ಪುಲ್ವಾಮಾ ದಾಳಿ ಬಗ್ಗೆ ನಾನು ಮಾತನಾಡಿಲ್ಲ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಯಿಸಿರುವ ಮಾಜಿ ಸಿಎಂ ಜಗದ್ದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ಕೊಪ್ಪಳ, [ಏ.07]: ಪುಲ್ವಾಮಾ ದಾಳಿ ಬಗ್ಗೆ ನಾನು ಮಾತನಾಡಿಲ್ಲ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಜಗದ್ದೀಶ್ ಶೆಟ್ಟರ್, ಕುಮಾರಸ್ವಾಮಿ ಒಂಥರಾ ಹಿಟ್ & ರನ್ ಇದ್ದಂತೆ ಎಂದು ಲೇವಡಿ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಹುಲಗಿ ಗ್ರಾಮದಲ್ಲಿ ಇಂದು [ಭಾನುವಾರ] ಸುದ್ದಿಗಾರರ ಜೊತೆ ಮಾತನಾಡಿದ ಜಗದ್ದೀಶ್ ಶೆಟ್ಟರ್, ಮೊದಲು ಹೇಳುವುದು- ಮೈ ಮೇಲೆ ಬರುತ್ತಿದ್ದಂತೆಯೇ ನಾ ಹೇಳಿಲ್ಲ ಅಂತಾರೆ. ಈ ಹಿಂದೆಯೂ ಸಾಕಷ್ಟು ಬಾರಿ ಹೀಗೆ ಮಾತಾಡಿದ್ದಾರೆ ಎಂದು ಕಿಡಿಕಾರಿದರು.
ಪುಲ್ವಾಮಾ ಬಗ್ಗೆ HDKಗೆ 2 ವರ್ಷದ ಹಿಂದೆಯೇ ಗೊತ್ತಿತ್ತಂತೆ..!
ಇನ್ನು ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಮಾಜಿ ಸಂಸದ ಜಿ.ಮಾದೇಗೌಡ ನಡುವಿನ ಸಂಭಾಷಣೆ ಆಡಿಯೋ ವೈರಲ್ ವಿಚಾರಕ್ಕೆ ಮಾಜಿ ಸಿಎಂ ಜಗದ್ದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಐಟಿ ದಾಳಿ ಆಗಿದ್ದಾಗ ಸಿಎಂ ಕುಮಾರಸ್ವಾಮಿ- ಡಿ.ಕೆ.ಶಿವಕುಮಾರ ಪ್ರತಿಭಟನೆ ಮಾಡಿದ್ದರು.
ಈಗ ಆಡಿಯೋ ವೈರಲ್ ಆಗಿರೋದು ನಾಚಿಕಗೇಡು. ಹಣದ ವ್ಯವಹಾರ ಶುರುವಾಗಿದೆ. ಹಣ ಹಂಚಿಕೆ ಆರಂಭವಾಗಿದೆ. ಮತದಾರರಿಗೆ ಆಮಿಷ ವೊಡ್ಡುವುದು ಆರಂಭವಾಗಿದೆ. ಈ ಆಡಿಯೋ ಮೇಲ್ನೋಟದ ಸಾಕ್ಷಿ ಎಂದರು.