ರಾಯಚೂರು: ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸಿಂಧ​ನೂ​ರಿನ ಶಿಕ್ಷಕ

By Kannadaprabha News  |  First Published Jun 16, 2023, 1:54 PM IST

ಸರ್ಕಾರ ವಿದ್ಯಾಗಮ ಯೋಜನೆ ಜಾರಿಗೊಳಿ ಜಾಗೃತಿ ಮೂಡಿಸುವ ನಿಟ್ಟಿ​ನ​ಲ್ಲಿ 19 ನಿಮಿಷ 37 ಸೆಕೆಂಡ್‌ ಕಿರುಚಿತ್ರವನ್ನು ನಿರ್ಮಿ​ಸಿ​ದ್ದ​ ಶಂಕರದೇವರು ಹಿರೇಮಠ. ಪರಿ​ಣಾ​ಮ​ಕಾ​ರಿ​ಯಾಗಿ ಮೂಡಿ​ಬಂದ ಈ ಕಿರು​ಚಿ​ತ್ರ​ಕ್ಕೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸ್ಥಾನ ಸಿಕ್ಕಿದೆ.


ಸಿಂಧನೂರು(ಜೂ.16):  ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಶಿಕ್ಷಕ ಶಂಕರದೇವರು ಹಿರೇಮಠ ಹೆಸರು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿದೆ ಎಂದು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಮುಖ್ಯಸ್ಥ ಡಾ.ಬಿಶ್ವಾಸ ಸ್ವರೂಪರಾಯ ಚೌದರಿ ತಿಳಿಸಿದ್ದಾರೆ.

ದುಗ್ಗಮ್ಮನಗುಂಡ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಂಕರದೇವರು ಹಿರೇಮಠ ಲಾಕ್‌ಡೌನ್‌ ಸಮಯದಲ್ಲಿ ತಾತ್ಕಾಲಿಕವಾಗಿ ಮುಚ್ಚಿದ್ದ ಶಾಲೆಗಳು ಪುನರಾರಂಭವಾದಾಗ ಪಾಲಕರು ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದರು. 

Latest Videos

undefined

ವಿದ್ಯಾರ್ಥಿಗಳ ಪ್ರಾಣಕ್ಕೆ ಕುತ್ತು ತರುತ್ತಿದೆ ಬಸ್‌ ಪ್ರಯಾಣ

ಆ ಸಮಯದಲ್ಲಿ ಸರ್ಕಾರವು ವಿದ್ಯಾಗಮ ಯೋಜನೆ ಜಾರಿಗೊಳಿ ಜಾಗೃತಿ ಮೂಡಿಸುವ ನಿಟ್ಟಿ​ನ​ಲ್ಲಿ 19 ನಿಮಿಷ 37 ಸೆಕೆಂಡ್‌ ಕಿರುಚಿತ್ರವನ್ನು ನಿರ್ಮಿ​ಸಿ​ದ್ದ​ರು. ಪರಿ​ಣಾ​ಮ​ಕಾ​ರಿ​ಯಾಗಿ ಮೂಡಿ​ಬಂದ ಈ ಕಿರು​ಚಿ​ತ್ರ​ಕ್ಕೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸ್ಥಾನ ಸಿಕ್ಕಿದೆ.

click me!