ಇಸ್ರೋ ಸೋಲಾರ್ ಮಿಷನ್ ಆದಿತ್ಯ ಎಲ್1 ಹಿಂದಿರುವ ಇಸ್ರೋ ವಿಜ್ಞಾನಿಗಳ ವಿದ್ಯಾರ್ಹತೆ

Published : Sep 08, 2023, 01:11 PM IST
ಇಸ್ರೋ ಸೋಲಾರ್ ಮಿಷನ್ ಆದಿತ್ಯ ಎಲ್1 ಹಿಂದಿರುವ ಇಸ್ರೋ ವಿಜ್ಞಾನಿಗಳ ವಿದ್ಯಾರ್ಹತೆ

ಸಾರಾಂಶ

ಚಂದ್ರಯಾನ3 ಯಶಸ್ಸಿನ ಬಳಿಕ ಇಸ್ರೋ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್‌-1 ಎಂಬ ಬಾಹ್ಯಾಕಾಶ ನೌಕೆಯನ್ನು ಹಾರಿ ಬಿಟ್ಟಿತು. . ಈ ಆದಿತ್ಯ ಎಲ್‌ವಿ ಹಿಂದೆ ಕೆಲಸ ಮಾಡುತ್ತಿರುವ ಇಸ್ರೋದ ವಿಜ್ಞಾನಿಗಳು ಹಾಗೂ ಅವರ ವಿದ್ಯಾರ್ಹತೆ ಇಲ್ಲಿದೆ ನೋಡಿ..

ಬೆಂಗಳೂರು: ಚಂದ್ರಯಾನ3 ಯಶಸ್ಸಿನ ಬಳಿಕ ಇಸ್ರೋ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್‌-1 ಎಂಬ ಬಾಹ್ಯಾಕಾಶ ನೌಕೆಯನ್ನು ಹಾರಿ ಬಿಟ್ಟಿತು. ಸೂರ್ಯನ ಬಗ್ಗೆ ಅಧ್ಯಯನ ನಡೆಸುವ ಉದ್ದೇಶದಿಂದ ಈ ನೌಕೆಯನ್ನು ಸೆಪ್ಟೆಂಬರ್ 2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಕಳುಹಿಸಲಾಗಿದೆ. ಈ ಆದಿತ್ಯ ಎಲ್‌ವಿ ಹಿಂದೆ ಕೆಲಸ ಮಾಡುತ್ತಿರುವ ಇಸ್ರೋದ ವಿಜ್ಞಾನಿಗಳು ಹಾಗೂ ಅವರ ವಿದ್ಯಾರ್ಹತೆ ಇಲ್ಲಿದೆ ನೋಡಿ..

ಮೊದಲನೇಯವರಾಗಿ ಡಾ ಶಂಕರ್ ಸುಬ್ರಮಣಿಯನ್ ಕೆ, ಹಿರಿಯ ವಿಜ್ಞಾನಿಯಾಗಿರುವ ಇವರರನ್ನು ಇಸ್ರೋ ಈ ಆದಿತ್ಯ ಎಲ್1 ಮಿಷನ್‌ನ ಪ್ರಿನ್ಸಿಪಾಲ್ ಸೈಂಟಿಸ್ಟ್ ಆಗಿ ಆಯ್ಕೆ ಮಾಡಿದೆ. ಡಾ. ಶಂಕರ್ ಸುಬ್ರಮನಿಯನ್ ಕೆ ಇವರು ಬಹಳ ಅನುಭವಿ ವಿಜ್ಞಾನಿಯಾಗಿದ್ದು, ಬೆಂಗಳೂರಿನ ಯುಆರ್ ರಾವ್‌ ಸ್ಯಾಟಲೈಟ್  ಸೆಂಟರ್‌ನಲ್ಲಿ ಸೋಲಾರ್‌ ಅಧ್ಯಯನಕ್ಕೆ ಸಂಬಂಧಿಸಿದಂತೆ ವಿಶೇಷತಜ್ಞರಾಗಿದ್ದಾರೆ. ಇದರ ಜೊತೆಗೆ ಇವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮೂಲಕ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪಿಹೆಚ್‌ಡಿ ಮಾಡಿದ್ದಾರೆ. ಸೌರ ಆಯಸ್ಕಾಂತೀಯ ಪ್ರದೇಶ ಆಪ್ಟಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್‌ನಂತಹ ಕ್ಷೇತ್ರಗಳನ್ನು ಇವರ ಸಂಶೋಧನೆಯೂ ಗಮನಹರಿಸಿದೆ.

ಭೂಮಿ, ಚಂದ್ರನ ಫೋಟೋ ಸೆಲ್ಫಿ ತೆಗೆದುಕೊಂಡ ಆದಿತ್ಯ ಎಲ್‌-1 ನೌಕೆ

ಹಾಗೆಯೇ 2ನೇಯವರು ನಿಕರ್ಷ(Nikarsha), ಇವರು ಇಸ್ರೋದ ಮಹಿಳಾ ವಿಜ್ಞಾನಿ ತಮಿಳುನಾಡಿನ ತೆಂಕಾಸಿ (Tenkasi)ಜಿಲ್ಲೆಯ ಸೆಂಗೊಟ್ಟಯೈ ಮೂಲದವಾದ ಇವರು ಆದಿತ್ಯ ಎಲ್‌ ಯೋಜನೆಯ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1978-79ರ ಅವಧಿಯಲ್ಲಿ ಹೆಣ್ಣು ಮಕ್ಕಳ ಸರ್ಕಾರಿ ಹೈಸ್ಕೂಲ್‌ನಲ್ಲಿ 10ನೇ ತರಗತಿ ಪಾಸ್ ಮಾಡಿದ ಇವರು ನಂತರ 1980-81ರ ವೇಳೆಗೆ ಪಿಯುಸಿ ಮುಗಿಸಿದ್ದರು. 1982 ರಿಂದ 1986ರವರೆಗೆ ತಮಿಳುನಾಡಿನ ನೆಲ್ಲೈ ಬಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಇವರು ನಂತರ ಇಸ್ರೋಗಾಗಿ ಕೆಲಸ ಮಾಡಿದ್ದಾರೆ. 

ಕೆಲವೇ ದಿನಗಳ ಹಿಂದೆ ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವುದು ಎಲ್ಲರಿಗೂ ತಿಳಿದೇ ಇದೆ. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಅಧ್ಯಕ್ಷರಾದ ಎಸ್ ಸೋಮನಾಥ್(S Somanath), ಚಂದ್ರಯಾನ 3 ರ ಯೋಜನಾ ನಿರ್ದೇಶಕರಾದ ಪಿ ವೀರಮುತ್ತುವೆಲ್ (P Veeramuthuvel) ಮತ್ತು ಚಂದ್ರಯಾನ -3 ಮಿಷನ್‌ಗೆ ಉಪ ಯೋಜನಾ ನಿರ್ದೇಶಕರಾಗಿದ್ದ ಕಲ್ಪನಾ ಕಾಳಹಸ್ತಿ  (Kalpana Kalahasti) ಚಂದ್ರಯಾನ 3 ಯಶಸ್ಸಿನ ಹಿಂದಿನ ಪ್ರಮುಖ ರೂವಾರಿಗಳಾಗಿದ್ದಾರೆ. ಇವರ ಜೊತೆ ದೇಶದ ವಿವಿಧೆಡೆಯ ಹಲವು ಯುವ ವಿಜ್ಞಾನಿಗಳು ಈ ಯೋಜನೆಯ ಯಶಸ್ಸಿಗೆ ಕೈ ಜೋಡಿಸಿದ್ದಾರೆ. ಚಂದ್ರಯಾನ 3 ರ ಯಶಸ್ಸಿನ ಹಿಂದೆ ಇರುವ ಇಸ್ರೋದ ವಿಜ್ಞಾನಿಗಳು ಐಐಟಿ ಖರಗ್‌ಪುರ( IIT Kharagpur), ಐಐಎಸ್‌ಸಿ ಬೆಂಗಳೂರು ಮುಂತಾದ ಗೌರವಾನ್ವಿತ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದ್ದಾರೆ.

ಭಾರತಕ್ಕೆ ಕತ್ತಲು ಆವರಿಸುತ್ತಿರುವ ಸುಂದರ ವಿಡಿಯೋ ಸೆರೆ ಹಿಡಿದ ಆದಿತ್ಯ ಎಲ್‌1 ನೌಕೆ!

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ