UPSC ESE Result 2020: ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆಯ ರಿಸರ್ವ್ ಲಿಸ್ಟ್‌ ಬಿಡುಗಡೆ

By Suvarna News  |  First Published Jan 8, 2022, 10:26 PM IST

ಕೇಂದ್ರ ಲೋಕಸೇವಾ ಆಯೋಗ ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆ 2020 ರ ರಿಸರ್ವ್ ಲಿಸ್ಟ್‌ ಅನ್ನು ಬಿಡುಗಡೆ ಮಾಡಲಾಗಿದೆ


ನವದೆಹಲಿ(ಜ.8): ಕೇಂದ್ರ ಲೋಕಸೇವಾ ಆಯೋಗ (Union Public Service Commission- UPSC) ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆ 2020 ರ (Engineering Services Examination 2020 ) ರಿಸರ್ವ್ ಲಿಸ್ಟ್‌ ಅನ್ನು ಬಿಡುಗಡೆ ಮಾಡಲಾಗಿದೆ. ಸದರಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ upsc.gov.in ಗೆ ಭೇಟಿ ನೀಡಿ ಫಲಿತಾಂಶವನ್ನು ಪರೀಕ್ಷಿಸಬಹುದು. ಕೇಂದ್ರ ಲೋಕಸೇವಾ ಆಯೋಗವು ಎಪ್ರಿಲ್ 12, 2021ರಂದು  302 ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ನೇಮಕಾತಿಗೆ ಶಿಫಾರಸು ಮಾಡಿ ನೋಟಿಸ್ ಬಿಡುಗಡೆ ಮಾಡಿತ್ತು.

ಪ್ರಸ್ತುತ ರೈಲ್ವೆ ಸಚಿವಾಲಯದ ಬೇಡಿಕೆಯಂತೆ ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆಯ ಆಧಾರದ ಮೇಲೆ ಉಳಿದ ಹುದ್ದೆಗಳ ನೇಮಕಾತಿಗೆ ಆಯೋಗವು 41 ಅಭ್ಯರ್ಥಿಗಳ ರಿಸರ್ವ್‌ ಲಿಸ್ಟ್‌ ಅನ್ನು ಬಿಡುಗಡೆ ಮಾಡಿದೆ. ಈ ಅಭ್ಯರ್ಥಿಗಳ ಪೈಕಿ ಸಾಮಾನ್ಯ-30, ಒಬಿಸಿ-09, ಇಡಬ್ಲ್ಯೂಎಸ್ (Economically Weaker Section)-01, ST-1 ವರ್ಗದವರ ಹೆಸರು ಪಟ್ಟಿಯಲ್ಲಿದೆ.

Tap to resize

Latest Videos

undefined

Upcoming Government Exams 2022: ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ 2022ರಲ್ಲಿ ಭರ್ಜರಿ ಅವಕಾಶ

ಸದ್ಯ ಕೇಂದ್ರ ಲೋಕಸೇವಾ ಆಯೋಗ ಬಿಡುಗಡೆ ಮಾಡಿರುವ ರಿಸರ್ವ್ ಲಿಸ್ಟ್‌ ನಲ್ಲಿನ ಅಭ್ಯರ್ಥಿಗಳೊಂದಿಗೆ ರೈಲ್ವೆ ಸಚಿವಾಲಯ ನೇರ ಸಂಪರ್ಕ ಮಾಡಿ, ಮುಂದಿನ ಪ್ರಕ್ರಿಯೆ ನಡೆಸಲಿದೆ. ಮೂಲ ದಾಖಲೆಗಳನ್ನು ಪರಿಶೀಲಿಸುವವರೆಗೆ ಫಲಿತಾಂಶವನ್ನು ತಾತ್ಕಾಲಿಕವಾಗಿ ಇರಿಸುತ್ತದೆ. ಅಲ್ಲಿವರೆಗೆ ಅಭ್ಯರ್ಥಿಗಳಿಗೆ ನೇಮಕಾತಿಯ ಪ್ರಸ್ತಾಪವನ್ನು ನೀಡುವುದಿಲ್ಲ.

ಫಲಿತಾಂಶವನ್ನು ಪರೀಕ್ಷಿಸುವುದು ಹೇಗೆ:
ಕೇಂದ್ರ ಲೋಕಸೇವಾ ಆಯೋಗ ಅಧಿಕೃತ ವೆಬ್‌ತಾಣ upsc.gov.in ಗೆ ಭೇಟಿ ನೀಡಿ
ಹೊಸದಾಗಿ ಓಪನ್ ಆದ ಟ್ಯಾಬ್ ನಲ್ಲಿ UPSC ESE Result 2020 Reserve List ಲಿಂಕ್ ಕ್ಲಿಕ್ ಮಾಡಿ ಫಲಿತಾಂಶವನ್ನು ವೀಕ್ಷಿಸಬಹುದು.

UPSC CAPF 2020 Final Result: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 2020ನೇ ಸಾಲಿನ ನೇಮಕಾತಿಯ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟ

ಖಾಲಿ ಇರುವ 187 ಹುದ್ದೆಗಳ ನೇಮಕಕ್ಕೆ ಯುಪಿಎಸ್‌ಸಿ ಅರ್ಜಿ ಆಹ್ವಾನ: ಕೇಂದ್ರ ಲೋಕಸೇವಾ ಆಯೋಗ (Union Publice Service Commission- UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 187 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ  13 ಜನವರಿ 2022 ರೊಳಗೆ ಅರ್ಜಿ ಸಲ್ಲಿಸಬೇಕು. ಖಾಲಿ ಇರುವ ಸಹಾಯಕ ಕಮಿಷನರ್ (Asistant Commissioner), ಸಹಾಯಕ ಇಂಜಿನಿಯರ್ (Assistant Engineer), ಜೂನಿಯರ್ ಟೈಮ್ ಸ್ಕೇಲ್ (Junior Time Scale), ಆಡಳಿತಾಧಿಕಾರಿ (Administrative Officer) ಮತ್ತು ಸಹಾಯಕ ಪ್ರಾಧ್ಯಾಪಕ (Assistant Professor) ಹುದ್ದೆಗಳು ಸೇರಿ ಒಟ್ಟು 187 ಹುದ್ದೆಗಳನ್ನು ಈ ನೇಮಕಾತಿ ಡ್ರೈವ್ನಲ್ಲಿ ಭರ್ತಿ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು, ಅಧಿಕೃತ ವೆಬ್ಸೈಟ್ upsc.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. 

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿ ಕನಿಷ್ಠ  30 ವರ್ಷದಿಂದ  40 ವರ್ಷಗಳಗೆ ಇರಬೇಕು. ಪೋಸ್ಟ್‌ಗಾಗಿ ಅರ್ಜಿ ಪ್ರಕ್ರಿಯೆಯು ಪ್ರಾರಂಭವಾಗಿದೆ.ಇನ್ನು ಅರ್ಜಿ ಶುಲ್ಕ 25 ರೂ.ಪಾವತಿಸಬೇಕು. SC, ST, PwBD, ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಭ್ಯರ್ಥಿಗಳು ಜನ್ಮ ದಿನಾಂಕ, ಚಿತ್ರ, ಸಹಿ, ಶಿಕ್ಷಣ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಗಳನ್ನು ಸಲ್ಲಿಸಬೇಕು. ಪೋಸ್ಟ್‌ಗಳಿಗೆ ಆಯ್ಕೆ ಪ್ರಕ್ರಿಯೆಯು ಸಂದರ್ಶನವನ್ನು ಒಳಗೊಂಡಿರುತ್ತದೆ. ಈ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ದಾಖಲೆಗಳ ಹಾರ್ಡ್ ಪ್ರತಿಗಳನ್ನು ನೀಡಬೇಕು.

click me!