IIT Kanpurಗೆ ಹಳೆ ವಿದ್ಯಾರ್ಥಿ ದೇಣಿಗೆ: ಪಡೆದಿದ್ದನ್ನು ಸಮಾಜಕ್ಕೆ ಮರಳಿಸೋದು ಅಂದ್ರೆ ಇದಲ್ಲವೇ?

By Suvarna News  |  First Published Apr 8, 2022, 4:21 PM IST

*ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯ ಸಂಸ್ಥಾಪಕರಿಂದ ಐಐಟಿ ಕಾನ್ಪುರ ಸಂಸ್ಥೆಗೆ ದೊಡ್ಡ ಮೊತ್ತದ ದೇಣಿಗೆ
*ರಾಕೇಶ್ ಗಂಗ್ವಾಲ್ ಅವರು ಐಐಟಿ ಕಾನ್ಪುರ್‌ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ
* ಐಐಟಿ ಕಾನ್ಪುರ್ ಮುಂದಿನ ಎರಡು ವರ್ಷಗಳಲ್ಲಿ ಈ ಒಟ್ಟು ಹಣವನ್ನು ಪಡೆದುಕೊಳ್ಳಲಿದೆ.


ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದ ವ್ಯಕ್ತಿಗಳು, ದೊಡ್ಡ ಬಿಸಿನೆಸ್‌ಮನ್‌ಗಳು, ಯಶಸ್ವಿ ವ್ಯಕ್ತಿಗಳು ತಾವು ಕಲಿತ ಶಾಲೆ, ಕಾಲೇಜ್‌ಗೆ ದೇಣಿಗೆಯನ್ನು ನೀಡುವುದು ಸಾಮಾನ್ಯ. ಈ ಪ್ರಕ್ರಿಯೆ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸಾಕಷ್ಟು ಜನರು ತಮ್ಮ ಸ್ಕೂಲ್, ಕಾಲೇಜ್‌ ದಿನಗಳನ್ನು ಮೆಲುಕು ಹಾಕುತ್ತಾ ತಾವು ಕಲಿತ ವಿದ್ಯಾಸಂಸ್ಥೆಯ ಅಭಿವೃದ್ಧಿಗೆ ನೆರವು ನೀಡುತ್ತಾರೆ. ಈ ಸಾಲಿಗೆ ಇಂಡಿಗೋ ಏರ್‌ಲೈನ್ಸ್‌ (Indigo Airlines)ನ ಸಹ ಸಂಸ್ಥಾಪಕ ರಾಕೇಶ್ ಗಂಗ್ವಾಲ್ (Rakesh Gangwal) ಕೂಡ ಸೇರಿದ್ದಾರೆ. ಗಂಗ್ವಾಲ್ ಅವರು ತಾವು ಕಲಿತೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Indian Institute of Technology Kanpur- IIT Kanpur)ಕಾನ್ಪುರಕ್ಕೆ ಅತಿದೊಡ್ಡ ವೈಯಕ್ತಿಕ ದೇಣಿಗೆ ನೀಡಿ ಉದಾರತೆ ಮೆರೆದಿದ್ದಾರೆ. ಐಐಟಿ  ಕಾನ್ಪುರದ ಹಳೆಯ ವಿದ್ಯಾರ್ಥಿ ರಾಕೇಶ್ ಗಂಗ್ವಾಲ್ ಅವರು ಬರೋಬ್ಬರಿ 100 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಐಐಟಿ ಕಾನ್ಪುರದ ನಿರ್ದೇಶಕ ಅಭಯ್ ಕರಂಡಿಕರ್ (Abhay Karndikar) ಅವರು ಟ್ವಿಟರ್‌ ಮೂಲಕ ಈ ಸುದ್ದಿಯನ್ನ ಬಹಿರಂಗಪಡಿಸಿದ್ದಾರೆ.

Delhi University Job Fair: ಉದ್ಯೋಗಕ್ಕಾಗಿ ವಿದ್ಯಾರ್ಥಿಗಳಿಂದ 30 ಸಾವಿರಕ್ಕೂ ಅಧಿಕ ನೋಂದಣಿ!

Tap to resize

Latest Videos

ಇಂಡಿಗೋ ಏರ್‌ಲೈನ್ಸ್‌ನ ಸಹ-ಸಂಸ್ಥಾಪಕರಾದ ನಮ್ಮ ಹಳೆಯ ವಿದ್ಯಾರ್ಥಿ ರಾಕೇಶ್ ಗಂಗ್ವಾಲ್ ಅವರು ಐಐಟಿ ಕಾನ್ಪುರದಲ್ಲಿ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಶಾಲೆಯನ್ನು ಬೆಂಬಲಿಸಲು 100 ಕೋಟಿ ಕೊಡುಗೆಯೊಂದಿಗೆ ಅತಿದೊಡ್ಡ ವೈಯಕ್ತಿಕ ದೇಣಿಗೆಯನ್ನು ನೀಡಿದ್ದಾರೆ ಎಂದು ಅಭಯ್ ಕರಂಡಿಕರ್ ಅವರು ಟ್ವೀಟ್ ಮಾಡಿದ್ದಾರೆ. ಸಂಪೂರ್ಣ ಮೊತ್ತವನ್ನು ಸಂಸ್ಥೆಯು ಇನ್ನೂ ಸ್ವೀಕರಿಸಿಲ್ಲ ಎಂದು ಐಐಟಿ-ಕೆ ನಿರ್ದೇಶಕ ಅಭಯ್ ಕರಂಡಿಕರ  ತಿಳಿಸಿದ್ದಾರೆ. ಪೂರ್ಣ 100 ಕೋಟಿ ಎರಡು ವರ್ಷಗಳ ಅವಧಿಯಲ್ಲಿ ಸ್ವೀಕರಿಸಲಾಗುವುದು. ಆದರೆ ನಾವು ಈಗಾಗಲೇ ದೊಡ್ಡ ಮೊತ್ತವನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ.

ಈ 100 ಕೋಟಿ ರೂಪಾಯಿ ದೇಣಿಗೆ ಮೊತ್ತವನ್ನು ಐಐಟಿ ಒಮ್ಮೆಗೆ ಸ್ವೀಕರಿಸುವುದು ಇಲ್ಲ ಬದಲಿಗೆ ಮುಂದಿನ ಎರಡು ವರ್ಷಗಳಲ್ಲಿ ಹಂತ ಹಂತವಾಗಿ ಹಣವನ್ನು ಪಡೆಯಲಿದೆ. ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಕಳೆದ ಡಿಸೆಂಬರ್‌ನಲ್ಲಿ 7 ಕೋಟಿ ರೂ. ವರ್ಗಾವಣೆಯಾಗಿದೆ. ಐಐಟಿ ಕಾನ್ಪುರದಲ್ಲಿ ನಿರ್ಮಾಣವಾಗಲಿರುವ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಸ್ಕೂಲ್‌ಗೆ ಈ ಹಣಬಳಕೆಯಾಗಲಿದೆ. ಭಾರತದಲ್ಲಿ ಯಾವುದೇ ಐಐಟಿ ಶಾಖೆಯು ಈ ರೀತಿಯ ವ್ಯವಸ್ಥೆಯನ್ನು ಹೊಂದಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲಾಗುತ್ತದೆ.

 

Here is big news from
In an extraordinary gesture, our alumnus Mr Rakesh Gangwal, Co-Founder of IndiGo airlines has made one of the largest personal donations with a 100 crore contribution focused on supporting the School of Medical Sciences & Technology at IIT Kanpur

— Abhay Karandikar (@karandi65)

ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜಿ (New School of Medical and Sciences Technology) ಯು 450 ಬಜೆಟ್ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳು, 50 ಹಾಸಿಗೆಗಳು-ಕ್ಯಾನ್ಸರ್ ಕೇರ್ ಆಸ್ಪತ್ರೆ ಮತ್ತು ಎಂಜಿನಿಯರಿಂಗ್ ಮತ್ತು ವೈದ್ಯಕೀಯದ ಛೇದಕದಲ್ಲಿ ಕಾರ್ಯನಿರ್ವಹಿಸುವ ಸುಮಾರು ಎಂಟು ಶ್ರೇಷ್ಠತೆಯ ಕೇಂದ್ರಗಳನ್ನು ಒಳಗೊಂಡಿರಲಿದೆ.  ಈ ಯೋಜನೆಯ ಸಂಪೂರ್ಣ ನಿರ್ಮಾಣವು ಸುಮಾರು 600 ಕೋಟಿ ರೂಪಾಯಿ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಸಂಸ್ಥೆಯು ಈಗಾಗಲೇ ಹಳೆಯ ವಿದ್ಯಾರ್ಥಿಗಳಿಂದ ಸುಮಾರು 300-350 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಸ್ವೀಕರಿಸಿದೆ. ಈಗ ಕಟ್ಟಡ ಮತ್ತು ಇತರೆ ಮೂಲಸೌಕರ್ಯಗಳ ನಿರ್ಮಾಣ ಇನ್ನೆರಡು ತಿಂಗಳಲ್ಲಿ ಆರಂಭವಾಗಲಿದೆ. ಸಂಪೂರ್ಣ ಯೋಜನೆ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷಗಳು ಬೇಕಾಗುತ್ತದೆ. 2024 ಅಥವಾ 2025 ರ ಹೊತ್ತಿಗೆ ಯೋಜನೆ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ. 

Fashion Designer: ಫ್ಯಾಶನ್ ಡಿಸೈನ್ ಕ್ಷೇತ್ರದಲ್ಲಿ ಬಹಳಷ್ಟು ಉದ್ಯೋಗವಕಾಶಗಳು

ಕೋಲ್ಕತ್ತಾದಲ್ಲಿ ಜನಿಸಿದ ರಾಕೇಶ್ ಗಂಗ್ವಾಲ್ ಅವರು 1975 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ್‌ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್‌ನಿಂದ MBA ಪದವಿಯನ್ನು ಪೂರ್ಣಗೊಳಿಸಿದರು. ಅವರಿಗೆ ಐಐಟಿ-ಕೆಯ ಡಿಸ್ಟಿಂಗ್ವಿಶ್ಡ್ ಅಲುಮ್ನಸ್ ಪ್ರಶಸ್ತಿಯನ್ನು ಸಹ ನೀಡಲಾಗಿದೆ. ಅವರು ಈಗ ಇಂಡಿಗೋ ಏರ್‌ಲೈನ್ಸ್‌ನ ಸಹ-ಸ್ಥಾಪಕ ಮತ್ತು ಮಾಲೀಕರಾಗಿದ್ದಾರೆ.

click me!