ಅಪ್ಪನ ಸಾವಿನ ನೋವಲ್ಲೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿರುವ ಕರುಣಾಜನಕ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಗೆದ್ಲೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಏ.09): ಅಪ್ಪನ ಸಾವಿನ ನೋವಲ್ಲೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ (SSLC Student) ಪರೀಕ್ಷೆಗೆ (Exam) ಹಾಜರಾಗಿರುವ ಕರುಣಾಜನಕ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಗೆದ್ಲೆಹಳ್ಳಿ ಗ್ರಾಮದಲ್ಲಿ ನಡೆದಿದೆ.
undefined
ಅಪ್ಪನ ಸಾವಿನ ನೋವಲ್ಲೂ ಪರೀಕ್ಷೆ: ಲಿಖಿತ್ (Likhit) ಅಪ್ಪನ ಸಾವಿನ (Father Death) ನೋವಲ್ಲೂ ಪರೀಕ್ಷೆ ಬರೆದ 10ನೇ ತರಗತಿ ವಿದ್ಯಾರ್ಥಿ. ಕಡೂರು ತಾಲೂಕಿನ ಗೆದ್ಲೆಹಳ್ಳಿ ಗ್ರಾಮದ ಲಿಖಿತ ಕಡೂರು ಪಟ್ಟಣದ ಬಿ.ಜಿ.ಎಸ್. ಪ್ರೌಢ ಶಾಲೆಯಲ್ಲಿ ಓದುತ್ತಿದ್ದನು. ಲಿಖಿತ್ ತಂದೆ 41 ವರ್ಷದ ಸಂತೋಷ್ಗೆ ಅನಾರೋಗ್ಯದ ಹಿನ್ನೆಲೆ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸಂತೋಷ್ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಶುಕ್ರವಾರ ಮೃತ ಸಂತೋಷ್ ಅಂತ್ಯಸಂಸ್ಕಾರ. ಆದರೆ, ಅದೇ ದಿನ ಲಿಖಿತ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿತ್ತು. ಶುಕ್ರವಾರ ಅಪ್ಪನ ಅಂತ್ಯಕ್ರಿಯೆಗೇ ಸಿದ್ಧತೆ ನಡೆಯುತ್ತಿರುವಾಗಲೇ ಆ ನೋವಿನಲ್ಲೂ ಲಿಖಿತ್ ಕಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾನೆ.
ಪರೀಕ್ಷೆ ಬರೆದ ನಂತರ ಅಂತ್ಯಕ್ರಿಯೆಯಲ್ಲಿ ಭಾಗಿ: ಪರೀಕ್ಷೆ ಮುಗಿಸಿಕೊಂಡು ಬಂದು ಅಪ್ಪನ ಅಂತ್ಯಕ್ರಿಯೆಯಲ್ಲಿ ಲಿಖಿತ್ ಪಾಲ್ಗೊಂಡಿದ್ದಾನೆ. ಈ ವೇಳೆ ಮಾತನಾಡಿದ ಲಿಖಿತ್, ನಾನು ಚೆನ್ನಾಗಿ ಓದಬೇಕೆಂಬುದು ನನ್ನ ತಂದೆಯ ಆಸೆಯಾಗಿತ್ತು. ಅದನ್ನು ಪೂರೈಸಬೇಕೆಂಬ ಗುರಿಯೊಂದಿಗೆ ಪರೀಕ್ಷೆಗೆ ಹಾಜರಾಗಿದ್ದೇನೆ. ಪರೀಕ್ಷೆಯನ್ನ ಚೆನ್ನಾಗಿ ಬರೆದಿದ್ದೇನೆ ಎಂದಿದ್ದಾನೆ. ಅಪ್ಪನ ಸಾವಿನ ನೋವಿನಲ್ಲೂ ಪರೀಕ್ಷೆ ಬರೆದ ಲಿಖಿತ್ ಬಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಭಾಗದ ಪ್ರೌಢಶಾಲಾ ಮುಖ್ಯಶಿಕ್ಷಕಿ ರೇಖಾ ಕೊಟ್ರೇಶ್, ದುಃಖದಲ್ಲಿದ್ದರೂ ಕೂಡ ಸ್ಥಿತಪ್ರಜ್ಞತೆಯಿಂದ ಪರೀಕ್ಷೆ ಬರೆದ ಲಿಖಿತ್ ಸ್ಥೈರ್ಯ ಮೆಚ್ಚುವಂತದ್ದು ಎಂದಿದ್ದಾರೆ.
Koppal: ಒಬ್ಬ ವಿದ್ಯಾರ್ಥಿಗಾಗಿ 30 ಸಿಬ್ಬಂದಿಯಿಂದ ಪರೀಕ್ಷೆಗೆ ತಯಾರಿ: ಕೊನೆಗೆ ಆತನೇ ಗೈರು ಹಾಜರು
SSLC ಪರೀಕ್ಷೆ ವೇಳೆ ಜೇನುನೊಣ ದಾಳಿ: ಎಸ್.ಎಸ್.ಎಲ್.ಸಿ ಪರೀಕ್ಷೆ (SSLC Exam) ಹಾಲ್ ನಲ್ಲಿ ಜೇನುನೊಣಗಳು (honeybees) ದಾಳಿ ನಡೆಸಿದ ಪರಿಣಾಮ ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ಸೇಂಟ್ ಮೈಕಲ್ ಸ್ಕೂಲ್ ನ (St. Michael High School ) ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಗಣಿತ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಏಕಾಏಕಿ ಜೇನುಹುಳು ದಾಳಿಯಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಜೇನುನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳು ಶಾಲಾ ಸಿಬ್ಬಂದಿ, ಪರೀಕ್ಷಾ ಕೇಂದ್ರದ (Exam Centre) ಭದ್ರತೆ ನಿಯೋಜನೆಗೊಂಡಿದ್ದ ಪೊಲೀಸರು ಓಡಿ ಹೋಗಿದ್ದಾರೆ.
ಜೇನುನೊಣಗಳ ದಾಳಿಯಿಂದ ನಾಲ್ವರು ಗಂಭೀರ ಗಾಯಗಳಾಗಿವೆ. ಗಾಯಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಿಡಿಗೇಡಿಗಳಿಂದ ಜೇನು ಹುಟ್ಟಿಗೆ ಕಲ್ಲು ಎಸೆದಿರಬಹುದು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜೇನುನೊಣಗಳಿ ದಾಳಿ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇನ್ನೂ ಪರೀಕ್ಷಾ ಕೇಂದ್ರದಲ್ಲಿದ್ದ ಮಕ್ಕಳು ಸೇರಿದಂತೆ ಪೊಲೀಸ್ ಸಿಬ್ಬಂದಿಗೂ ಜೇನು ಹುಳುಗಳು ಕಚ್ಚಿದ್ದು, ವಿದ್ಯಾರ್ಥಿ ಇಮಾಮ್, ಹಾಗೂ ಪೋಷಕರಾದ ರಾಜೇಶ್ವರಿ ಕೆ, ಮತ್ತು ಪೊಲೀಸ್ ಸಿಬ್ಬಂದಿ ವಿದ್ಯಾ ದ್ಯಾಮನೂರು ಅವರನ್ನು ಕಿಮ್ಸ್ ಗೆ ದಾಖಲು ಮಾಡಲಾಗಿದೆ.
Child Marriage: ಅಧಿಕಾರಿಗಳ ಎಚ್ಚರಿಕೆ ನಡುವೆಯೂ ಮಂಡ್ಯದಲ್ಲಿ ಬಾಲ್ಯ ವಿವಾಹ
ಜೇನುನೊಣಗಳ ದಾಳಿಯಿಂದ ಮುಖ, ಮೈಕೈ ಮೇಲೆ ತೀವ್ರತರವಾದ ಗಾಯಗಳಾಗಿವೆ. ಧಿಡೀರ್ ದಾಳಿಯಿಂದ ಹಾಲ್ ನಲ್ಲಿದ್ದ ವಿದ್ಯಾರ್ಥಿಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಬಳಿಕ ಸ್ಥಳೀಯರ ಸಹಕಾರದಿಂದ ಟೈರ್ ಹಾಗೂ ಕಸದ ರಾಶಿಗೆ ಬೆಂಕಿಹಚ್ಚಿ ಜೇನುನೊಣಗಳನ್ನು ಚದುರಿಸಲಾಗಿದೆ. ಸ್ಥಳಕ್ಕೆ ಕೇಶ್ವಾಪುರ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ ಭೇಟಿ ನೀಡಿ ಗಾಯಳುಗಳನ್ನು ತಮ್ಮದೆ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ.