ಉತ್ತರ ಪ್ರದೇಶದಲ್ಲಿ ಮದರಸಾಗಳಿಗೆ ಆಧುನಿಕ ಶಿಕ್ಷಣ ಮೊಬೈಲ್ ಅಪ್ಲಿಕೇಷನ್

By Suvarna News  |  First Published Apr 9, 2022, 3:30 PM IST

*ಉತ್ತರ ಪ್ರದೇಶದ ಮುಸ್ಲಿಂ ಸಮುದಾಯದ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ  ಶಿಕ್ಷಣ
*ಮದರಸಾಗಳಿಗೆ ಮೊಬೈಲ್ ಅಪ್ಲಿಕೇಷನ್ಸ್ ಪರಿಚಯಿಸಲಿರುವ ಯೋಗಿ ಸರ್ಕಾರ
* ಆಧುನಿಕ ಶಿಕ್ಷಣಕ್ಕಾಗಿ ಮದರಸಾ ಪಠ್ಯಕ್ರಮವನ್ನು ಆಧರಿಸಿದ ಅಪ್ಲಿಕೇಶನ್ ಅಭಿವೃದ್ಧಿ 


ಕರ್ನಾಟಕದಲ್ಲಿ ಹಿಂದೂ-ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯ ಕದಡುವಂತಹ ಬೆಳವಣಿಗೆಗಳು ನಡೆಯುತ್ತಿವೆ. ಧರ್ಮ ಸಂಘರ್ಷದಲ್ಲಿ ರಾಜಕೀಯ ಬೆರೆಸಿ ಕಂದಕ ಸೃಷ್ಟಿ ಸಲಾಗುತ್ತಿದೆ. ಬುರ್ಖಾದಿಂದ ಹಿಡಿದು ಪಠ್ಯದವರೆಗೂ, ವ್ಯಾಪಾರದಿಂದ ಹಿಡಿದು ಸಂಚಾರದವರೆಗೂ ಮುಸ್ಲಿಮ್ (Muslim)- ಹಿಂದೂ (Hindu) ಪ್ರತ್ಯೇಕತೆ ಬಗ್ಗೆ ಮಾತನಾಡಲಾಗುತ್ತಿದೆ. ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದ ಉಭಯ ಧರ್ಮೀಯರ ಮನಸ್ಸನ್ನು ಕದಡುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಮತ್ತೊಂದಡೆ ಉತ್ತರ ಪ್ರದೇಶ (Uttar Pradesh)ದಲ್ಲಿ ಬೇರೆಯದ್ದೇ ರೀತಿಯಲ್ಲಿ ಬೆಳವಣಿಗೆಯಾಗುತ್ತಿವೆ. ಕಳೆದ ಚುನಾವವಣೆಯಲ್ಲಿ ಭರ್ಜರಿ  ಜಯದೊಂದಿಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ ಅವರು ಹೊಸ ಇತಿಹಾಸ ನಿರ್ಮಿಸಲು ಹೊರಟಿದ್ದಾರೆ. ಕೆಲವು ಸುದ್ದಿ ಮಾಧ್ಯಮಗಳ ವರದಿಗಳ ಪ್ರಕಾರ, ಉತ್ತರ ಪ್ರದೇಶದ ಮುಸ್ಲಿಮ ಸಮುದಾಯಕ್ಕೆ ಆಧುನಿಕ ಮತ್ತು ಸುಧಾರಿತ ಶಿಕ್ಷಣವನ್ನು ಒದಗಿಸುವ ಉದ್ದೇಶವನ್ನು ಉತ್ತರ ಪ್ರದೇಶ ಸರಕಾರವು ಹೊಂದಿದೆ. 

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ಮಕ್ಕಳಿಗೆ ಆಧುನಿಕ ಮತ್ತು ಸುಧಾರಿತ ಶಿಕ್ಷಣವನ್ನು ಒದಗಿಸಲು ಯೋಗಿ ಸರ್ಕಾರ ಯೋಜನೆ ರೂಪಿಸಿದೆ.  ಮದರಸಾ (Madarasa) ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಮೊಬೈಲ್ ಅಪ್ಲಿಕೇಶನ್ (Mobile App) ಅನ್ನು ಅಭಿವೃದ್ಧಿಪಡಿಸಲು ಸರ್ಕಾರವು ಚಿಂತನೆ ನಡೆಸಿದೆ. ಈ ಪಠ್ಯಕ್ರಮವು ಭಾರತ ಮತ್ತು ಅದರ ಇತಿಹಾಸಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಜೀವನ ಕಥೆಗಳನ್ನು ಸಹ ಒಳಗೊಂಡಿರಅಭಿವೃದ್ಧಿಪಡಿಸಲಾಗುವುದು. ಈ  ಅಪ್ಲಿಕೇಶನ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪಾಠಗಳು ಇರಲಿವೆ. ಆ ಮೂಲಕ ಮದರಸಾಗಳಲ್ಲಿ ಆಧುನಿಕ ಚಿಂತನೆ ಹಾಗೂ ಇತಿಹಾಸದ ಹೆಮ್ಮೆಯ ಸಂಗತಿಗಳ ತಿಳಿಸಿಕೊಡಲು ಸರ್ಕಾರವು ಮುಂದಾಗಿದೆ ಎಂದು ವರದಿಗಳು ಹೇಳುತ್ತಿವೆ. 

Tap to resize

Latest Videos

IIT Kanpurಗೆ ಹಳೆ ವಿದ್ಯಾರ್ಥಿ ದೇಣಿಗೆ: ಪಡೆದಿದ್ದನ್ನು ಸಮಾಜಕ್ಕೆ ಮರಳಿಸೋದು ಅಂದ್ರೆ ಇದಲ್ಲವೇ?

ಅಲ್ಪಸಂಖ್ಯಾತರ ಕಲ್ಯಾಣ ರಾಜ್ಯ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ (Danish Azad Ansari) ಅವರು ಯೋಗಿ ಆದಿತ್ಯನಾಥ್ ಕ್ಯಾಬಿನೆಟ್‌ನಲ್ಲಿ ಏಕೈಕ ಮುಸ್ಲಿಂ ನಾಯಕರೂ ಆಗಿದ್ದು, ಮದರಸಾ ವಿದ್ಯಾರ್ಥಿಗಳು ದೇಶಭಕ್ತಿಯಿಂದ ತುಂಬಿರಬೇಕೆಂದು ಸರ್ಕಾರ ಬಯಸುತ್ತದೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ತುಂಬುವುದು ಮತ್ತು ಉತ್ತಮ ಭವಿಷ್ಯಕ್ಕಾಗಿ ಆಧುನಿಕ ಶಿಕ್ಷಣವನ್ನು ಪಡೆಯಲು ಅವರಿಗೆ ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. 

ಈ ಉದ್ದೇಶಕ್ಕಾಗಿ ಆಧುನಿಕ ಶಿಕ್ಷಣಕ್ಕಾಗಿ ಮದರಸಾ ಪಠ್ಯಕ್ರಮ (Syllabus) ವನ್ನು ಆಧರಿಸಿದ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಅದರಲ್ಲಿ ಮಹಾನ್ ಪುರುಷರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಜೀವನ ಕಥೆಗಳನ್ನು ಕಲಿಸಲಾಗುತ್ತದೆ. ಮದರಸಾ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ತುಂಬಬೇಕು ಎಂದರು. ಯೋಗಿ ಆದಿತ್ಯನಾಥ್ ಸರ್ಕಾರವು ಮುಸ್ಲಿಂ ಸಮುದಾಯದ ಬಡ ಮಹಿಳೆಯರ ಮದುವೆಗೆ ಅನುದಾನವನ್ನು ನೀಡುತ್ತದೆ ಎಂದು ಅನ್ಸಾರಿ ಹೇಳಿದರು.

ಯೋಗಿ ಸರ್ಕಾರವು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಆದಿತ್ಯನಾಥ್ ಅವರು ‘ಸ್ಕೂಲ್ ಚಲೋ ಅಭಿಯಾನ್’ (School Chalo)ಗೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮವು ಪ್ರಾಥಮಿಕ ಶಾಲೆಗಳಲ್ಲಿ 100% ವಿದ್ಯಾರ್ಥಿಗಳ ದಾಖಲಾತಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಎಲ್ಲಾ ಸವಾಲುಗಳನ್ನು ನಿರ್ಮೂಲನೆ ಮಾಡುವತ್ತ ಗಮನಹರಿಸುತ್ತದೆ.

Campus Placement: ಅಮೆಜಾನ್‌ನಲ್ಲಿ 1.18 ಕೋಟಿ ರೂ. ಸಂಬಳದ ನೌಕರಿ ಪಡೆದ ಯುಪಿ ವಿದ್ಯಾರ್ಥಿ

ಮೂಲ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಬೇಕು. ಕೋವಿಡ್ -19 (Covid) ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ನಂತರ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ. ಶಾಲೆಗೆ ಹೋಗದ ಮಕ್ಕಳು ಹಿಂತಿರುಗಲು ಸೋಮಾರಿಯಾಗಬಹುದು. ಆದರೆ ಯಾವುದೇ ಮಗು ಹೊರಗುಳಿಯದಂತೆ ನಾವು ಖಚಿತಪಡಿಸಿಕೊಳ್ಳಬೇಕು ಅನ್ನೋದು ಯೋಗಿಯ ಈ ಸ್ಕೂಲ್ ಚಲೋ ಅಭಿಯಾನದ ಉದ್ದೇಶವಾಗಿತ್ತು. ಇದೀಗ ಯೋಗಿ ಸರ್ಕಾರ, ಮದರಸಾಗಳಿಗಾಗಿ ಯೋಜನೆಗಳನ್ನು ರೂಪಿಸಿ, ಮುಸ್ಲಿಂ ‌ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.  ಅಷ್ಟೇ ಅಲ್ಲ ಇದು ಕೋಮು ಸಂಘರ್ಷ ಏರ್ಪಟ್ಟಿರುವ ರಾಜ್ಯಗಳಿಗೆ ಉತ್ತಮ ಮಾದರಿ ಎನ್ನಬಹುದು.

click me!