ಪ್ರತಿವರ್ಷ ಶಾಲೆ ಆರಂಭವಾದರೂ ಪಠ್ಯ ಪುಸ್ತಕವೇ ಬಂದಿರುವುದಿಲ್ಲ. ಹೀಗಾಗಿ ಪಠ್ಯ ಪುಸ್ತಕಗಳಿಲ್ಲದೇ ಶಾಲೆ ಆರಂಭಿಸಬೇಕಾಗುತ್ತಿತ್ತು. ಎಲ್ಲ ಮಕ್ಕಳ ಕೈಗೆ ಪಠ್ಯ ಪುಸ್ತಕ ಸಿಗಬೇಕೆಂದರೆ ಕನಿಷ್ಠ ಒಂದೆರಡು ತಿಂಗಳೇ ಬೇಕಾಗುತ್ತಿತ್ತು. ಆದರೆ, ಈ ವರ್ಷ ಹಾಗೆ ಆಗಿಲ್ಲ. ಎಲ್ಲ ಶಾಲೆಗಳಿಗೆ ಈಗಾಗಲೇ ಪಠ್ಯ ಪುಸ್ತಕಗಳು ತಲುಪಿವೆ. ಹೀಗಾಗಿ, ಈ ವರ್ಷ ಶಾಲೆಯ ಆರಂಭದ ದಿನವೇ ಪುಸ್ತಕಗಳು ಮಕ್ಕಳ ಕೈ ಸೇರಲಿವೆ .
ಶಿವಾನಂದ ಗೊಂಬಿ
ಹುಬ್ಬಳ್ಳಿ (ಮೇ.20) :
ಪ್ರತಿವರ್ಷ ಶಾಲೆ ಆರಂಭವಾದರೂ ಪಠ್ಯ ಪುಸ್ತಕವೇ ಬಂದಿರುವುದಿಲ್ಲ. ಹೀಗಾಗಿ ಪಠ್ಯ ಪುಸ್ತಕಗಳಿಲ್ಲದೇ ಶಾಲೆ ಆರಂಭಿಸಬೇಕಾಗುತ್ತಿತ್ತು. ಎಲ್ಲ ಮಕ್ಕಳ ಕೈಗೆ ಪಠ್ಯ ಪುಸ್ತಕ ಸಿಗಬೇಕೆಂದರೆ ಕನಿಷ್ಠ ಒಂದೆರಡು ತಿಂಗಳೇ ಬೇಕಾಗುತ್ತಿತ್ತು. ಆದರೆ, ಈ ವರ್ಷ ಹಾಗೆ ಆಗಿಲ್ಲ. ಎಲ್ಲ ಶಾಲೆಗಳಿಗೆ ಈಗಾಗಲೇ ಪಠ್ಯ ಪುಸ್ತಕಗಳು ತಲುಪಿವೆ. ಹೀಗಾಗಿ, ಈ ವರ್ಷ ಶಾಲೆಯ ಆರಂಭದ ದಿನವೇ ಪುಸ್ತಕಗಳು ಮಕ್ಕಳ ಕೈ ಸೇರಲಿವೆ .
ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೆಯ ತರಗತಿ ವರೆಗೆ ಪಠ್ಯ ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಖಾಸಗಿ ಶಾಲೆಗಳಲ್ಲಿ ಮಕ್ಕಳಿಂದ ಹಣ ಸಂಗ್ರಹಿಸಿ ಪುಸ್ತಕ ಖರೀದಿಸಿ ಮಕ್ಕಳಿಗೆ ಹಂಚಲಾಗುತ್ತದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಂದ ಒಟ್ಟು 21,34,739 ಪಠ್ಯ ಪುಸ್ತಕಗಳ ಬೇಡಿಕೆ ಇತ್ತು. ಈ ಪೈಕಿ ಈವರೆಗೆ 21,01,370 ಪುಸ್ತಕಗಳ ಪೂರೈಕೆಯಾಗಿದೆ. ಇದರಲ್ಲಿ 16,94,724 ಪಠ್ಯ ಪುಸ್ತಕಗಳನ್ನು ಈಗಾಗಲೇ ಶಾಲೆಗಳಿಗೆ ಹಂಚಿಕೆ ಕೂಡ ಮಾಡಲಾಗಿದೆ. ಅಂದರೆ ಬರೋಬ್ಬರಿ ಶೇ.80.65ರಷ್ಟುಶಾಲೆಗಳಿಗೆ ಹಂಚಿಕೆ ಮಾಡಿದಂತಾಗಿದೆ.
ಸರ್ಕಾರಿ ಶಾಲೆಗಳಿಗೆಷ್ಟು?
ಮಕ್ಕಳಿಗೆ ಉಚಿತವಾಗಿ ಪುಸ್ತಕ ಪೂರೈಕೆ ಮಾಡುವ ಸರ್ಕಾರಿ ಶಾಲೆಗಳಲ್ಲಿನ 15,53,488 ಬೇಡಿಕೆ ಪೈಕಿ 15,24,160 ಪುಸ್ತಕ ಪೂರೈಕೆಯಾಗಿ 13,75405 ಪುಸ್ತಕಗಳನ್ನು ಹಂಚಿಕೆ ಕೂಡ ಮಾಡಲಾಗಿದೆ. ಇನ್ನುಳಿದ ಶೇ. 2ರಷ್ಟುಹಂಚಿಕೆ ಮಾತ್ರ ಸರ್ಕಾರಿ ಶಾಲೆಗಳಿಗೆ ಕೊಡುವುದು ಬಾಕಿಯುಳಿದಿದೆ. ಅದನ್ನು ಆಯಾ ಶಾಲಾ ಸಿಬ್ಬಂದಿ ಆಗಮಿಸಿ ತೆಗೆದುಕೊಂಡು ಹೋಗುವುದಿಕ್ಕಿದೆ.
ಖಾಸಗಿಯಲ್ಲಿ ಕೊಂಚ ಕಮ್ಮಿ:
ಇನ್ನು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಹಣ ಪಡೆದು ಪಠ್ಯಪುಸ್ತಕಗಳನ್ನು ಖರೀದಿಸಿ ಹಂಚುತ್ತವೆ. ಧಾರವಾಡ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಿಂದ 5,81,251 ಬೇಡಿಕೆ ಪೈಕಿ 5,77,210ರಷ್ಟುಪುಸ್ತಕ ಪೂರೈಕೆಯಾಗಿದೆ. ಆದರೆ 3,19,319 ಪುಸ್ತಕ ಹಂಚಿಕೆಯಾಗಿವೆ. ಇನ್ನು ಕೆಲ ಶಾಲೆಗಳು ಪುಸ್ತಕಗಳನ್ನು ಒಯ್ದಿಲ್ಲ. ಹೀಗಾಗಿ ಹಂಚಿಕೆಯಲ್ಲಿ ಕಡಿಮೆಯಾಗಿದೆ. ದಾಸ್ತಾನು ಮಾಡಲಾಗಿದೆ. ಯಾವಾಗ ಬೇಕಾದರೂ ಖಾಸಗಿ ಶಾಲೆಗಳು ಒಯ್ಯಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ಸಂಜಯ ಮಾಳಿ ತಿಳಿಸುತ್ತಾರೆ.
ಯಾಕೆ ಬೇಗ?
ಜೂನ್‌ನಲ್ಲಿ ಶಾಲೆಗಳು ಪ್ರಾರಂಭವಾಗುತ್ತಿದ್ದರೂ ಈ ಬಾರಿ ಮಾತ್ರ ಮಾಚ್‌ರ್ ಕೊನೆಗೆ ಬಹುತೇಕ ಪಠ್ಯ ಪುಸ್ತಕಗಳು ಜಿಲ್ಲೆಗೆ ಬಂದಿದ್ದವು. ಇನ್ನು ಏಪ್ರಿಲ್‌ನಲ್ಲೂ ಕೆಲವೊಂದಿಷ್ಟುಬಂದವು. ವಿಧಾನಸಭೆ ಚುನಾವಣೆ ಇದ್ದ ಕಾರಣ ಚುನಾವಣೆ ಕೆಲಸದಲ್ಲಿ ಎಲ್ಲ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ನಿರತವಾಗುವುದರಿಂದ ಘೋಷಣೆಗೂ ಮುನ್ನವೇ ಪಠ್ಯ ಪುಸ್ತಕಗಳು ಆಯಾ ಜಿಲ್ಲೆಗಳಿಗೆ ಸರಬರಾಜು ಆಗಿದೆ. ಚುನಾವಣೆಯ ಗದ್ದಲದ ನಡುವೆಯೇ ಎಲ್ಲ ಶಾಲೆಗಳಿಗೆ ಮುಟ್ಟಿಸುವ ಕೆಲಸವನ್ನು ಅಧಿಕಾರಿಗಳು ಮಾಡಿರುವುದು ವಿಶೇಷ.
Dharwad assembly constituency: ಪಶ್ಚಿಮದಲ್ಲಿ ಉದಯಿಸಬೇಕಿದೆ ಅಭಿವೃದ್ಧಿಯ ಬೆಳಕು!...
ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಅವರ ಕೈಗೆ ಈ ಬಾರಿ ಪುಸ್ತಕಗಳು ತಲುಪಲಿವೆ. ಹಿಂದಿನ ವರ್ಷಗಳಂತೆ ಅರ್ಧದಷ್ಟುಪಾಠ ಪೂರ್ಣ ಬಳಿಕ ಪುಸ್ತಕ ಬರುವ ಸಮಸ್ಯೆ ಎದುರಾಗುವುದಿಲ್ಲ. ಮಕ್ಕಳಿಗೆ ಈ ವರ್ಷ ಪುಸ್ತಕದ ಕೊರತೆ ಎಂಬ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧಿಕಾರಿ ವರ್ಗದ ಮಾತು.
ಒಟ್ಟಿನಲ್ಲಿ ಶಾಲೆ ಆರಂಭದ ದಿನವೇ ಮಕ್ಕಳ ಕೈಗೆ ಪುಸ್ತಕ ಸೇರಲಿರುವುದು ಶಿಕ್ಷಕರು, ಪಾಲಕರಲ್ಲಿ ಸಂತಸವನ್ನುಂಟು ಮಾಡಿರುವುದಂತೂ ಸತ್ಯ. ಪ್ರತಿವರ್ಷವೂ ಇದೇ ರೀತಿ ಪುಸ್ತಕಗಳ ಪೂರೈಕೆಯಾಗಲಿ ಎಂಬ ಆಶಯ ಶಿಕ್ಷಣ ಪ್ರೇಮಿಗಳದ್ದು.
ಜಿಲ್ಲೆಯಲ್ಲಿ ಈಗಾಗಲೇ ಶೇ. 98.44ರಷ್ಟುಪಠ್ಯ ಪುಸ್ತಕ ಪೂರೈಕೆಯಾಗಿದೆ. ಇದರಲ್ಲಿ ಶೇ. 98.11ರಷ್ಟುಸರ್ಕಾರಿ ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ. ಖಾಸಗಿ ಶಾಲೆಗಳಿಗೆ ಶೇ. 55.32ರಷ್ಟುಹಂಚಿಕೆಯಾಗಿದೆ. ಒಟ್ಟು 80.65ರಷ್ಟುಹಂಚಿಕೆಯಾಗಿದೆ. ಖಾಸಗಿ ಶಾಲೆಗಳು ಪುಸ್ತಕಗಳನ್ನು ಒಯ್ಯಬೇಕಿದೆ.
ಎಸ್.ಎಸ್. ಕೆಳದಿಮಠ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ
ಖಾಸಗಿ ಶಾಲಾ ಮಕ್ಕಳ ಪಠ್ಯಪುಸ್ತಕ ಶೇ.25ರಷ್ಟು ದುಬಾರಿ: ಬೆಲೆ ಏರಿಕೆ, ಜಿಎಸ್‌ಟಿ ಕಾರಣ
ಎಲ್ಲಿ ಎಷ್ಟುಪೂರೈಕೆ
ತಾಲೂಕು ಬೇಡಿಕೆ ಪೂರೈಕೆ ಹಂಚಿಕೆ