ಮೈಸೂರು (ಮೇ.30): ಕೇಂದ್ರ ಲೋಕಸೇವಾ ಆಯೋಗವು (union public service commission) 2021 ನೇ ಸಾಲಿನ ಸಿವಿಲ್ ಸರ್ವೀಸ್ ಪರೀಕ್ಷೆ ಫಲಿತಾಂಶವನ್ನು ಇಂದು ಬಿಡುಗಡೆಯಾಗಿದೆ. ಮೈಸೂರಿನ (Mysuru) ಪಿರಿಯಾಪಟ್ಟಣ (Piriyapatna) ತಾಲೂಕಿನ ಕುಡುಕೂರು ಗ್ರಾಮ ಮೇಘನಾ ಕೆ.ಟಿ. (Meghana KT) ಯುಪಿಎಸ್ ಸಿ (UPSC) ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
2021ರ ಯುಪಿಎಸ್ಸಿಯಲ್ಲಿ ದೇಶಕ್ಕೆ 425 ನೇ ರ್ಯಾಂಕ್ ಪಡೆದಿರೋ ಮೇಘನಾ. ಕೆ.ಟಿ ದೃಷ್ಟಿ ವಿಶೇಷ ಚೇತನೆ. 2020ರಲ್ಲೂ ಯುಪಿಎಸ್ಸಿಯಲ್ಲಿ 465 ನೇ ರ್ಯಾಂಕ್ ಪಡೆದಿದ್ದ ಮೇಘನಾ. 2015 ರಲ್ಲಿ ಕೆಎಎಸ್ ನಲ್ಲಿ (KAS) 11 ನೇ ರ್ಯಾಂಕ್ ಪಡೆದು ವಾಣಿಜ್ಯ ಇಲಾಖೆಯಲ್ಲಿ ( Commerce Department) ಕರ್ತವ್ಯ ನಿರ್ವಹಿಸುತ್ತಿದ್ರು. ಬಳಿಕ ಖಜಾನೆ ಇಲಾಖೆಯಲ್ಲಿ (treasury department ) ಕರ್ತವ್ಯ ನಿರ್ವಹಿಸುತ್ತಿದ್ದಾರೆ.
UPSCಯಲ್ಲಿ 92ನೇ ರ‍್ಯಾಂಕ್ ಪಡೆದ ವೈದ್ಯಾಧಿಕಾರಿ CHITRADURGAದ ಕುವರ!
ಕುಡಕೂಡಿನ ತಾಂಡವ ಮೂರ್ತಿ , ನವನೀತ ದಂಪತಿಗಳ ಪುತ್ರಿಯಾಗಿರುವ ಮೇಘನಾ. ಕೆ.ಟಿ ಸದ್ಯ ಬೆಂಗಳೂರಿನ (Bengaluru) ಕೆಂಗೇರಿಯಲ್ಲಿ ವಾಸ ಮಾಡುತ್ತಿದ್ದಾರೆ. 10ನೇ ತರಗತಿಯಲ್ಲಿದ್ದ ವೇಳೆ ರೆಟಿನಾ ಸಮಸ್ಯೆ (Retinal diseases) ಎದುರಾಗಿ 70 ರಷ್ಟು ದೃಷ್ಟಿ ಕಳೆದುಕೊಂಡಿದ್ದ ಮೇಘನಾ. ಸಮಸ್ಯೆ ಮೆಟ್ಟಿನಿಂತು ಯುಪಿಎಸ್ ಸಿ ಯಲ್ಲಿ ಸಾಧನೆ ಮಾಡಿ ಛಲಬಿಡದ ಸಾಧಕಿಯಾಗಿದ್ದಾರೆ.
ಕರ್ನಾಟಕದ (Karnataka) 24 ಮಂದಿ ಈ ಬಾರಿ ಯುಪಿಎಸ್‌ಸಿ ಟಾಪರ್ ಆಗಿದ್ದು, ದಾವಣಗೆರೆಯ ಅವಿನಾಶ್ ದೇಶಕ್ಕೆ 31ನೇ ರ್ಯಾಂಕ್ ಪಡೆದಿದ್ದು ರಾಜ್ಯದ ವಿದ್ಯಾರ್ಥಿಗಳ ಪೈಕಿ ಟಾಪ್ ನಲ್ಲಿದ್ದಾರೆ.
UPSC ಸಿವಿಲ್ ಸರ್ವಿಸ್ ಫಲಿತಾಂಶ ಬಿಡುಗಡೆ, ಶ್ರುತಿ ಶರ್ಮಾ ದೇಶಕ್ಕೆ ಫಸ್ಟ್
Rank ಪಡೆದ ರಾಜ್ಯದ 24 ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ
1.ಅವಿನಾಶ್ - ದಾವಣಗೆರೆ (31ನೇ Rank )
2.ಬೆನಕ ಪ್ರಸಾದ್ - ಚಿತ್ರದುರ್ಗ (92ನೇ Rank )
3.ನಿಖೀಲ್ ಬಸವರಾಜ್ ಪಾಟೀಲ್ (139ನೇ Rank )
4.ವಿನಯ್ ಕುಮಾರ್ ಗದ್ಗೆ (151ನೇ Rank )
5.ಚಿತ್ತರಂಜನ್ (155ನೇ Rank )
6.ಮನೋಜ್ ಕುಮಾರ್ (157ನೇ Rank )
7.ಅಪೂರ್ವ ಬಸೂರ್ - ಕೊಪ್ಪಳ (191ನೇ Rank )
8.ನಿತ್ಯಾ ಆರ್ (207ನೇ Rank )
9.ಮಂಜನಾಥ್ ಆರ್ (219ನೇ Rank )
10.ರಾಜೇಶ್ ಪೊನ್ನಪ್ಪ (222ನೇ Rank )
11.ಸಾಹಿತ್ಯ ಅಲದಕಟ್ಟಿ (250ನೇ Rank )
12.ಕಲ್ಪಶ್ರೀ ಕೆ. ಆರ್ (291ನೇ Rank )
13.ಅರುಣ್ ಎಂ (308ನೇ Rank )
14.ದೀಪಕ್ ರಾಮಚಂದ್ರ ಸೇಠ್ (311ನೇ Rank )
15.ಹರ್ಷವರ್ಧನ್ ಬಿ.ಜೆ (318ನೇ Rank )
16.ವಿನಯ್ ಕುಮಾರ್ ಡಿ ಹೆಚ್ (352ನೇ Rank )
17.ಮೇಘನಾ ಕೆ.ಟಿ - ಮೈಸೂರು(425ನೇ Rank )
18.ಅವಿನಂದನ್ ಬಿಎಂ (455ನೇ Rank )
19.ಸವಿತಾ ಗೋಯಲ್ (479ನೇ Rank )
20.ಮಹಮ್ಮದ್ ಸಿದ್ದಿಕ್ ಶರೀಫ್ (516ನೇ Rank )
21.ಚೇತನ್ ಕೆ (532ನೇ Rank )
22.ಶುಭಂ ಪ್ರಕಾಶ್ (568ನೇ Rank )
23.ಪ್ರಶಾಂತ್ ಕುಮಾರ್ ಬಿ ಒ (641ನೇ Rank )
24.ಸುಚಿನ್ ಕೆ ವಿ (682ನೇ Rank )
UPSC Result 2021; ದಾವಣಗೆರೆಯ ಅವಿನಾಶ್ ದೇಶಕ್ಕೆ 31ನೇ ರ್ಯಾಂಕ್ , ರಾಜ್ಯದ 24 ಅಭ್ಯರ್ಥಿಗಳ ಪಟ್ಟಿ
ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ - upsc.gov.in ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು. ಕರ್ನಾಟಕದ 24 ಅಭ್ಯರ್ಥಿಗಳು ಸೇರಿ ಒಟ್ಟು 685 ಅಭ್ಯರ್ಥಿಗಳು ಪಾಸ್ ಆಗಿದ್ದಾರೆ. ಇಂದು ಪ್ರಕಟವಾದ ಅಂತಿಮ ಫಲಿತಾಂಶದಲ್ಲಿ ಶ್ರುತಿ ಶರ್ಮಾ ದೇಶಕ್ಕೆ ನಂ.1 ಸ್ಥಾನ ಪಡೆದುಕೊಂಡಿದ್ದಾರೆ.