ಕೇಂದ್ರ ಲೋಕಸೇವಾ ಆಯೋಗವು 2021 ನೇ ಸಾಲಿನ ಸಿವಿಲ್ ಸರ್ವೀಸ್ ಪರೀಕ್ಷೆ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಿದೆ. ರ್ಯಾಂಕ್ ಪಡೆದಿರುವ ರಾಜ್ಯದ ಒಟ್ಟು 24 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
ಬೆಂಗಳೂರು (ಮೇ.30): ಕೇಂದ್ರ ಲೋಕಸೇವಾ ಆಯೋಗವು 2021 ನೇ ಸಾಲಿನ ಸಿವಿಲ್ ಸರ್ವೀಸ್ ಪರೀಕ್ಷೆ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ - upsc.gov.in ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು. ರಾಜ್ಯದ ಒಟ್ಟು 24 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ದಾವಣಗೆರೆ ಮೂಲದ ಅವಿನಾಶ್ ದೇಶಕ್ಕೆ 31 ನೇ Rank ಪಡೆದಿದ್ದಾರೆ.
Rank ಪಡೆದ ರಾಜ್ಯದ 24 ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ
1.ಅವಿನಾಶ್ - ದಾವಣಗೆರೆ (31ನೇ Rank )
2.ಬೆನಕ ಪ್ರಸಾದ್ - ಚಿತ್ರದುರ್ಗ (92ನೇ Rank )
3.ನಿಖೀಲ್ ಬಸವರಾಜ್ ಪಾಟೀಲ್ (139ನೇ Rank )
4.ವಿನಯ್ ಕುಮಾರ್ ಗದ್ಗೆ (151ನೇ Rank )
5.ಚಿತ್ತರಂಜನ್ (155ನೇ Rank )
6.ಮನೋಜ್ ಕುಮಾರ್ (157ನೇ Rank )
7.ಅಪೂರ್ವ ಬಸೂರ್ - ಕೊಪ್ಪಳ (191ನೇ Rank )
8.ನಿತ್ಯಾ ಆರ್ (207ನೇ Rank )
9.ಮಂಜನಾಥ್ ಆರ್ (219ನೇ Rank )
10.ರಾಜೇಶ್ ಪೊನ್ನಪ್ಪ (222ನೇ Rank )
11.ಸಾಹಿತ್ಯ ಅಲದಕಟ್ಟಿ (250ನೇ Rank )
12.ಕಲ್ಪಶ್ರೀ ಕೆ. ಆರ್ (291ನೇ Rank )
13.ಅರುಣ್ ಎಂ (308ನೇ Rank )
14.ದೀಪಕ್ ರಾಮಚಂದ್ರ ಸೇಠ್ (311ನೇ Rank )
15.ಹರ್ಷವರ್ಧನ್ ಬಿ.ಜೆ (318ನೇ Rank )
16.ವಿನಯ್ ಕುಮಾರ್ ಡಿ ಹೆಚ್ (352ನೇ Rank )
17.ಮೇಘನಾ ಕೆ.ಟಿ - ಮೈಸೂರು (425ನೇ Rank )
18.ಅವಿನಂದನ್ ಬಿಎಂ (455ನೇ Rank )
19.ಸವಿತಾ ಗೋಯಲ್ (479ನೇ Rank )
20.ಮಹಮ್ಮದ್ ಸಿದ್ದಿಕ್ ಶರೀಫ್ (516ನೇ Rank )
21.ಚೇತನ್ ಕೆ (532ನೇ Rank )
22.ಶುಭಂ ಪ್ರಕಾಶ್ (568ನೇ Rank )
23.ಪ್ರಶಾಂತ್ ಕುಮಾರ್ ಬಿ ಒ (641ನೇ Rank )
24.ಸುಚಿನ್ ಕೆ ವಿ (682ನೇ Rank )
UPSC ಸಿವಿಲ್ ಸರ್ವಿಸ್ ಫಲಿತಾಂಶ ಬಿಡುಗಡೆ, ಶ್ರುತಿ ಶರ್ಮಾ ದೇಶಕ್ಕೆ ಫಸ್ಟ್
ಡಾ ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ (Dr. Rajkumar Civil Services Academy) ತರಬೇತಿ ಪಡೆದ ಎಂಟು ವಿಧ್ಯಾರ್ಥಿಗಳು Upsc ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿದ್ದಾರೆ. ಡಾ ರಾಜ್ ಕುಮಾರ್ ಅಕಾಡೆಮಿ ಅಣ್ಣಾವ್ರ ಕುಟುಂಬಸ್ಥರು ನಡೆಸುತ್ತಿದ್ದು , ರಾಘವೇಂದ್ರ ರಾಜ್ ಕುಮಾರ್ ಕಿರಿಯ ಸೊಸೆ ಶ್ರೀದೇವಿ ಅಕಾಡೆಮಿಯನ್ನ ನಡೆಸುತ್ತಿದ್ದಾರೆ.
ಬೆನಕ ಪ್ರಸಾದ್ 92ನೇ ರ‍್ಯಾಂಕ್ ,
ಮೇಘನಾ 425 ರ‍್ಯಾಂಕ್ ,
ರಾಜೆಶ್ ಪೊನ್ನಪ್ಪ 222 ರ‍್ಯಾಂಕ್,
ಪ್ರೀತಿ ಪಂಚಲ್ 449 ರ‍್ಯಾಂಕ್
ಪ್ರಶಾಂತ್ ಕುಮಾರ್ 641 ರ‍್ಯಾಂಕ್
ರವಿನಂದನ್ 455 ರ‍್ಯಾಂಕ್
ನಿಖಿಲ್ ಬಿ ಪಾಟೀಲ್ 139 ರ‍್ಯಾಂಕ್
ದೀಪಕ್ ಆರ್ ಶೆಟ್ಟಿ 311 ರ‍್ಯಾಂಕ್ ಪಡೆದಿದ್ದಾರೆ
ಇನ್ನು ಯುಪಿಎಸ್ ಸಿ ಪರೀಕ್ಷೆಯಲ್ಲಿ ಶಿರಸಿಯ ಮನೋಜ್ ಆರ್. ಹೆಗಡೆ (29) 213ನೇ ರ‍್ಯಾಂಕ್ ಪಡೆದಿದ್ದು, ಶಿರಸಿಯ MES ಕಾಲೇಜಿನಲ್ಲಿ ಪಿಯುಸಿ ಮಾಡಿ ಧಾರವಾಡದಲ್ಲಿ BSC ಅಗ್ರಿಕಲ್ಚರ್ ಪದವಿ ಪಡೆದಿದ್ದಾರೆ. ದೆಹಲಿಯಲ್ಲಿ ಡಾ. ಶಿವಕುಮಾರ್ ಹಾಗೂ ಶಿರಸಿಯಲ್ಲಿ ವಿ.ಆರ್. ಹೆಗಡೆ ಎಸ್.ಜಿ. ಕರಿಯರ್ ಅಕಾಡೆಮಿಯಲ್ಲಿ ಕೋಚಿಂಗ್ ಪಡೆದಿದ್ದಾರೆ. ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪಾಸಾಗಿದ್ದಾರೆ.