ಚಿತ್ರದುರ್ಗ (ಮೇ.30): ಚಿತ್ರದುರ್ಗ (Chitradurga) ಜಿಲ್ಲೆಯ ಡಾ. ಬೆನಕ ಪ್ರಸಾದ್ ಕೇಂದ್ರ ಲೋಕಸೇವಾ ಆಯೋಗವು (Union Public Service Commission - UPSC) 2021 ನೇ ಸಾಲಿನ ಸಿವಿಲ್ ಸರ್ವೀಸ್ ಪರೀಕ್ಷೆ ಫಲಿತಾಂಶದಲ್ಲಿ ದೇಶಕ್ಕೆ 92ನೇ ರ್ಯಾಂಕ್ ಪಡೆದಿದ್ದಾರೆ. ಚಿತ್ರದುರ್ಗದ ಹೊಸದುರ್ಗ ತಾಲೂಕಿನ ನಾಗರಕಟ್ಟೆ ಗ್ರಾಮದ ನಿವೃತ್ತ ಉಪನ್ಯಾಸಕ ಜಯಪ್ಪ ಹಾಗೂ ಪಂಕಜ ದಂಪತಿಯ ಪುತ್ರ. ಡಾ ಬೆನಕ ಪ್ರಸಾದ್ (Benaka prasad), ನಾಗರ ಕಟ್ಟೆ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಪಟ್ಟಣದ ಸಂತ ಅಂತೋಣಿ ಶಾಲೆಯಲ್ಲಿ ಪ್ರೌಢಶಿಕ್ಷಣ, ಮಂಗಳೂರಿನ ಖಾಸಗಿ ಶಾಲೆಯಲ್ಲಿ ಪಿಯುಸಿ ಪೂರ್ಣಗೊಳಿಸಿದ್ದು ನಂತರ ಎಂಬಿಬಿಎಸ್ ಪದವಿಯನ್ನು ಬೆಂಗಳೂರಿನಲ್ಲಿ ಪೂರೈಸಿದ್ದಾರೆ.
ಮೆಡಿಕಲ್ (Medical) ಮುಗಿಸಿದ ವರ್ಷವೇ 2019ರಲ್ಲಿ ಸರ್ಕಾರಿ ವೈದ್ಯರಾಗಿ ನೇಮಕಗೊಂಡಿದ್ದರು. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ಕೋವಿಡ್ ಸಮಯದಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೂ ಆಗಾಗ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸುತ್ತಿದ್ದರು. ಇದರ ಜೊತೆಗೆ ಎಷ್ಟೋ ಕೋವಿಡ್ ರೋಗಿಗಳ ಗುಣಮುಖರಾಗಲಿಕ್ಕೆ ಇವರ ಸೇವೆಯೂ ಅನನ್ಯವಾಗಿದೆ.
UPSC ಸಿವಿಲ್ ಸರ್ವಿಸ್ ಫಲಿತಾಂಶ ಬಿಡುಗಡೆ, ಶ್ರುತಿ ಶರ್ಮಾ ದೇಶಕ್ಕೆ ಫಸ್ಟ್
ಇದರ ಜೊತೆ ಜೊತೆಗೆ ತಂದೆಯ ಬಹುದಿನದ ಆಸೆಯಂತೆ KPSC ಪರೀಕ್ಷೆಗೆ ತುಂಬಾ ತಯಾರಿ ನಡೆಸಿದ್ದರು. ಇದಕ್ಕಾಗಿ ಆರು ತಿಂಗಳುಗಳ ಕಾಲ ತರಬೇತಿ ಪಡೆದಿದ್ದರು. ಮೂರನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 92ನೇ ರ್ಯಾಂಕ್ ಪಡೆದಿದ್ದಾರೆ. ಜಿಲ್ಲೆಗೆ ಇದು ಹೆಮ್ಮೆಯ ಪಡುವ ವಿಷಯವಾಗಿದೆ. ಆದ್ರೆ ದುರದೃಷ್ಟವಶಾತ್ ತನ್ನ ಮುದ್ದಾದ ಮಗನ ಸಾಧನೆ ನೋಡಲಿಕ್ಕೆ ತಂದೆ ಇಲ್ಲವಲ್ಲ ಎಂಬುದೇ ಬೇಸರದ ಸಂಗತಿ. ಸದ್ಯ ದಿ. ಜಯಪ್ಪ ಅವರು ಕಳೆದ ಒಂದು ವರ್ಷಗಳ ಹಿಂದಷ್ಟೇ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದರು.
ತಂದೆಯ ಆಸೆಯಂತೆ ನನ್ನ ಮಗ ಅಧಿಕಾರಿಯಾಗಿದ್ದಾನೆ. 27ನೇ ವಯಸ್ಸಿಗೆ ದೊಡ್ಡ ಅಧಿಕಾರಿ ಆಗುವ ಅವಕಾಶ ಲಭಿಸಿದೆ. ಕಷ್ಟಪಟ್ಟು ಅಧ್ಯಯನ ಮಾಡಿದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಅಧಿಕಾರಿಯಾಗಿ ಜನಸೇವೆ ಮಾಡಲಿ ಎಂದು ಆಶಿಸುತ್ತೇನೆ ಎಂದು ತಾಯಿ ಪಂಕಜ ತಿಳಿಸಿದರು.
Rank ಪಡೆದ ರಾಜ್ಯದ 24 ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ
1.ಅವಿನಾಶ್ - ದಾವಣಗೆರೆ (31ನೇ Rank )
2.ಬೆನಕ ಪ್ರಸಾದ್ - ಚಿತ್ರದುರ್ಗ (92ನೇ Rank )
3.ನಿಖೀಲ್ ಬಸವರಾಜ್ ಪಾಟೀಲ್ (139ನೇ Rank )
4.ವಿನಯ್ ಕುಮಾರ್ ಗದ್ಗೆ (151ನೇ Rank )
5.ಚಿತ್ತರಂಜನ್ (155ನೇ Rank )
6.ಮನೋಜ್ ಕುಮಾರ್ (157ನೇ Rank )
7.ಅಪೂರ್ವ ಬಸೂರ್ (191ನೇ Rank )
8.ನಿತ್ಯಾ ಆರ್ (207ನೇ Rank )
9.ಮಂಜನಾಥ್ ಆರ್ (219ನೇ Rank )
10.ರಾಜೇಶ್ ಪೊನ್ನಪ್ಪ (222ನೇ Rank )
11.ಸಾಹಿತ್ಯ ಅಲದಕಟ್ಟಿ (250ನೇ Rank )
12.ಕಲ್ಪಶ್ರೀ ಕೆ. ಆರ್ (291ನೇ Rank )
13.ಅರುಣ್ ಎಂ (308ನೇ Rank )
14.ದೀಪಕ್ ರಾಮಚಂದ್ರ ಸೇಠ್ (311ನೇ Rank )
15.ಹರ್ಷವರ್ಧನ್ ಬಿ.ಜೆ (318ನೇ Rank )
16.ವಿನಯ್ ಕುಮಾರ್ ಡಿ ಹೆಚ್ (352ನೇ Rank )
17.ಮೇಘನಾ ಕೆ.ಟಿ (425ನೇ Rank )
18.ಅವಿನಂದನ್ ಬಿಎಂ (455ನೇ Rank )
19.ಸವಿತಾ ಗೋಯಲ್ (479ನೇ Rank )
20.ಮಹಮ್ಮದ್ ಸಿದ್ದಿಕ್ ಶರೀಫ್ (516ನೇ Rank )
21.ಚೇತನ್ ಕೆ (532ನೇ Rank )
22.ಶುಭಂ ಪ್ರಕಾಶ್ (568ನೇ Rank )
23.ಪ್ರಶಾಂತ್ ಕುಮಾರ್ ಬಿ ಒ (641ನೇ Rank )
24.ಸುಚಿನ್ ಕೆ ವಿ (682ನೇ Rank )
UPSC ಫಲಿತಾಂಶ ವೀಕ್ಷಿಸಲು ಅಧಿಕೃತ ವೆಬ್‌ಸೈಟ್ - upsc.gov.in ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು.