ಸಿದ್ದರಾಮಯ್ಯ ಅಭಿಮಾನಿಗಳನ್ನ ಬಡಿದೆಬ್ಬಿಸಿದ ಶ್ರೀರಾಮುಲು..!

Published : Apr 07, 2019, 06:23 PM ISTUpdated : Apr 07, 2019, 06:33 PM IST
ಸಿದ್ದರಾಮಯ್ಯ ಅಭಿಮಾನಿಗಳನ್ನ ಬಡಿದೆಬ್ಬಿಸಿದ ಶ್ರೀರಾಮುಲು..!

ಸಾರಾಂಶ

ಚಾಮುಂಡೇಶ್ವರಿ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲಿನ ಕಿಚ್ಚಿಗೆ ಇದೀಗ ಶಾಸಕ ಶ್ರೀರಾಮುಲು ತುಪ್ಪ ಸುರಿದಿದ್ದಾರೆ. ಅಷ್ಟೇ ಅಲ್ಲದೇ ಸಿದ್ದು ಅಭಿಮಾನಿಗಳನ್ನ ಬಡಿದೆಬ್ಬಿಸಿದ್ದಾರೆ.

ಮೈಸೂರು, [ಏ.07]: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಕಿಚ್ಚು ಇನ್ನು ಸಿದ್ಧರಾಮಯ್ಯ ಅಭಿಮಾನಿಗಳ ಮನಸ್ಸಿನಿಂದ ಆರಿಲ್ಲ.  ವಿಧಾನಸಭಾ ಸೇಡನ್ನು ಈ ಲೋಕಸಭಾ ಚುನಾವಣೆಯಲ್ಲಿ ತೀರಿಸಿಕೊಳ್ಳಬೇಕೆನ್ನುವುದು ಕೆಲ ಸಿದ್ದು ಅಭಿಮಾನಿಗಳ ಒಕ್ಕೊರಲಿನ ಕೂಗು.

ಇದರ ಮಧ್ಯೆ ಬಿಜೆಪಿ ಶಾಸಕ ಶ್ರೀರಾಮುಲು ಪರೋಕ್ಷವಾಗಿ ಸಿದ್ದರಾಮಯ್ಯ ಅಭಿಮಾನಿಗಳನ್ನ ರೊಚ್ಚಿಗೇಳುವಂತೆ ಮಾಡಿದ್ದಾರೆ. ಇಂದು [ಭಾನುವಾರ] ಮೈಸೂರಿನಲ್ಲಿ  ಮಾತನಾಡಿದ ಶ್ರೀರಾಮುಲು,  ಕಳೆದ ಚಾಮುಂಡೇಶ್ವರಿ ವಿಧಾನಸಭೆಯ ಸೋಲಿನ ಸೇಡು ತೀರಿಸಿಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಹವಣಿಸುತ್ತಿದ್ದು, ದೇವೇಗೌಡರ ಕುಟುಂಬದ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಲೋಕಸಭೆ ಚುನಾವಣೆ ವೇದಿಕೆಯಾಗಿದೆ ಎಂದು ಹೇಳುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದರು. 

ಇತ್ತ ಸಚಿವ ಜಿ.ಟಿ.ದೇವೆಗೌಡರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸೋತರೆ ಜವಾಬ್ದಾರಿ ನಾನಲ್ಲ ಎಂದು ಈಗಾಗಲೇ ತಿಳಿಸಿದ್ದಾರೆ. ಈ ಮೂಲಕ ಮೈತ್ರಿಯಲ್ಲಿ ಸಮನ್ವಯತೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.

 ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಸಚಿವ ಜಿ.ಟಿ.ದೇವೇಗೌಡ ವಿರುದ್ಧ ಸೋತಿದ್ದರು. ಚಾಮುಂಡೇಶ್ವರಿ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯಗೆ ಅವಕಾಶ ಸಿಕ್ಕಿದ್ದು, ತಮ್ಮ ಸೋಲಿನ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿರುವ ಸಿದ್ದರಾಮಯ್ಯ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಮೈತ್ರಿ ಪಕ್ಷದ ಕಾರ್ಯಕರ್ತರಲ್ಲಿ ವೈಮಸ್ಸು ಹುಟ್ಟಿಸಿಸಿವುದು. ಇದರ ಲಾಭ ಬಿಜೆಪಿಗೆ ಸಿಗಲಿದೆ ಎನ್ನುವುದು ರಾಮುಲು ಮಾತಿನ ಒಟ್ಟಾರೆ ತಾತ್ಪರ್ಯ ಆಗಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!