ವಿದ್ಯಾಕಾಶಿ ಧಾರವಾಡಲ್ಲಿ ಸರ್ಕಾರಿ ಶಾಲೆಯ 496 ಕೊಠಡಿಗಳು ಶಿಥಿಲ: ಜೀವಭಯದಲ್ಲಿ ಮಕ್ಕಳಿಗೆ ಪಾಠ ಭೋದನೆ

By Sathish Kumar KH  |  First Published Aug 1, 2023, 6:22 PM IST

ರಾಜ್ಯದ ವಿದ್ಯಾಕಾಶಿ ಎಂದು ಕರೆಯುವ ಧಾರವಾಡ ಜಿಲ್ಲೆಯಲ್ಲಿಯೇ ಸರ್ಕಾರಿ ಶಾಲೆಯ 1,500ಕ್ಕೂ ಅಧಿಕ ಕೊಠಡಿ ದುರಸ್ತಿಗೊಂಡಿದೆ. ಈ ಪೈಕಿ 492 ಶಾಲಾ ಕೊಠಡಿಗಳು ಶಿಥಿಲಗೊಂಡಿವೆ.


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಆ.01): ರಾಜ್ಯದ ವಿದ್ಯಾಕಾಶಿ ಎಂದು ಕರೆಯುವ ಧಾರವಾಡ ಜಿಲ್ಲೆಯಲ್ಲಿಯೇ ಶಿಕ್ಷಣ ಪ್ರಸಾರ ಮಾಡುವ ಸರ್ಕಾರಿ ಶಾಲೆಯ ಸುಮಾರು 1,500ಕ್ಕೂ ಅಧಿಕ ಕೊಠಡಿಗಳು ದುರಸ್ತಿಗೊಂಡಿದೆ. ಈ ಪೈಕಿ 492 ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ಮಕ್ಕಳು ಜೀವಭಯದಲ್ಲಿಯೇ ಪಾಠ ಕೇಳುವಂತಾಗಿದೆ. 

Tap to resize

Latest Videos

undefined

ಧಾರವಾಡ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಮನೆ, ಕಟ್ಟಡ ಹಾಗೂ ಶಾಲಾ ಕೊಠಡಿಗಳು ಕುಸಿದಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಎಷ್ಟು ಶಾಲಾ ಕಟ್ಟಡ ಮಳೆಗೆ ಡ್ಯಾಮೇಜ್ ಆಗಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಒಬ್ಬರು ಇನ್ನೊಬ್ಬರ ಮೆಲೆ ಹಾಕ್ತಾ ಕಾಲವನ್ನ ಕಳೆಯುತ್ತಿದ್ದಾರೆ. ಆದರೆ‌, ಯಾವುದೆ ಕಾರಣಕ್ಕೂ ಸ್ಥಾನಿಕ ಚೌಕಾಸಿ ಮಾಡಿ ಕೋಠಡಿಗಳ ಬಗ್ಗೆ ಯಾರು ಹೋಗ್ತಾ‌ ಇಲ್ಲ ಅನ್ನೋ ಆರೋಪಗಳು ಕೇಳಿಬರುತ್ತಿವೆ. 

ನಿರಂತರ ಮಳೆ: ಒಂದೇ ದಿನಕ್ಕೆ 198 ಮನೆ, ಒಟ್ಟು 692 ಮನೆ ನೆಲಸಮ!

ಹಲವು ಅಪಾಯಕಾರಿ ಘಟನೆಗಳು ವರದಿ: ಕಳೆದ ಒಂದು ವಾರದಿಂದ ಧಾರವಾಡ ತಾಲೂಕಿನ ಬೋಗುರು ಸರಕಾರಿ ಶಾಲೆಯ ಕಟ್ಟಡದ ಮೇಲ್ಚಾವಣೆ ಕುಸಿದು ಮೂವರು ಮಕ್ಕಳಿಗೆ ಪೆಟ್ಟಾಗಿತ್ತು. ತದನಂತರ ಅಳ್ನಾವರ ತಾಲೂಕಿನ ಶಿವನಗರ ಸರಕಾರಿ ಪ್ರಾಥಮಿಕ ಶಾಲೆಯ ಎರಡು ಕೊಠಡಿ ಕುಸಿದಿದೆ..ಇದೆ ರೀತಿ ಜಿಲ್ಲೆಯಲ್ಲಿ ಶಾಲಾ ಕೋಠಡಿಗಳು ಬೀಳುವ ಸ್ಥತಿಯಲ್ಲಿವೆ.ಆದರೆ ಅಂತಹ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ ಅವರು ಬೇಟಿ ನೀಡಿ ಅಧಿಕಾರಿಗಳಿಗೆ ಸರಿ ಮಾಡಿಕೊಡುವಂತೆ ಸೂಚನೆ ನೀಡಿದ್ದಾರೆ.

1,105 ಶಾಲಾ ಕೊಠಡಿಗಳಿಗೆ ಸಣ್ಣಪುಟ್ಟ ದುರಸ್ತಿ ಅಗತ್ಯ: ವಿದ್ಯಾಕಾಶಿ ಧಾರವಾಡ ಜಿಲ್ಲೆ ಪ್ರಾಥಮಿಕ ಮತ್ತು  ಶಾಲೆಗಳ ಬರೊಬ್ಬರಿ 492 ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ ಅವುಗಳ ದುರಸ್ತಿಗಾಗಿ ಡಿಸೆಂಬರ್‌ನಲ್ಲೇ ಟೆಂಡರ್ ಕರೆಯಲಾಗಿದ್ದು ಇಂದಿಗೂ ಕೂಡ ಶಾಲಾ ಕೊಠಡಿಗಳು ಮರು ನಿರ್ಮಾಣಗೊಂಡಿಲ್ಲ. ಈ 492 ಕೊಠಡಿಗಳನ್ನು ಕೆಡವಿ ಮರು ನಿರ್ಮಾಣ ಮಾಡಬೇಕಿದೆ. ಅದರಂತೆ 1,105 ಶಾಲಾ ಕೊಠಡಿಗಳಲ್ಲಿ ಸಣ್ಣ ಪುಟ್ಟ ದುರಸ್ತಿ ಕೆಲಸಗಳಿದ್ದು, ಆ ಕೆಲಸ ಆಗಬೇಕಿದೆ. ಈ ಕಟ್ಟಡ ಕಾಮಗಾರಿ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಕೂಡಾ ಕಳಿಸಲಾಗಿದೆ.‌ಈಗ ಅಲ್ಲಿಂದ ಟೆಂಡರ್ ಆಗಿ ಇದಕ್ಕೆ ಅನುಮತಿ ಸಿಕ್ಕ ಮೇಲೆ ದುರಸ್ತಿ ಹಾಗೂ ನೂತನ ಕಟ್ಟಡ ಆಗಬೇಕಿದೆ.‌ ಸದ್ಯ ಧಾರವಾಡ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸುರಿದ ಮಳೆಯಿಂದಾಗಿ ಮತ್ತಷ್ಟು ಶಾಲಾ ಕೊಠಡಿಗಳು ಸೋರುತ್ತಿವೆ. ಅಲ್ಲಲ್ಲಿ ಶಾಲಾ ಗೋಡೆ ಸಹ ಕುಸಿದು ಬಿದ್ದಿವೆ. 

  • ತಾಲೂಕುವಾರು ಶಿಥಿಲ ಶಾಲಾ ಕೊಠಡಿಗಳ ವಿವರ:
  • ಅಳ್ನಾವರ- 20
  • ಧಾರವಾಡ ಶಹರ - 31
  • ಧಾರವಾಡ ಗ್ರಾಮೀಣ - 79
  • ಹುಬ್ಬಳ್ಳಿ ಶಹರ- 48
  • ಹುಬ್ಬಳ್ಳಿ ಗ್ರಾಮೀಣ- 47
  • ಕಲಘಟಗಿ- 75
  • ಕುಂದಗೋಳ- 82
  • ನವಲಗುಂದ- 66
  • ಅಣ್ಣಿಗೇರಿ - 44 

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ದುರಸ್ತಿ ಭರವಸೆ: ಧಾರವಾಡ ಜಿಲ್ಲೆಯಲ್ಲಿ ಅಳ್ನಾವರ ಭಾಗ ಸೇರಿ ಧಾರವಾಡ ಗ್ರಾಮೀಣ ಹಾಗೂ ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿಯೇ ಅತಿಯಾದ ಮಳೆಯಾಗಿದ್ದು, ಹೆಚ್ಚು ಶಾಲೆಗಳಿಗೆ ಹಾನಿ ಉಂಟಾಗಿದೆ. ಆದರೆ ಮಕ್ಕಳಿಗೆ ಈಗ ದುರಸ್ತಿ ಇರುವ ಕಟ್ಟಡದಲ್ಲಿ ಕುಳಿತುಕೊಳ್ಳೊದು ಕೂಡಾ ದೊಡ್ಡ ಸಮಸ್ಯೆ ಯಾಕಂದ್ರೆ ಮಳೆಯಿಂದ ಈಗಾಗಲೇ ಶಾಲೆಯ ಕೊಠಡಿಗಳು ನೆನದು ಹೋಗಿದ್ದು, ಶಾಲೆ ಆರಂಭ ಇದ್ದಾಗ ಬಿದ್ದರೆ ದೊಡ್ಡ ದುರಂತ ಆಗಲಿದೆ. ‌‌ಸದ್ಯ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಹ‌ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಶಾಲೆಗಳನ್ನು ಮತ್ತೆ ರಿಪೇರಿ ಕಾರ್ಯಕ್ಕೆ ಮುಂದಾಗುತ್ತೇವೆ. ಈ ಬಗ್ಗೆ ಅಧಿಕಾರಿಗಳ ಸಭೆ ಕೂಡಾ ಮಾಡಿರುವ ಬಗ್ಗೆ ಹೇಳಿದ್ದಾರೆ. 

ಕೆಆರ್‌ಎಸ್‌ ಡ್ಯಾಂ 35 ಟಿಎಂಸಿ ಭರ್ತಿ: ಬೆಂಗಳೂರಿಗೆ ಕಾವೇರಿ ಕುಡಿಯುವ ನೀರಿನ ಆತಂಕ ದೂರ

ಒಟ್ಟಾರೆ ಕಳೆದ 15 ದಿನಗಳಿಂದ ಸುರಿದ ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಮತ್ತಷ್ಟು ಶಾಲಾ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಸರ್ಕಾರ ಕೂಡಲೇ ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಟ್ಟು ಕಲಿಯುವ ಮಕ್ಕಳ ರಕ್ಷಣೆ ಜೊತೆಗೆ ವಿದ್ಯಾಕಾಶಿ ಎಂಬ ಧಾರವಾಡದ ಮಾನಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕಿದೆ.. ಇನ್ನು ಶಾಲಾ ಕೋಠಡಿಗಳು ಬಿದ್ದು ಮಕ್ಕಳಿಗೆ ಪೆಟ್ಟಾದ್ರೆ ಯಾರು ಹೊಣೆ ಎಂದು ಪೋಷಕರು ಕೇಳುತ್ತಿದ್ದಾರೆ.

click me!