ಈ ಯುನಿವರ್ಸಿಟೀಲಿ ಕಲಿತರೆ ಉದ್ಯೋಗ ಪಕ್ಕಾ, ಕರ್ನಾಟಕದ್ದು ಇದೆಯಾ?

By Suvarna News  |  First Published Nov 25, 2020, 3:49 PM IST

ಜಾಗತಿಕ ಉದ್ಯೋಗ ಶ್ರೇಯಾಂಕ ಮತ್ತು ಸಮೀಕ್ಷೆ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿ ಸೇರಿದಂತೆ ದೇಶದ 6 ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ. ಈ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದರೆ ಉದ್ಯೋಗ ಸೆಕ್ಯೂರ್ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ.
 


ಪ್ರತಿಯೊಬ್ಬರು ಒಂದೊಳ್ಳೆ ಉದ್ಯೋಗಕ್ಕೆ ಸೇರಲು ಬಯಸ್ತಾರೆ. ಅದರಲ್ಲೂ ಸೆಕ್ಯೂರ್ ಜಾಬ್ ಯಾವುದು ಅಂತ ಹುಡುಕಾಡ್ತಾರೆ. ಭದ್ರತೆ ಇರುವಂಥ ಉದ್ಯೋಗ ಪಡೆಯಲು ಯಾವ ಕೋರ್ಸ್ ಮಾಡಬೇಕು? ಯಾವ ಶಿಕ್ಷಣ ಸಂಸ್ಥೆಯಲ್ಲಿ ಓದಬೇಕು? ವಿದೇಶಕ್ಕೆ ಹೋಗಿ ಓದಿದ್ರೆ ಒಳ್ಳೆ ನೌಕರಿ ಸಿಗುತ್ತಾ ಅಂತ ಯೋಚಿಸ್ತಾರೆ. ಆದ್ರೆ ಉತ್ತಮ ಕೆಲ್ಸ ಪಡೆಯಲು ಓದುವುದಕ್ಕಾಗಿ ವಿದೇಶಕ್ಕೆ ಹೋಗೋ ಅವಶ್ಯಕತೆಯಿಲ್ಲ. ನಮ್ಮ ದೇಶದಲ್ಲೇ ಇರೋ ಆರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ್ರೆ ಸಾಕು, ಒಳ್ಳೆಯ ನೌಕರಿ ಪಡೆದು ಸುಂದರ ಬದುಕು ರೂಪಿಸಿಕೊಳ್ಳಬಹುದು. 

ಸಖತ್ ಸಂಬಳ ನೀಡುವ ವೃತ್ತಿಗಳು ಯಾವವು ಗೊತ್ತಾ?

ಜಾಗತಿಕ ಉದ್ಯೋಗದ ಶ್ರೇಯಾಂಕ ಮತ್ತು ಸಮೀಕ್ಷೆ ಅಥವಾ GEURS 2020, ಭಾರತದ ಈ ಆರು ಸಂಸ್ಥೆಗಳ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ. ಸದ್ಯ ಭಾರತ ಜಾಗತಿಕವಾಗಿ 15ನೇ ಸ್ಥಾನದಲ್ಲಿರಿಸಿದೆ. 2018 ರಲ್ಲಿ  23ನೇ ಸ್ಥಾನದಲ್ಲಿದ್ದ ದೇಶ, ಈ 8 ಸ್ಥಾನವನ್ನ ದಾಟಿ 15 ಸ್ಥಾನಕ್ಕೇರಿದೆ.

Latest Videos

undefined

1. ಐಐಟಿ-ದೆಹಲಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ):
ಫ್ರೆಂಚ್ ಎಚ್‌ಆರ್ ಕನ್ಸಲ್ಟೆನ್ಸಿ ಗ್ರೂಪ್ ಎಮರ್ಜಿಂಗ್ ಮತ್ತು ಟೈಮ್ಸ್ ಹೈಯರ್ ಎಜುಕೇಶನ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ-ದೆಹಲಿ) ಭಾರತದಲ್ಲಿ ಅತ್ಯಂತ ಪ್ರಮುಖ ಉದ್ಯೋಗಾರ್ಹ ಸಂಸ್ಥೆಯಾಗಿದೆ. 2019ರಲ್ಲಿ 55ನೇ ರ್ಯಾಂಕ್‌ನಲ್ಲಿದ್ದ ಐಐಟಿ ದೆಹಲಿ, 27 ರ್ಯಾಂಕ್‌ಗಳನ್ನ ದಾಟಿ 2020ರಲ್ಲಿ 17ನೇ ಸ್ಥಾನಕ್ಕೇರಿದೆ.

2. ಐಐಸಿ (ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್)
ಬೆಂಗಳೂರಿನಲ್ಲಿರೋ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಜಗತ್ತಿನಲ್ಲೇ 71ನೇ ಸ್ಥಾನದಲ್ಲಿತ್ತು. ಆದರೆ, ಈ ಪ್ರಸಿದ್ಧ ಬೆಂಗಳೂರು ಸಂಸ್ಥೆ 2019 ರ ಉದ್ಯೋಗದಲ್ಲಿ ಪಡೆದುಕೊಂಡಿದ್ದ 43ನೇ ಸ್ಥಾನದಿಂದ ಜಾರಿದೆ.

3. ಐಐಟಿ ಬಾಂಬೆ
 ಜಗತ್ತಿನ ಉದ್ಯೋಗಾರ್ಹ ವಿಶ್ವವಿದ್ಯಾಲಯಗಳ ಟಾಪ್ 150 ಸಂಸ್ಥೆಗಳ ಪೈಕಿ ಐಐಟಿ ಬಾಂಬ್ 129ನೇ ಸ್ಥಾನದಲ್ಲಿತ್ತು. 2019ರಲ್ಲಿ ಈ ಶೈಕ್ಷಣಿಕ ಸಂಸ್ಥೆ 135ನೇ ಸ್ಥಾನ ಪಡೆದುಕೊಂಡಿತ್ತು. 

4.ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ-ಅಹಮದಾಬಾದ್)
ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ-ಅಹಮದಾಬಾದ್) ಸಂಸ್ಥೆಯೂ 2020ರ ಔದ್ಯೋಗಿಕ rankingನಲ್ಲಿ 148ನೇ ಸ್ಥಾನ ಗಳಿಸಿದೆ. ಎನ್‌ಐಆರ್‌ಎಫ್ rankingನಲ್ಲಿ ಈ ಬ್ಯುಸಿನೆಸ್ ಸ್ಕೂಲ್ ದೇಶದ ಅತ್ಯುನ್ನತ ಮ್ಯಾನೇಜ್ಮೆಂಟ್ ಸಂಸ್ಥೆ ಎನಿಸಿಕೊಂಡಿದೆ. 

ಬಿಡದ ಛಲ, MBBS ಸೀಟು ಪಡೆಯಲು ಯಶಸ್ವಿಯಾದ ದನ ಕಾಯೋ ಹುಡುಗಿ!

5. ಐಐಟಿ - ಖರಗ್‌ಪುರ
 ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ- ಖರಗ್‌ಪುರ ) ಗ್ಲೋಬಲ್ ಎಂಪ್ಲಾಯ್‌ಮೆಂಟ್ ರ್ಯಾಂಕಿಂಗ್‌ನ ಟಾಪ್ 250 ಪಟ್ಟಿಯಲ್ಲಿ ಹೊಸದಾಗಿ ಎಂಟ್ರಿ ಪಡೆದುಕೊಂಡಿದ್ದು, ಈ ವರ್ಷ 195ನೇ ಸ್ಥಾನವನ್ನ ಅಲಂಕರಿಸಿದೆ. 

6. ಅಮಿಟಿ ವಿಶ್ವವಿದ್ಯಾಲಯ
ಖಾಸಗಿ ಯೂನಿವರ್ಸಿಟಿಗಳಿರುವ ಎಂಪ್ಲಾಯ್‌ಮೆಂಟ್ ranking‌ನಲ್ಲಿ ಅಮಿಟಿ ವಿಶ್ವವಿದ್ಯಾಲಯ ನಂಬರ್ 1 ಸ್ಥಾನದಲ್ಲಿದೆ. 2019ರಲ್ಲಿ ಇದು ಜಗತ್ತಿನ 236ನೇ ಸ್ಥಾನದಲ್ಲಿತ್ತು.

ಸ್ಟ್ರೆಂಥ್ ಹೈಲೈಟ್ ಆಗಲಿ, ವೀಕೆನೆಸ್ ಮರೆ ಮಾಚಿ, ಕನಸಿನ ಕೆಲಸ ನಿಮ್ಮದಾಗಿಸಿಕೊಳ್ಳಿ

click me!