ಶ್ರೀನಗರದ ಅಮರ್ ಸಿಂಗ್ ಕಾಲೇಜ್‌‌ಗೆ ಯುನೇಸ್ಕೋ ಪ್ರಶಸ್ತಿ

By Suvarna News  |  First Published Dec 18, 2020, 4:29 PM IST

ಜಮ್ಮುಮತ್ತು ಕಾಶ್ಮೀರದ ಅಮರ್ ಸಿಂಗ್ ಕಾಲೇಜು ತುಂಬ ಹಳೆಯದಾಗಿದ್ದು, ಆ ಕಟ್ಟಡದ ಸಂರಕ್ಷಣೆ ಸಂಬಂಧ ರಚಿತವಾದ ಪ್ರಾಜೆಕ್ಟ್ ತಂಡದ ಕೆಲಸವು ಯುನೆಸ್ಕೋ ಗಮನ ಸೆಳೆದಿದೆ. ಫಲವಾಗಿ ಅಮರ್ ಸಿಂಗ್ ಕಾಲೇಜು ಕಟ್ಟಡ ಸಂಸರಕ್ಷಣೆಗೆ ಯುನೇಸ್ಕ್ ಏಷ್ಯಾ ಪೆಸಿಫಿಕ್ ಪ್ರಶಸ್ತಿ ದೊರೆತಿದೆ.


ಎಂಬತ್ತ ವರ್ಷಗಳಷ್ಟು ಹಳೆಯದಾದ ಶ್ರೀನಗರದ ಅಮರ್ ಸಿಂಗ್ ಕಾಲೇಜ್ ಕಟ್ಟಡಕ್ಕೆ ಯುನೆಸ್ಕೋ ಪ್ರಶಸ್ತಿ ದೊರೆತಿದೆ.

2020ರ ಸಾಲಿನ ಯುನೆಸ್ಕೋ ಏಷ್ಯಾ ಪೆಸಿಫಿಕ್ ಅವಾರ್ಡ್ಸ್ ಫಾರ್ ಕಲ್ಚರ್ಲ್ ಹೆರಿಟೇಜ್ ಕನ್ಜರ್ವಷನ್(ಸಾಂಸ್ಕೃತಿಕ ಪರಂಪರೆ ಸಂರಕ್ಷಣೆಗಾಗಿ ಯುನೆಸ್ಕೋ ಏಷ್ಯಾ-ಪೆಸಿಫಿಕ್ ಗೌರವ)ಗಾಗಿ ಗುರುತಿಸಲಾದ ಏಳು ಸಂರಕ್ಷಣಾ ಪ್ರಾಜೆಕ್ಟ್‌ಗಳ ಪೈಕಿ ಶ್ರೀನಗರದ ಅಮರ್ ಸಿಂಗ್ ಕಾಲೇಜ್ ಕಟ್ಟಡ ಸಂರಕ್ಷಣಾ ಟೀಮ್ ಒಂದಾಗಿದ್ದು, ಇದೊಂದು ದೊಡ್ಡ ಗೌರವ ಎಂದು ಹೇಳಲಾಗುತ್ತಿದೆ.

Tap to resize

Latest Videos

undefined

UPSC ನೇಮಕಾತಿ: ಅರ್ಜಿ ಸಲ್ಲಿಸಲು ಅವಕಾಶ, ಇಂಪಾರ್ಟೆಂಟ್ ಡೇಟ್ಸ್ ಹೀಗಿವೆ

ಬುಧವಾರ ಈ ಪ್ರಶಸ್ತಿಯನ್ನು ಘೋಷಿಸಲಾಯಿತು. ಅಂತಾರಾಷ್ಟ್ರೀಯ ಒಂಬತ್ತು ಸಂರಕ್ಷಣಾ ತಜ್ಞರು ನವೆಂಬರ್ 20ರಿಂದ 22ರವರೆಗೆ ಸಭೆ ಸೇರಿ ಪ್ರಾಜೆಕ್ಟ್‌ಗೆ ಎಲ್ಲ ಪ್ರವೇಶಗಳನ್ನು ಪರಿಶೀಲಿಸಿ ಅಂತಿಮವಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಆಯ್ಕೆ ಸಂಬಂಧ ನಡೆದ ಚರ್ಚೆಗಳನ್ನು ಆನ್‌ಲೈನ್ ಮೂಲಕವೇ ನಡೆಸಲಾಯಿತು.

ಯುನೆಸ್ಕೋ ಏಷ್ಯಾ ಪೆಸಿಫಿಕ್ ಫಾರ್ ಕಲ್ಚರಲ್ ಹೆರಿಟೇಜ್ ಕನ್ಸರ್ವಷನ್, ಈ ವರ್ಷ ಜ್ಯೂರಿಗಳು ಎರಡು ವಿಶೇಷ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ. ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಜ್ಯೂರಿಗಳು ಒಂದು ಪ್ರಶಸ್ತಿಯನ್ನು ಅವಾರ್ಡ್ ಆಫ್ ಎಕ್ಸ್‌ಲೆನ್ಸ್, ಮತ್ತೊಂದು  ಅವಾರ್ಡ್ ಆಫ್ ಡಿಸ್ಟಿಂಕ್ಷನ್ ಹಾಗೂ ಅವಾರ್ಡ್ ಫಾರ್ ನ್ಯೂ ಡಿಸೈನ್ ಇನ್ ಹೆರಿಟೇಜ್ ಎಂಬ ಪ್ರಶಸ್ತಿಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದೆ.

ಕೇಂದ್ರಾಡಳಿತದ ಪ್ರದೇಶದ ಐಎನ್ಟಿಎಸಿಎಚ್ ಚಾಪ್ಟರ್ ಆಡಳಿತವು ಅಮರ್ ಸಿಂಗ್ ಕಾಲೇಜಿನಲ್ಲಿ ಅನೇಕ ಸಂರಕ್ಷಣಾ ಕಾರ್ಯಗಳನ್ನು ಕೈಗೊಂಡಿತ್ತು. ಅಮರ್ ಸಿಂಗ್ ಕಾಲೇಜಿನ ಪುನರುತ್ಥಾನವು ಕಾಶ್ಮೀರ ಕಣಿವೆಯ ಹಿಂದಿನ ವೈಭವವನ್ನು ಮತ್ತೆ ಪುನಃ ಪ್ರತಿಷ್ಠಾಪಿಸುವ ಭಾಗವಾಗಿದೆ.

ಮುಂದಿನ ಕೆಲವು ತಿಂಗಳಲ್ಲಿ ಫೋನ್‌ಪೇಯಿಂದ 700 ಉದ್ಯೋಗ

ಹಲವಾರು ವರ್ಷಗಳ ನಿರ್ಲಕ್ಷ್ಯ, ಕಳಪೆ ನಿರ್ವಹಣೆ ಮತ್ತು 2014 ರಲ್ಲಿ ಅಭೂತಪೂರ್ವ ಪ್ರವಾಹದಂತಹ ದುರಂತ ಘಟನೆಗಳ ಪರಿಣಾಮವಾಗಿ ಉಂಟಾದ ಕಟ್ಟಡದ ದುಸ್ಥಿತಿಯನ್ನು ಅತಿ ಉನ್ನತ ಮಟ್ಟದ ತಾಂತ್ರಿಕ ಪ್ರಾವೀಣ್ಯತೆಯೊಂದಿಗೆ ಸರಿಪಡಿಸಲಾಯಿತು ಎಂದು ಎಂದು ತೀರ್ಪುಗಾರರು ತಮ್ಮಟಿಪ್ಪಣಿಯಲ್ಲಿತಿಳಿಸಿದ್ದಾರೆ.
"ಮೂಲ ಕಟ್ಟಡ ವಿನ್ಯಾಸ ಮತ್ತು ಸಾಮಗ್ರಿಗಳ ಬಗ್ಗೆ ಯೋಜನಾ ತಂಡ ಮುಖ್ಯ ಗಮನವು ಹೊಸ ತಲೆಮಾರಿನ ಕಟ್ಟಡ ಕುಶಲಕರ್ಮಿಗಳಿಗೆ ಇಟ್ಟಿಗೆ ಮತ್ತು ಕಲ್ಲಿನ ತರಬೇತಿ ನೀಡುವುದಾಗಿತ್ತು ಎಂದು ಅದು ಹೇಳಿದೆ.

 ಹಳೆಯ ನಗರ ಶ್ರೀನಗರದ ವಿಕ್ಟೋರಿಯನ್ ನೆರೆಹೊರೆಯಲ್ಲಿ 20 ನೇ ಶತಮಾನದ ವಿಶಿಷ್ಟ ವಾಸ್ತುಶಿಲ್ಪ ಆಸ್ತಿಯನ್ನು ರಕ್ಷಿಸಲು ಈ ಯೋಜನೆಯು ಗಮನಾರ್ಹ ಮಾದರಿಯಾಗಿದೆ ಎಂದು ಜ್ಯೂರಿ ತಂಡ ಟಿಪ್ಪಣಿಯಲ್ಲಿ ತಿಳಿಸಿದೆ.

ನಿಮ್ಮ ರೆಸ್ಯೂಮ್ ಹೀಗಿದ್ದರೆ... ಜಾಬ್ ಗ್ಯಾರಂಟಿ ಎನ್ನಿ!

 

click me!