ಶಿಕ್ಷಣ ಸಚಿವರ ಮನೆಗೆ ನುಗ್ಗಿದವರು ವಿದ್ಯಾರ್ಥಿಗಳೇ ಅಲ್ಲ. ಪ್ರಜಾಪ್ರಭುತ್ವ ಮಾದರಿಯಲ್ಲಿ ಹೋರಾಟ ಮಾಡಬೇಕು ಇದು ಆ ರೀತಿಯ ಹೋರಾಟವಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಜೂ.8): ಶಿಕ್ಷಣ ಸಚಿವರ ಮನೆಗೆ ನುಗ್ಗಿದವರು ವಿದ್ಯಾರ್ಥಿಗಳೇ ಅಲ್ಲ. ಪ್ರಜಾಪ್ರಭುತ್ವ ಮಾದರಿಯಲ್ಲಿ ಹೋರಾಟ ಮಾಡಬೇಕು ಇದು ಆ ರೀತಿಯ ಹೋರಾಟವಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ದಾವಣಗೆರೆಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಾವೂ ಕೂಡ ಹೊರಾಟ ಮಾಡಿಯೇ ಬಂದಿದ್ದೇವೆ.ಮನೆಗೆ ನುಗ್ಗಿ ಹೋರಾಟ ಮಾಡುವುದು ಸರಿಯಲ್ಲ. ನಾವು ಕಾನೂನು ರೀತಿ ಕ್ರಮ ಕೈಗೊಂಡಿದ್ದೇವೆ. ಹೋರಾಟಗಾರರು ಪ್ರತಿಭಟನೆ ಮಾಡಲು ಅನುಮತಿಯೂ ಪಡೆದಿಲ್ಲ ಇದ್ದಕ್ಕಿದ್ದಂತೆ ಮನೆಗೆ ನುಗ್ಗಿದ್ದಾರೆ ಇದು ಖಂಡನೀಯ .ಶಿಕ್ಷಣ ಸಚಿವರ ಮನೆಗೆ ನುಗ್ಗಿದವರಲ್ಲಿ ಯಾರು ವಿದ್ಯಾರ್ಥಿಗಳಿಲ್ಲ, ಬೇರೆ ಬೇರೆ ಸಂಘಟನೆಯವರು ಇದ್ದಾರೆ. ದಾವಣಗೆರೆಯ ಮೂವರು ಇದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥಿತ ಚೆನ್ನಾಗಿದೆ. ಜಿಲ್ಲೆಯಲ್ಲಿ ಸಣ್ಣ ಪುಟ್ಟ ಘಟನೆ ಬಿಟ್ಟರೆ ಶಾಂತಿಯಿದೆ. ಇಲ್ಲಿನ ಪೋಲೀಸರು ಹಿಜಾಬ್ ಪ್ರಕರಣ ಮತ್ತಿತರ ವಿವಾದಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆಂದರು.
ಶಿವಮೊಗ್ಗ ಜಿಲ್ಲೆಯ ನಾಲ್ಕು ಕಡೆ ಸ್ಯಾಟಲೈಟ್ ಫೊನ್ ನಲ್ಲಿ ಮಾತನಾಡಿರುವ ವರದಿ ಬಂದಿದೆ. ಅದರ ಬಗ್ಗೆ ನಿಗಾ ಇಡಲಾಗಿದೆ ಇದಲ್ಲದೇ ಉಗ್ರ ಚಟುವಟಿಕೆ ಬಗ್ಗೆ ನಿಗಾ ವಹಿಸಲಾಗಿದೆ.ಕಾನೂನು ಸುವ್ಯವಸ್ಥೆಗೆ ಭಂಗ ಬಾರದ ರೀತಿಯಲ್ಲಿ ಕೆಲಸ ಮಾಡಿದ್ದೇವೆ. ಹಿಜಾಬ್ ವಿವಾದ ಒಂದೆರೆಡು ಕಡೆ ಇದೆ.ಕೊರ್ಟ್ ಆದೇಶದ ಪ್ರಕಾರ ನಡೆಯಬೇಕು. ಎಲ್ಲಿ ಸಮವಸ್ತ್ರ ಇದೆಯೋ ಅಲ್ಲಿ ಕಾನೂನು ಜಾರಿಯಾಗುತ್ತದೆ ಹಾಗೂ ಕಾನೂನು ರೀತಿ ನಡೆಯಬೇಕು ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ತಪ್ಪಾಗಿದ್ರೆ ತಿದ್ದಿಕೊಳ್ಳುತ್ತೇವೆ: ಸಚಿವ ನಾಗೇಶ್
ಪಿಎಸ್ ಐ ಪರೀಕ್ಷೆ ಅವ್ಯವಹಾರ ತನಿಖೆ ಪಾರದರ್ಶಕವಾಗಿದೆ. ಈ ಹಗರಣದಲ್ಲಿ ಭಾಗವಹಿಸಿದ್ದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಡಿ ವೈಎಸ್ಪಿಯನ್ನು ಬಿಟ್ಟಿಲ್ಲ ಆ ರೀತಿ ಬಂದಿಸಿದ್ದೇವೆ.ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ.ಈ ಹಿಂದೆಯು ಹಗರಣಗಳಿದ್ದವು ಆದ್ರೆ ಯಾರು ಹಗರಣ ಬಯಲಿಗೆಳೆದಿರಲಿಲ್ಲ.ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸುತ್ತೇವೆ ಎಂದರು.
KUD Annual Convocation; ಎಂ.ಎ ಪತ್ರಿಕೋದ್ಯಮದಲ್ಲಿ ಸುಜಾತ ಜೋಡಳ್ಳಿಗೆ 9 ಚಿನ್ನದ ಪದಕ!
ಬೆಂಗಳೂರಿನಲ್ಲಿ ಉಗ್ರ ಸಿಕ್ಕಿದ್ದಾನೆ.ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ.ಆತನಿಗೆ ಯಾರು ಸಹಾಯ ಮಾಡಿದ್ದಾರೆ ಆತನ ಹಿಂದೆ ಯಾರಿದ್ದಾರೆ ಈ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂದರು. ಕೇಂದ್ರದ ಜೊತೆ ನಮ್ಮ ಬೆಂಗಳೂರು ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ.ಕೆಲವೊಂದು ವಿಚಾರಗಳನ್ನು ಮಾಧ್ಯಮದ ಮುಂದೆ ಹೇಳುವುದಕ್ಕೆ ಸಾಧ್ಯವಿಲ್ಲ ಎಂದರು .ಈ ವೇಳೆ ಐಜಿಪಿ ತ್ಯಾಗರಾಜ್,ಎಸ್ಪಿ ಸಿ.ಬಿ ರಿಷ್ಯಂತ್, ಎಎಸ್ ಪಿ ರಾಮಗೊಂಡ ಬಸರಗಿ ಇದ್ದರು.