ಎಸ್ಸೆಸ್ಸೆಲ್ಸಿಯಲ್ಲಿ ಶೇ.60 ಅಂಕ ಗಳಿಸಿದ್ದ ಈತ ಈಗ ಐಎಎಸ್ ಅಧಿಕಾರಿ; ಯುಪಿಎಸ್‍ಸಿ ತಯಾರಿ ನಡೆಸುವವರಿಗೆ ಕಿವಿಮಾತು

By Suvarna News  |  First Published Feb 28, 2024, 11:33 AM IST

10 ಮತ್ತು 12ನೇ ತರಗತಿಯಲ್ಲಿ ಶೇ.60 ಅಂಕ ಗಳಿಸಿ ಸಾಮಾನ್ಯ ವಿದ್ಯಾರ್ಥಿಗಳಲ್ಲೊಬ್ಬ ಎನಿಸಿಕೊಂಡಿದ್ದ ಜುನೈದ್, ಈಗ ಐಎಎಸ್ ಅಧಿಕಾರಿಯಾಗಿ ತನ್ನೆಲ್ಲ ಸಹಪಾಠಿಗಳ ನಡುವೆ ಅಸಾಮಾನ್ಯರೆನಿಸಿಕೊಂಡಿದ್ದಾರೆ. 


ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ, ಲಕ್ಷಗಟ್ಟಲೆ ಐಎಎಸ್ ಆಕಾಂಕ್ಷಿಗಳು ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ಯುಪಿಎಸ್‌ಸಿ ಪರೀಕ್ಷೆಯನ್ನು ಭೇದಿಸಲು ಸಮರ್ಥರಾಗಿದ್ದಾರೆ. ಅಂಥದರಲ್ಲಿ 10, 12ನೇ ತರಗತಿಯಲ್ಲಿ ಶೇ.60 ಅಂಕ ಗಳಿಸಿದ್ದ ಈ ವ್ಯಕ್ತಿ, ಈ ಕಠಿಣ ಪರೀಕ್ಷೆ ಪಾಸ್ ಮಾಡಿ ಈಗ  ಐಎಎಸ್ ಅಧಿಕಾರಿಯಾಗಿದ್ದಾರೆ. ಅವರೇ ಐಎಎಸ್ ಅಧಿಕಾರಿ ಜುನೈದ್ ಅಹ್ಮದ್. 

ಜುನೈದ್ ಅಹ್ಮದ್ ಅವರು ಉತ್ತರ ಪ್ರದೇಶದ ಬಿಜ್ನೋರ್‌ನ ನಗೀನಾದಿಂದ 2018ರಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಜುನೈದ್ ಅಹ್ಮದ್ ಅವರು ನೋಯ್ಡಾದ ಶಾರದಾ ವಿಶ್ವವಿದ್ಯಾಲಯದಿಂದ ತಮ್ಮ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಜುನೈದ್‌ನ ತಾಯಿ ಗೃಹಿಣಿ ಮತ್ತು ತಂದೆ ವಕೀಲರು. ಅವರಿಗೆ ಇಬ್ಬರು ಕಿರಿಯ ಸಹೋದರರು ಹಾಗೂ ಒಬ್ಬ ಅಕ್ಕ ಇದ್ದಾರೆ.

Tap to resize

Latest Videos

undefined

ಶಾಲೆ ಮತ್ತು ಕಾಲೇಜಿನಲ್ಲಿ ಜುನೈದ್ ಅಹ್ಮದ್ ಸರಾಸರಿ ವಿದ್ಯಾರ್ಥಿಯಾಗಿದ್ದರು. ಆದರೆ, ಸಾಮಾನ್ಯ ವಿದ್ಯಾರ್ಥಿಯೂ ಕಠಿಣ ಪರಿಶ್ರಮದ ಮೂಲಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬಹುದು ಎಂಬುದನ್ನು ಜುನೈದ್ ಸಾಬೀತುಪಡಿಸಿದ್ದಾರೆ.

ಮಾನವಸಹಿತ ಗಗನಯಾನದ ಯಾತ್ರಿ ಪ್ರಶಾಂತ್ ನಾಯರ್ ಜೊತೆ 2ನೇ ವಿವಾಹ ಬಹಿರಂಗಪಡಿಸಿದ ಕೆಜಿಎಫ್‌ಗೆ ಧ್ವನಿ ನೀಡಿದ ನಟಿ

ಛಲವೊಂದಿದ್ದರೆ ಸಾಕು
ಸತತ ಮೂರು ಬಾರಿ, ಜುನೈದ್ ಅಹ್ಮದ್ UPSC ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. ಆದರೆ ಅವರು ಎಂದಿಗೂ ಪ್ರಯತ್ನ ಬಿಡಲಿಲ್ಲ. ತನ್ನ ನಾಲ್ಕನೇ ಪ್ರಯತ್ನದಲ್ಲಿ, ಜುನೈದ್ ಅಹ್ಮದ್ IRS ಮತ್ತು UPSC ಪರೀಕ್ಷೆಯಲ್ಲಿ AIR 352 ಅನ್ನು ಪಡೆದರು. ಆದರೆ ಜುನೈದ್ ಅಹ್ಮದ್ ಅವರು ಐಎಎಸ್ ಅಧಿಕಾರಿಯಾಗಬೇಕೆಂದು ಹಠ ಹಿಡಿದಿದ್ದರು. ಆದ್ದರಿಂದ ಅವರು ಐದನೇ ಪ್ರಯತ್ನ ಮಾಡಿದರು ಮತ್ತು ಈ ಬಾರಿ ಅವರು ಅಖಿಲ ಭಾರತ 3ನೇ ಸ್ಥಾನವನ್ನು ಗಳಿಸುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡರು. 

'ಸರಾಸರಿ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಯಾಗಿ, ನಾನು UPSC ಅನ್ನು ಸವಾಲಾಗಿ ತೆಗೆದುಕೊಂಡೆ. ಇಂಟರ್ನೆಟ್ ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಎಲ್ಲವೂ ಆನ್‌ಲೈನ್‌ನಲ್ಲಿ ಲಭ್ಯವಿದೆ. ಇಂಟರ್ನೆಟ್‌ನ ಉತ್ಪಾದಕ ಬಳಕೆ ನನಗೆ ಸಹಾಯ ಮಾಡಿದೆ' ಎನ್ನುತ್ತಾರೆ ಅಹ್ಮದ್.

'ಜನರು ನನ್ನೊಂದಿಗೆ ಹೆಚ್ಚು ಸುಲಭವಾಗಿ ಕನೆಕ್ಟ್ ಆಗುತ್ತಾರೆ. ಏಕೆಂದರೆ ನಾನು ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿಲ್ಲ ಮತ್ತು ಹಲವಾರು ಆಕಾಂಕ್ಷಿಗಳು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ' ಎನ್ನುವ ಜುನೈದ್ ತಮ್ಮ UPSC ತಯಾರಿ ತಂತ್ರವನ್ನು ಬಹಿರಂಗಪಡಿಸಿದ್ದಾರೆ.

ಹೆಚ್ಚು ಓದದ ಈ ಉದ್ಯಮಿ ಇಂದು 10,000 ಕೋಟಿ ಮೌಲ್ಯದ ಕಂಪನಿ ಒಡೆಯ; 10ಕ್ಕೂ ಹೆಚ್ಚು ಜನಪ್ರಿಯ ಬ್ರ್ಯಾಂಡ್‌‌ ಹಿಂದಿನ ಅಣ್ಣಾಬಾಂಡ್

ತಯಾರಿ ತಂತ್ರಗಳು
9ನೇ ತರಗತಿಯಿಂದ NCERT ಪುಸ್ತಕಗಳಿಗೆ ಅಂಟಿಕೊಳ್ಳುವುದು UPSC ಪ್ರಿಲಿಮ್ಸ್ ತಯಾರಿ ತಂತ್ರಕ್ಕೆ ಉತ್ತಮ ಸಲಹೆಯಾಗಿದೆ.ಅವರು ಹೆಚ್ಚಾಗಿ ವಿಫಲರಾಗುತ್ತಿದ್ದ ಮೇನ್ಸ್‌ಗೆ, ಆಕಾಂಕ್ಷಿಗಳು ಹಳೆಯ ಪತ್ರಿಕೆಗಳನ್ನು ಬಿಡಿಸುವ ಜೊತೆಗೆ ಸುದ್ದಿ ಪತ್ರಿಕೆಗಳನ್ನು ಚೆನ್ನಾಗಿ ಓದಬೇಕು. 
ಸಮಸ್ಯೆಗಳು ಮತ್ತು ಪರಿಹಾರಗಳನ್ನು ಅರ್ಥ ಮಾಡಿಕೊಳ್ಳಲು, ಅವರು ಪ್ರತಿ ಪ್ರಮುಖ ಸಮಸ್ಯೆಯನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುವ ಬುಲೆಟ್ ಪಾಯಿಂಟ್‌ಗಳನ್ನು ಬಳಸುತ್ತಿದ್ದರು. ಈ ತಂತ್ರದ ಮೂಲಕ, ಅವರು ತಮ್ಮ ಮುಖ್ಯ ಪರೀಕ್ಷೆಯನ್ನು ಸುಧಾರಿಸಲು ಸಾಧ್ಯವಾಯಿತು. ಇದನ್ನು ಆಕಾಂಕ್ಷಿಗಳೂ ಪ್ರಯತ್ನಿಸಬಹುದು ಎನ್ನುತ್ತಾರೆ ಜುನೈದ್.

click me!