Karnataka NEET PG 2023: ಆಗಸ್ಟ್ 4ರಿಂದ 11ರವರೆಗೆ ಮೂಲ ದಾಖಲಾತಿಗಳ ಪರಿಶೀಲನೆ

By Gowthami KFirst Published Aug 1, 2023, 11:25 AM IST
Highlights

ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶ ಬಯಸಿರುವ ಅರ್ಹ ನೀಟ್‌  ರ‍್ಯಾಂಕಿಂಗ್   ಅಭ್ಯರ್ಥಿಗಳಿಗೆ ಆಗಸ್ಟ್ 4ರಿಂದ 11ರ ವರೆಗೆ ಮೂಲ ದಾಖಲಾತಿಗಳ ಪರಿಶೀಲನೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಬೆಂಗಳೂರು (ಆ.1): ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶ ಬಯಸಿರುವ ಅರ್ಹ ನೀಟ್‌  ರ‍್ಯಾಂಕಿಂಗ್ ಅಭ್ಯರ್ಥಿಗಳಿಗೆ ಆಗಸ್ಟ್ 4ರಿಂದ 11ರ ವರೆಗೆ ಮೂಲ ದಾಖಲಾತಿಗಳ ಪರಿಶೀಲನೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ನಿಗದಿತ ದಿನಗಳಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6.15ರವರೆಗೆ ಈ ಪ್ರಕ್ರಿಯೆ ನಡೆಯಲಿದೆ. ಯಾವ ದಿನಗಳಂದು ಯಾವ ರಾರ‍ಯಂಕಿಂಗ್‌ನವರು ದಾಖಲಾತಿಗಳ ಪರಿಶೀಲನೆಗೆ ಹಾಜರಾಗಬೇಕು ಎಂಬುದನ್ನು ಪ್ರಾಧಿಕಾರದ ವೆಬ್‌ಸೈಟ್‌ https://cetonline.karnataka.gov.in/kea/ ನಲ್ಲಿ ಪ್ರಕಟಿಸಲಾಗಿದೆ. ಆಯಾ ದಿನದಂದು ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಮಲ್ಲೇಶ್ವರಂನಲ್ಲಿರುವ ಪ್ರಾಧಿಕಾರದ ಕೇಂದ್ರ ಕಚೇರಿಗೆ ಹಾಜರಾಗಬೇಕು. ಈ ಪ್ರಕ್ರಿಯೆಯಲ್ಲಿ ಲ್ಯಾಮಿನೇಟ್‌ ಮಾಡಿರುವ ಮೂಲ ದಾಖಲೆಗಳನ್ನು ಪರಿಗಣಿಸುವುದಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರೋಬ್ಬರಿ 35 ಬಾರಿ ಪರೀಕ್ಷೆಯಲ್ಲಿ ಫೇಲ್, UPSC ಎರಡು ಬಾರಿ ಪಾಸಾಗಿ ಐಎಎಸ್‌ ಅಧಿಕಾರಿಯಾದ ವ್ಯಕ್ತಿ! 

Latest Videos

ವೃತ್ತಿಪರ ಕೋರ್ಸ್‌ಗಳಿಗೆ ಏಕಕಾಲಕ್ಕೆ ಸೀಟು ಹಂಚಿಕೆ:
ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಇದುವರೆಗೂ ಪ್ರತ್ಯೇಕವಾಗಿಯೇ ಸೀಟು ಹಂಚಿಕೆ ಪ್ರಕ್ರಿಯೆ ನಡೆಸುತ್ತಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಸಕ್ತ ಸಾಲಿನಿಂದ ಎಲ್ಲ ಕೋರ್ಸುಗಳಿಗೂ ಒಟ್ಟಿಗೆ ಸೀಟು ಹಂಚಿಕೆ ನಡೆಸಲು ತೀರ್ಮಾನಿಸಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ವಿಳಂಬವನ್ನು ತಪ್ಪಿಸಲು ಸುಧಾರಣಾ ಕ್ರಮ ಕೈಗೊಂಡು ಇದೇ ಮೊದಲ ಬಾರಿ ಎಲ್ಲ ಕೋರ್ಸುಗಳಿಗೂ ಒಟ್ಟಿಗೆ ಸೀಟು ಹಂಚಿಕೆ ಮಾಡಲಾಗುತ್ತಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್‌, ಪಶುವೈದ್ಯಕೀಯ, ಕೃಷಿ, ನರ್ಸಿಂಗ್‌, ಆರ್ಕಿಟೆಕ್ಟ್ ಹಾಗೂ ಫಾರ್ಮಸಿ ಕೋರ್ಸುಗಳ ಪ್ರವೇಶಕ್ಕೆ ಈ ಬಾರಿ ಸಂಯೋಜಿತ ಸೀಟು ಹಂಚಿಕೆ (ಕಂಬೈನ್ಡ್ ಸೀಟ್‌ ಅಲಾಟ್ಮೆಂಟ್‌) ಮಾಡಲಾಗುತ್ತದೆ. ಹೀಗೆ ಮಾಡುತ್ತಿರುವುದು ಇದೇ ಮೊದಲು ಎಂದು ಅವರು ವಿವರಿಸಿದ್ದಾರೆ.

ಪ್ರತ್ಯೇಕ ಸೀಟು ಹಂಚಿಕೆ ಪ್ರಕ್ರಿಯೆಯಿಂದಾಗಿ ಸಾಕಷ್ಟುಅನಾನುಕೂಲಗಳು ಇದ್ದವು. ಒಬ್ಬ ಅಭ್ಯರ್ಥಿ ಒಮ್ಮೆಗೇ ಒಂದಕ್ಕಿಂತ ಹೆಚ್ಚು ಕೋರ್ಸುಗಳಲ್ಲಿ ಸೀಟು ಪಡೆದು, ನಂತರ ಆತ ಯಾವುದಾದರೂ ಒಂದಕ್ಕೆ ಪ್ರವೇಶ ಪಡೆಯುವವರೆಗೂ ಉಳಿದ ಕೋರ್ಸುಗಳಲ್ಲಿನ ಸೀಟು ಬೇರೆಯ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿರಲಿಲ್ಲ. ಇದರಿಂದ ಪ್ರತಿಭಾವಂತರಿಗೆ ಆಯ್ಕೆ ಸುತ್ತಿನಲ್ಲಿ ಸೀಟು ಕೈತಪ್ಪುತ್ತಿತ್ತು. ಅಭ್ಯರ್ಥಿಗಳು ಯಾವುದೇ ಕೋರ್ಸುಗಳಿಗೆ ಪ್ರವೇಶ ಬಯಸಿದ್ದಲ್ಲಿ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಾರ ಶುಲ್ಕ ಮತ್ತು ಲಭ್ಯವಿರುವ ಸೀಟುಗಳನ್ನು ಪರಿಶೀಲಿಸಿ, ನಂತರ ತಮ್ಮ ಆದ್ಯತೆಯನುಸಾರ ಸೀಟುಗಳ ಆಪ್ಷನ್‌ ಎಂಟ್ರಿ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

NEET UG Counselling 2023: ಕರ್ನಾಟಕ ಸೇರಿ ರಾಜ್ಯವಾರು ನೋಂದಣಿ ದಿನಾಂಕ, 

ಸಂಯೋಜಿತ ಸೀಟು ಹಂಚಿಕೆ ಹೇಗೆ?:
ಅಭ್ಯರ್ಥಿಯು ಆಪ್ಷನ್‌ ಎಂಟ್ರಿ ಮಾಡುವಾಗ ತನ್ನ ಮೊದಲ ಆದ್ಯತೆಯ ಕೋರ್ಸು ಯಾವುದು, ಎರಡನೇ ಆದ್ಯತೆಯ ಕೋರ್ಸು ಯಾವುದು ಹಾಗೇ ಮೂರು, ನಾಲ್ಕನೇ ಹೀಗೆ ಆದ್ಯತೆಯ ಮೇಲೆ ಕೋರ್ಸುಗಳನ್ನು ದಾಖಲಿಸಬೇಕಾಗುತ್ತದೆ. ಉದಾಹರಣೆಗೆ ಮೊದಲ ಆದ್ಯತೆಯಲ್ಲಿ ವೈದ್ಯಕೀಯ ಕೋರ್ಸು ಬೇಕೆಂದು ದಾಖಲಿಸಿದ ಅಭ್ಯರ್ಥಿ, ಒಂದು ವೇಳೆ ಅದು ಸಿಗದಿದ್ದಾಗ ತನ್ನ ಆದ್ಯತೆ ಎಂಜಿನಿಯರಿಂಗ್‌ ಎನ್ನುವುದನ್ನು ದಾಖಲಿಸಬೇಕು.

ನಂತರ ಮೂರನೇ ಆದ್ಯತೆ ಫಾರ್ಮಸಿ ಎಂದು ದಾಖಲಿಸಬಹುದು. ಆಗ ಆ ಅಭ್ಯರ್ಥಿಗೆ ವೈದ್ಯಕೀಯ ಸೀಟು ಸಿಗದಿದ್ದಾಗ ನಂತರದ ಆದ್ಯತೆಯಾದ ಎಂಜಿನಿಯರಿಂಗ್‌ನಲ್ಲಿ ಸೀಟು ಹಂಚಿಕೆ ಆಗುತ್ತದೆ. ಒಂದು ವೇಳೆ ಎಂಜಿನಿಯರಿಂಗ್‌ನಲ್ಲೂ ಸೀಟು ದೊರೆಯದೇ ಹೋದರೆ ನಂತರದ ಆದ್ಯತೆಯಾದ ಫಾರ್ಮಸಿಯಲ್ಲಿ ಸೀಟು ಹಂಚಿಕೆಯಾಗಬಹುದು. ಅರ್ಹತೆ ಇರುವ ಅಭ್ಯರ್ಥಿಗಳಿಗೆ ತಾನು ಆದ್ಯತೆ ಮೇಲೆ ದಾಖಲಿಸಿರುವ ಒಂದಕ್ಕಿಂತ ಹೆಚ್ಚು ಕೋರ್ಸುಗಳಿಗೂ ಸೀಟು ಹಂಚಿಕೆಯಾಗಬಹುದು. ಆಗ ತನ್ನಿಷ್ಟದ ಕೋರ್ಸಿಗೆ ಆತ ದಾಖಲಾತಿ ಪಡೆಯಬಹುದು. ಇದೇ ರೀತಿ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಾರ ಎಷ್ಟುಕೋರ್ಸುಗಳು ಇವೆಯೋ ಅಷ್ಟೂಕೋರ್ಸುಗಳಿಗೆ ಆದ್ಯತೆಯನುಸಾರ ಆಪ್ಷನ್‌ ಎಂಟ್ರಿ ಮಾಡುವುದರ ಮೂಲಕ ಸೀಟು ಪಡೆಯಬಹುದು. ಪ್ರತಿ ಹಂತದ ಸೀಟು ಹಂಚಿಕೆಯೂ ಇದೇ ಮಾದರಿಯಲ್ಲಿರುತ್ತದೆ ಎಂದು ಅವರು ವಿವರಿಸಿದರು.

ಮಾಪ್‌ಅಪ್‌ ಸುತ್ತು:
ಎರಡನೇ ಸುತ್ತಿನಲ್ಲಿ ಎಂಜಿನಿಯರಿಂಗ್‌, ನರ್ಸಿಂಗ್‌, ಆರ್ಕಿಟೆಕ್ಚರ್‌, ಪಶುವೈದ್ಯಕೀಯ, ಕೃಷಿ ಸೀಟು ದೊರೆತ ಅಭ್ಯರ್ಥಿಗಳು ದಂಡ ಪಾವತಿಸಿ, ತಮ್ಮ ಸೀಟನ್ನು ರದ್ದುಪಡಿಸಿದ ನಂತರವೇ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ನ ಮಾಪ್‌ಅಪ್‌ ಸುತ್ತಿನಲ್ಲಿ ಭಾಗವಹಿಸಬಹುದು.

ಅದೇ ರೀತಿ ಎರಡನೇ ಸುತ್ತಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸೀಟುಗಳು ಹಂಚಿಕೆಯಾದ ಅಭ್ಯರ್ಥಿಗಳು ಸದರಿ ಸೀಟುಗಳನ್ನು ದಂಡ ಪಾವತಿಸಿ ರದ್ದುಪಡಿಸಿದ ನಂತರ ಎಂಜಿನಿಯರಿಂಗ್‌ ಮಾಪ್‌ಅಪ್‌ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ತಿಳಿಸಲಾಗಿದೆ.

 

click me!