ಇಂದಿನಿಂದ ಪಿಯು-2 ಪರೀಕ್ಷೆ: ಆಲ್‌ ದಿ ಬೆಸ್ಟ್‌

By Kannadaprabha NewsFirst Published Mar 1, 2024, 8:07 AM IST
Highlights

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ 3 ಬಾರಿ ಪರೀಕ್ಷೆ (ಪರೀಕ್ಷೆ 1, 2, 3) ಬರೆದು ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೋ ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಆತಂಕ ಪಡುವಂತಿಲ್ಲ. ಈಗ ನಡೆಯಲಿರುವ ಪರೀಕ್ಷೆ 1 ಅನ್ನು ಆರಾಮಾಗಿ ಬರೆಯಿರಿ. ಒಂದು ವೇಳೆ ಸರಿಯಾಗಿ ಪರೀಕ್ಷೆ ಎದುರಿಸಲಾಗದ ಅಳುಕಿದ್ದರೆ ಮತ್ತೆ ಏಪ್ರಿಲ್‌ನಲ್ಲಿ ಮೊದಲ ವಾರ ಪರೀಕ್ಷೆ 2, ಏಪ್ರಿಲ್ ಕೊನೆಯ ವಾರದಲ್ಲಿ ಪರೀಕ್ಷೆ 3ಅನ್ನು ಬರೆವ ಅವಕಾಶವಿದೆ. 

ಬೆಂಗಳೂರು(ಮಾ.01): ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ಶುಕ್ರವಾರದಿಂದ (ಮಾ.1) ಆರಂಭ ವಾಗುತ್ತಿದ್ದು ರಾಜ್ಯಾದ್ಯಂತ 1124 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಬಾರಿ 6.98 ಲಕ್ಷ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿ ಕೊಂಡಿದ್ದು ಮೊದಲ ದಿನ ಕನ್ನಡ ಮತ್ತು ಅರೇಬಿಕ್ ವಿಷಯದ ಪರೀಕ್ಷೆಗಳು ನಡೆಯಲಿವೆ.

ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ 3 ಬಾರಿ ಪರೀಕ್ಷೆ (ಪರೀಕ್ಷೆ 1, 2, 3) ಬರೆದು ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೋ ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಆತಂಕ ಪಡುವಂತಿಲ್ಲ. ಈಗ ನಡೆಯಲಿರುವ ಪರೀಕ್ಷೆ 1 ಅನ್ನು ಆರಾಮಾಗಿ ಬರೆಯಿರಿ. ಒಂದು ವೇಳೆ ಸರಿಯಾಗಿ ಪರೀಕ್ಷೆ ಎದುರಿಸಲಾಗದ ಅಳುಕಿದ್ದರೆ ಮತ್ತೆ ಏಪ್ರಿಲ್‌ನಲ್ಲಿ ಮೊದಲ ವಾರ ಪರೀಕ್ಷೆ 2, ಏಪ್ರಿಲ್ ಕೊನೆಯ ವಾರದಲ್ಲಿ ಪರೀಕ್ಷೆ 3ಅನ್ನು ಬರೆವ ಅವಕಾಶವಿದೆ. 

ಎಕ್ಸಾಂ ಟೈಂನಲ್ಲಿ ಮಾನಸಿಕ ಒತ್ತಡದಿಂದ ಕಣ್ಣಿಗೆ ಸಮಸ್ಯೆ

ಬಿಗಿ ಬಂದೋಬಸ್ತ್, ಕಣ್ಣಾವಲು:

ಪರೀಕ್ಷೆ -1 ಮಾ.22ರವರೆಗೆ ನಿತ್ಯ 10.15ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆಗಳು ನಡೆಯಲಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶವಾಗದಂತೆ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ. ನಿರ್ಣಯ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷಾಕೇಂದ್ರಗಳಸುತ್ತ 200 ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಕೆಎಸ್‌ಇಎಬಿ ಕಚೇರಿಯಿಂದ ಪರೀಕ್ಷಾ ಕೇಂದ್ರಗಳವರೆಗೆ ಪ್ರಶ್ನೆ ಪತ್ರಿಕೆ ಹಾಗೂ ವಿ ಉತ್ತರ ಪತ್ರಿಕೆಗಳ ಸಾಗಣೆ, ಸಂಗ್ರ ಹಣೆ ಕೇಂದ್ರಗಳಲ್ಲಿ ಎಲ್ಲೆಡೆ 24/7 ಸಿಸಿಟಿವಿ ನಿಗಾ ಮಾಡಲಾಗಿದೆ.ಪರೀಕ್ಷಾಕೇಂದ್ರಗಳಸುತ್ತಮುತ್ತಲ ಟ್ಯೂಷನ್, ಕೋಚಿಂಗ್ ಕೇಂದ್ರಗಳು, ಝರಾಕ್ಸ್ ಕೇಂದ್ರಗಳು, ಸೈಬರ್, ಕಂಪ್ಯೂಟರ್, ಗೇಮ್ಸ್ ಕೇಂದ್ರಗಳ ಮೇಲೆ ಗಮನ ಹರಿಸಲಾಗಿದೆ.

ಡ್ರೆಸ್ ಕೋಡ್ ಮಾಹಿತಿ ಇಲ್ಲ: 

ಈ ಬಾರಿಯ ಪರೀಕ್ಷೆಗೆ ಹಿಜಾಬ್ ನಿಷೇಧ ಸೇರಿದಂತೆ ಯಾವುದೇ ವಸ್ತ್ರ ಸಂಹಿತೆ ಸಂಬಂಧಮಂಡಳಿಯು ಮಾಹಿತಿ ನೀಡಿಲ್ಲ.

ವಿದ್ಯಾರ್ಥಿಗಳ ಗಮನಕ್ಕೆ

* ಪರೀಕ್ಷೆ ಬರೆದ • ಮೂರು ಬಾರಿ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಉಳಿಸಿಕೊಳ್ಳುವ ಅವಕಾಶವಿದೆ ಆತಂಕ ಬೇಡ
• ಪರೀಕ್ಷೆ ಆರಂಭಕ್ಕೂ ಒಂದು ತಾಸು ಮೊದಲೇ ಕೇಂದ್ರದಲ್ಲಿರಿ
• ಹೊರಡುವಾಗ ಹಾಲ್ ಟಿಕೆಟ್, ಪೆನ್ನು ಮರೆಯದೆ ಕೊಂಡೊಯ್ದಿರಿ
• ಮೊಬೈಲ್, ವಾಚ್, ಕ್ಯಾಲ್ಕುಲೇಟರ್
ಸೇರಿ ಎಲೆಕ್ಟ್ರಾನಿಕ್ಸ್ ಉಪಕರಣ ನಿಷೇಧ
• ಪ್ರಶ್ನೆಗಳನ್ನು ಓದಿಕೊಳ್ಳಲು 15 ನಿಮಿಷ ಕಾಲಾವಕಾಶವಿರುತ್ತದೆ ಬಳಸಿಕೊಳ್ಳಿ
• ಪ್ರತಿ ಪ್ರಶ್ನೆಗೂ ನಿಧಾನವಾಗಿ ಯೋಜಿಸಿ ಸರಿಯಾಗಿ ಉತ್ತರಿಸಿ
• ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ
• ಉಳಿದ ಪ್ರಶ್ನೆಗಳಿಗೆ ಗೊತ್ತಿರುವಷ್ಟು ಉತ್ತರವನ್ನಾದರೂ ಬರೆಯಿರಿ, ಖಾಲಿ ಬಿಡಬೇಡಿ

click me!