ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಬದಲು ಟ್ಯಾಬ್‌..!

By Kannadaprabha NewsFirst Published Dec 18, 2020, 12:00 PM IST
Highlights

10 ಸಾವಿರ ರು. ಬೆಲೆಯ ಟ್ಯಾಬ್ಲೆಟ್‌ ನೀಡಲು ನಿರ್ಧಾರ| 1.55 ಲಕ್ಷ ವಿದ್ಯಾರ್ಥಿಗಳಿಗೆ 155 ಕೋಟಿ ವೆಚ್ಚದಲ್ಲಿ ಟ್ಯಾಬ್‌| ಈ ಹಿಂದೆ ಪ್ರತಿ ವರ್ಷ ಸರ್ಕಾರ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡುವ ಯೋಜನೆ ಜಾರಿಗೆ ತರಲಾಗಿತ್ತು| ಖರೀದಿಯಲ್ಲಿ ಅಕ್ರಮದ ನಡೆದಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲ್ಯಾಪ್‌ಟಾಪ್‌ ಬದಲು ಟ್ಯಾಬ್ಲೆಟ್‌ ನೀಡಲು ತೀರ್ಮಾನ| 

ಬೆಂಗಳೂರು(ಡಿ.18): ಪದವಿ ವಿದ್ಯಾರ್ಥಿಗಳಿಗೆ ಉಚಿತ ‘ಲ್ಯಾಪ್‌ಟಾಪ್‌’ ವಿತರಣೆ ಯೋಜನೆ ಕೈಬಿಟ್ಟಿದ್ದ ಸರ್ಕಾರ ಇದೀಗ ಲ್ಯಾಪ್‌ಟಾಪ್‌ ಬದಲು ಟ್ಯಾಬ್ಲೆಟ್‌ ನೀಡಲು ತೀರ್ಮಾನಿಸಿದೆ.

ಪ್ರತಿ ವಿದ್ಯಾರ್ಥಿಗೂ 10 ಸಾವಿರ ರು. ಮೌಲ್ಯದ ಟ್ಯಾಬ್ಲೆಟ್‌ ನೀಡಲು ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಿದೆ. ಒಟ್ಟು 1.55 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ನೀಡಲು 155.40 ಕೋಟಿ ರು. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಉನ್ನತ ಶಿಕ್ಷಣ, ಉದ್ಯೋಗಾವಕಾಶ: ಕರ್ನಾಟಕ-ಬ್ರಿಟನ್‌ ಒಪ್ಪಂದ

ಇತ್ತೀಚೆಗೆ ನಡೆದ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಹೊಸ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ಟ್ಯಾಬ್ಲೆಟ್‌ ನೀಡುವ ಯೋಜನೆಯ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಸಂಪುಟ ಸಭೆಯ ಕೂಡ ಒಪ್ಪಿಗೆ ನೀಡಿತ್ತು ಎಂದು ಮೂಲಗಳು ಹೇಳಿವೆ.

ಈ ಹಿಂದೆ ಪ್ರತಿ ವರ್ಷ ಸರ್ಕಾರ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡುವ ಯೋಜನೆ ಜಾರಿಗೆ ತರಲಾಗಿತ್ತು. ಆದರೆ, ಇದರ ಖರೀದಿಯಲ್ಲಿ ಅಕ್ರಮದ ನಡೆದಿರುವ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲ್ಯಾಪ್‌ಟಾಪ್‌ ಬದಲು ಟ್ಯಾಬ್ಲೆಟ್‌ ನೀಡಲು ತೀರ್ಮಾನಿಸಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್‌, ಇಂಜಿನಿಯರಿಂಗ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ನೀಡಲಾಗುವುದು.
 

click me!