ಕೋವಿಡ್ ಸೋಂಕಿನ ಮಧ್ಯೆಯೂ ಮಕ್ಕಳು ಓಡಾಡ್ಕೊಂಡು ಕಲಿಯಬಹುದು!

By Suvarna News  |  First Published Nov 20, 2020, 10:12 AM IST

ಕೋವಿಡ್ ಮಧ್ಯಯೇ ಮಕ್ಕಳನ್ನು ಹೇಗೆ ಚಟುವಟಿಕೆಯಲ್ಲಿಡಬೇಕು ಎಂಬ ಬಗ್ಗೆ ಆಗಾಗ ಪ್ರಯೋಗಗಳು ಆಗುತ್ತಲೇ ಇವೆ. ಪಶ್ಚಿಮ ಬಂಗಾಳದ ಸಾರಿಗೆ ನಿಮಗವು ಮಕ್ಕಳಿಗೋಸ್ಕರವೇ ಸಂಚಾರಿ ಲೈಬ್ರರಿಯನ್ನು ಆರಂಭಿಸಿದೆ. ಸೋಂಕಿನಿಂದಾಗಿ ಮನೆಯಲ್ಲೇ ಇರುವ ಮಕ್ಕಳು ಈ ಟ್ರಾಮ್ ಲೈಬ್ರರಿಯಲ್ಲಿ ಮುಕ್ತವಾಗಿ ಓಡಾಡ್ಕೊಂಡು ಓದಬಹುದು. ಕಲಿಯಬಹುದು, ನಲಿಯಬಹುದು.
 


ಈ ವರ್ಷ ಕೊರೊನಾ , ಕಾಟದಿಂದ ಮಕ್ಕಳ ಶೈಕ್ಷಣಿಕ ಜೀವನ ಹಳಿ ತಪ್ಪಿದಂತಹ ರೈಲಿನಂತಾಗಿದೆ. ಯಾವಾಗಲೂ ತರಗತಿ ಆಟ-ಪಾಠ ಅಂತ ಲವಲವಿಕೆಯಿಂದ ಇರುತ್ತಿದ್ದ ಪುಟ್ಟ ಮಕ್ಕಳು ಈಗ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದಾರೆ. ಮೊದಲೆಲ್ಲ ಮೊಬೈಲ್, ಲ್ಯಾಪ್ ಟಾಪ್, ಟಿವಿ ಮುಂದೆ ಮಕ್ಕಳನ್ನ ಹೆಚ್ಚು ಹೊತ್ತು ಕೂರಿಸಬೇಡಿ ಅಂತ ಹೇಳ್ತಿದ್ವಿ. ಆದ್ರೆ ಈಗ ವಿಧಿಯಿಲ್ಲದೇ ಗಂಟೆಗಟ್ಟಲೇ ಮಕ್ಕಳು ಮೊಬೈಲ್, ಲ್ಯಾಪ್ ಟಾಪ್ ಮುಂದೆ ಕೂರುವಂತಾಗಿದೆ. ಅವರಿಗೆ ಒಂದು ರೀತಿಯ ಹೊರ ಪ್ರಪಂಚದ ಸಂಪರ್ಕವೇ ಇಲ್ಲದಂತಾಗಿದೆ. ಮನೆಯಿಂದ ಹೊರಗೆ ಕಾಲಿಡಲು ಆಗುತ್ತಿಲ್ಲ. ಇನ್ನೊಂದೆಡೆ ಆನ್‌ಲೈನ್ ಶಿಕ್ಷಣವೇ ಎಲ್ಲ ಎಂಬಂತಾಗಿದೆ. ಆದ್ರೆ ಇಲ್ಲೊಂದು ರಾಜ್ಯದಲ್ಲಿ ಮಕ್ಕಳು ಆರಾಮಾಗಿ ಓಡಾಡಿಕೊಂಡು ಕಲಿಯಬಹುದು. ಮನೆಯಿಂದ ಹೊರಗೆ ಬಂದು, ತಮ್ಮಿಷ್ಟದ ಕಲಿಕೆಯಲ್ಲಿ ತೊಡಗಬಹುದು. ಅದ್ಹೇಗೆ ಗೊತ್ತಾ? ಸಂಚಾರಿ ಲೈಬ್ರರಿ ಮೂಲಕ. 

ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆ ಸೇರಿದ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು
 

Latest Videos

undefined

ಪಶ್ಚಿಮ ಬಂಗಾಳ ಸಾರಿಗೆ ನಿಗಮ, ಮಕ್ಕಳಿಗಾಗಿ ವಿಶೇಷ ಸಂಚಾರಿ ಗ್ರಂಥಾಲಯ ವ್ಯವಸ್ಥೆ ಮಾಡಿದೆ. ಅಪೀಜೆ ಆನಂದ್ ಚಿಲ್ಟ್ರನ್ಸ್ ಲೈಬ್ರರಿ ಜತೆಗೂಡಿ ಜಗತ್ತಿನ ಮೊದಲ ಟ್ರಾಮ ಲೈಬ್ರರಿಯನ್ನ ಶುರು ಮಾಡಿದೆ. ಈ ಚಲಿಸುವ ಲೈಬ್ರರಿಯನ್ನ ಸುಂದರವಾಗಿ ಅಲಂಕರಿಸಲಾಗಿದೆ. ಮಕ್ಕಳು ಓದುತ್ತಿರುವ ಆಕರ್ಷಕ ಕಲಾಕೃತಿಗಳು, ಸ್ತಳೀಯ ಕಲಾವಿದರು ಬಿಡಿಸಿರುವ ವರ್ಣಚಿತ್ರಗಳಿಂದ ಟ್ರಾಮ ಕಾರನ್ನು ಸಿಂಗರಿಸಲಾಗಿದೆ. ಈ ವಾಹನವನ್ನು ಹತ್ತುತ್ತಿದ್ದಂತೆ ಪುಟಾಣಿ ಮಕ್ಕಳನ್ನ ಆಕರ್ಷಿಸುವ ರೀತಿಯಲ್ಲಿ ಶೆಲ್ಪ್‌ಗಳಲ್ಲಿ ಪುಸ್ತಕಗಳನ್ನ ಜೋಡಿಸಲಾಗಿದೆ. ಮಕ್ಕಳು ಖುಷಿಯಿಂದ ಓದಲು ಬೇಕಾದ ವಾತಾವರಣವನ್ನ ನಿರ್ಮಿಸಲಾಗಿದೆ.

ಆಕ್ಸ್‌ಫರ್ಡ್ ಬುಕ್ ಸ್ಟೋರ್ಸ್ ಮೂಲಕ ಈ ವರ್ಷ ಸಾಹಿತ್ಯ ಎಲ್ಲರಿಗೂ ಲಭ್ಯವಾಗುವಂತೆ ಮಾಡಲಾಗಿದೆ. ಕೊಲ್ಕತ್ತಾ ಯಂಗ್ ರೀಡರ್ಸ್ ಟ್ರಾಮ ಕಾರಿನಲ್ಲಿ ಮಕ್ಕಳ ವಯೋಮಾನ ತಕ್ಕಂತ ಸಾಹಿತ್ಯ ಭಂಡಾರವಿದೆ. ೧೮ ವರ್ಷದೊಳಗಿನ ಯಾವುದೇ ಯಂಗ್ ಪ್ಯಾಸೆಂಜರ್ ಈ ಟ್ರಾಮ ಕಾರಿನಲ್ಲಿ ಪ್ರಯಾಣಿಸಬಹುದು.

OnePlus Education Benefits: ಟಿವಿ ಖರೀದಿಸಿದರೆ ಸಾವಿರ ರೂ. ಆಫರ್!

ಈ ಮೊಬೈಲ್ ಗ್ರಂಥಾಲಯಕ್ಕೆ ಡಬ್ಲ್ಯೂಬಿಟಿಸಿ ಎಂಡಿ ರಜನ್ವೀರ್ ಸಿಂಗ್ ಕಪೂರ್ ಹಾಗೂ ಅಪೀಜೆ ಡೈರೆಕ್ಟರ್ ಸುರೇಂದ್ರ ಪ್ರೀತಿ ಪಾಲ್, ಆನ್‌ಲೈನ್ ಮೂಲಕ ನವೆಂಬರ್ ೧೪ರಂದು ಚಾಲನೆ ನೀಡಿದ್ದಾರೆ. ಈ ಟ್ರಾಮ ಕಾರು ಶ್ಯಾಮ ಬಜಾರ್ ಹಾಗೂ ಎಸ್‌ಪ್ಲಾನೇಡ್ ಮಾರ್ಗದಲ್ಲಿ ಸಂಚರಿಸಲಿದೆ. ಎಸ್‌ಪ್ಲಾನೇಡ್ ಗರಿಯಾಹಟ್, ಉತ್ತರ ಹಾಗೂ ದಕ್ಷಿಣ ಕೊಲ್ಕತ್ತಾವನ್ನ ಸಂಪರ್ಕಿಸಲಿದೆ. 

ಟ್ರಾಮ ಕಾರಿನಲ್ಲಿ ವರ್ಷಪೂರ್ತಿ ಮಕ್ಕಳು ಕಲಿಯಲು ನೆರವಾಗುವಂಥ ಚಟುವಟಿಕೆಗಳಿರುತ್ತವೆ. ನಾಟಕೀಯವಾಗಿ ಕಥೆ ಹೇಳುವುದು, ಕಾವ್ಯ ವಿಭಾಗಗಳು, ಪುಸ್ತಕಗಳು, ಮ್ಯೂಸಿಕ್ ಹಾಗೂ ಮಕ್ಕಳ ಮನಸ್ಥಿತಿಗೆ ಹೊಂದುವ ಕಾರ್ಡ್‌ಗಳು ಕೂಡ ಇಲ್ಲಿವೆ. ಟ್ರಾಮವನ್ನು ಆಕರ್ಷಣೀಯವಾಗಿ ವಿನ್ಯಾಸಗೊಳಿಸುವಂತಹ ಕೆಲವು ಪ್ರಾರಂಭಿಕ ಕ್ರಮಗಳನ್ನ ಸಾರಿಗೆ ನಿಗಮ ತೆಗೆದುಕೊಂಡಿದ್ದು, ಮೊದಲ ಹಂತವಾಗಿ ಎಸ್‌ಪ್ಲಾನೆಡ್ ಹಾಗೂ ಶ್ಯಾಮಬಜಾರ್ ಮಾರ್ಗದಲ್ಲಿ ಲೈಬ್ರರಿಯನ್ನ ಲಾಂಚ್ ಮಾಡಿದೆ. 



 ಇನ್ನು ಆಕ್ಸ್‌ಫರ್ಡ್ ಬುಕ್‌ಸ್ಟೋರ್ ನಿರ್ದೇಶಕರಾದ ಮೈನಾ ಭಗತ್ ಅವರು, ಕೊಲ್ಕತ್ತಾ ಯಂಗ್ ರೀಡರ್ಸ್ ಟ್ರಾಮ್ ಕಾರ್ ಮೂಲಕ ನಮ್ಮ ಪುರಾತನ ಆಕ್ಸ್‌ಫರ್ಡ್ ಬುಕ್ ಸ್ಟೋರ್ ಕೊಲ್ಕತ್ತಾದಲ್ಲಿ ಎಲ್ಲ ವರ್ಗದ ಓದುಗರನ್ನ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ.  ಸೃಜನಶೀಲ ವ್ಯಕ್ತಿತ್ವವನ್ನು ನಿಜವಾಗಿಯೂ ಪ್ರತಿಬಿಂಬಿಸುವಂತಹ ಈ ಚಲಿಸುವ ಸಂಸ್ಕೃತಿಯನ್ನು ಪ್ರಚೋದಿಸುತ್ತಿರುವ ನಮ್ಮ ಸಹಭಾಗಿ ಸಾರಿಗೆ ನಿಗಮಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ. 

ಕೊರೋನಾ ಭಯ: ವಿದೇಶದಲ್ಲಿ ಶಾಲೆ ತೆರೆದರೂ ಮಕ್ಕಳು ಬರ್ತಿಲ್ಲ, ಎಡ್ಮಿಶನ್‌ನಲ್ಲಿ ಭಾರೀ ಕುಸಿತ
 

click me!