ರಾಜ್ಯದ ಎಲ್ಲ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ 10 ನಿಮಿಷ ಕಾಲ ಧ್ಯಾನ ಕಾರ್ಯಕ್ರಮಕ್ಕೆ ಸಲುವಾಗಿ ಶಿಕ್ಷಣ ಸಚಿವರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ನ.3): ರಾಜ್ಯದ ಎಲ್ಲ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ 10 ನಿಮಿಷ ಕಾಲ ಧ್ಯಾನ ಮಾಡಿಸಲು ಅಗತ್ಯ ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸಿರುವ ಬೆನ್ನಲ್ಲೆ ಶಿಕ್ಷಣ ಸಚಿವರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಗಳಲ್ಲಿ ಯೋಗ ಧ್ಯಾನ ಮಾಡಿಸುವುಕ್ಕೆ ನನ್ನ ವಿರೋಧ ಇಲ್ಲ . ಸರ್ಕಾರ ಮೊದಲು ಶಾಲೆಗೆ ಬೇಕಾದ ಬೋಧನಾ ಸಾಮಗ್ರಿಗಳನ್ನು ಒದಗಿಸಬೇಕು. ಶಿಕ್ಷಕರು ನೇಮಕಾತಿ ಮಾಡಬೇಕು. ಅದ್ರಲ್ಲೂ ಕ್ರೀಡಾ, ಸಂಗೀತ ,ಕಲೆ ಶಿಕ್ಷಕರ ನೇಮಕಾತಿ ಮಾಡುಕೊಳ್ಳಬೇಕು. ಆದ್ರೆ ಇದನ್ನೆಲ್ಲ ಬಿಟ್ಟು ಸರ್ಕಾರ ಯೋಗ ಧ್ಯಾನ ಮಾಡಿಸೊದಕ್ಕೆ ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಕೊರೊನಾ ಸಮಯದಲ್ಲಿ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಎಂದು ಮೊಬೈಲ್ ಹುಚ್ಚು ಹಚ್ಚಲಾಗಿದೆ. ಈಗ ಆ ಮೊಬೈಲ್ ಹುಚ್ಚು ಬಿಡಿಸುಲು ಈ ಧ್ಯಾನ ಯೋಗ ನಾ..? ಬಿ.ಸಿ.ನಾಗೇಶ್ ಶಿಕ್ಷಣ ಸಚಿವರಾಗಿದ್ದಾಗಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗಿದೆ. ಪಠ್ಯ ಪುಸ್ತಕ ವಿವಾದ, ಶಿಕ್ಷಕರ ನೇಮಕಾತಿ ಹಗರಣ ಇವೆಲ್ಲ ನಡೆದಿದೆ. ಮಕ್ಕಳು ಆಟ ಆಡುತ್ತ ಕುಣಿಯುತ್ತ ಪಾಠ ಕೇಳುತ್ತ ಬೇಳೆಯಬೇಕು. ಆದ್ರೆ ಸರ್ಕಾರ ಬಲವಂತವಾಗಿ ಮಕ್ಕಳನ್ನು ಕೊಣೆಯಲ್ಲಿ ಕೂಡಿ ಹಾಕಿ ಧ್ಯಾನ ಯೋಗ ಮಾಡಿಸೊಕ್ಕೆ ಹೊರಟಿದೆ. ಮಕ್ಕಳಿಗಿಂದ ಶಿಕ್ಷಣ ಸಚಿವರಿಗೆ ಯೋಗ ಧ್ಯಾನದ ಅವಶ್ಯಕತೆ ಇದೆ ಎಂದಿದ್ದಾರೆ.
ಶಾಲೆಗೆ ಹೋಗಲು ಜೀವ ಕೈಯಲ್ಲಿ ಹಿಡಿದು ನದಿ ದಾಟುವ ಮಕ್ಕಳು... ವಿಡಿಯೋ ವೈರಲ್
ಧ್ಯಾನ ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವ, ಉತ್ತಮ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ಮತ್ತು ಒಟ್ಟಾರೆಯಾಗಿ ಉತ್ತಮ ನಾಗರಿಕರಾಗಲು ಸಹಾಯ ಮಾಡುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ಶಿಕ್ಷಣ ಸಚಿವರು ಹೇಳಿದ್ದರು. ಇದಕ್ಕೆ ಧ್ಯಾನವನ್ನು ಪರಿಚಯಿಸುವ ಕ್ರಮವು "ಶಾಲಾ ಶಿಕ್ಷಣದ ಕೇಸರಿಕರಣ" ಮತ್ತು ಧಾರ್ಮಿಕ ಅಂಶಗಳನ್ನು ಪರಿಚಯಿಸುತ್ತದೆ ಎಂಬ ಟೀಕೆಗಳು ಕೂಡ ವ್ಯಕ್ತವಾಗಿತ್ತು.
ರಾಜ್ಯದ ಎಲ್ಲಾ ಶಾಲೆ, ಕಾಲೇಜಿನಲ್ಲಿ ನಿತ್ಯ 10 ನಿಮಿಷ ಧ್ಯಾನ: ಸಚಿವರ ಸೂಚನೆ
ಟೀಕೆಗಳ ಬಗ್ಗೆ ಉತ್ತರಿಸಿದ್ದ ಬಿಸಿ ನಾಗೇಶ್, ಧ್ಯಾನವು ಧಾರ್ಮಿಕ ಅಭ್ಯಾಸವಲ್ಲ ಮತ್ತು ಈ ಅಭ್ಯಾಸವು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಸುಮಾರು 2 ವರ್ಷಗಳ ಆನ್‌ಲೈನ್ ಶಾಲೆಗಳ ನಂತರ ಸಾಂಕ್ರಾಮಿಕ ನಂತರದ ಶಿಕ್ಷಣದ ವ್ಯವಸ್ಥೆಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಎಂದಿದ್ದರು.
ಮೊದಲು ಶಾಲೆಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಶಿಕ್ಷಕರನ್ನು ನೇಮಿಸಿ ಅವಶ್ಯಕವಾದ ಬೋದನಾ ಸಲಕರಣೆಗಳನ್ನು ಸರ್ಕಾರ ಒದಗಿಸಬೇಕು. ಪ್ರತಿಶಾಲೆಯಲ್ಲಿ ಕಲೆ, ಸಂಗೀತ ಮತ್ತು ಕ್ರೀಡೆಗಳಲ್ಲಿ ತರಬೇತಿ ನೀಡುವ ಶಿಕ್ಷಕರನ್ನು ನೇಮಿಸಬೇಕು.
ಇದನ್ನು ಬಿಟ್ಟು ತಮ್ಮ ರಾಜಕೀಯ ಅಜೆಂಡಾಕ್ಕಾಗಿ ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಬಾರದು.
5/5