ಷಮಿಸಲ್ಲ ಎಂದು ಬಿಎಸ್‌ ವೈ ಹೇಳಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!