* ಪೋಷಕರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಬೇಕು
* ಶಾಲಾ ಶುಲ್ಕ ನಿಗದಿ ಸಮಿತಿಗೆ ಸ್ವಾಗತ
* ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿಚಾರವಾಗಿ ಆತುರ ಪಟ್ಟ ಶಿಕ್ಷಣ ಸಚಿವ
ಬೆಂಗಳೂರು(ಜೂ.30): ಟಾಸ್ಕ್ ಫೋರ್ಸ್ ರಚಿಸಿ ಶಾಲೆ ಪ್ರಾರಂಭ ಮಾಡುತ್ತೇವೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ. ಎಸ್‌ಒಪಿ ಮೂಲಕ ಶಾಲೆ ಪ್ರಾರಂಭಿಸಬಹುದಿತ್ತು. ಶಿಕ್ಷಣ ಸಚಿವರು ಶಾಲೆ ತೆರೆಯುವ ಮನಸ್ಸು ಮಾಡುತ್ತಿಲ್ಲ. ಕೂಡಲೇ ಶಾಲೆ ಪ್ರಾರಂಭ ಮಾಡಲು ಸಚಿವರು ನಿರ್ಧಾರ ಕೈಗೊಳ್ಳಬೇಕು ಕಠಿಣವಾದ ಎಸ್‌ಒಪಿ ಜಾರಿಗೆ ತರುವ ಮೂಲಕ ಹಾಗೂ ಪಾಳಿ ಪದ್ಧತಿಯಲ್ಲಿ ಶಾಲೆ ಪ್ರಾರಂಭಿಸಿ ಎಂದು ಕರ್ನಾಟಕ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೋಷಕರಿಗೆ ಕಡ್ಡಾಯವಾಗಿ ಹಾಕಿಸಬೇಕು. ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರು 4 ಲಕ್ಷ ಇದ್ದಾರೆ. ಅವರಿಗೂ ಲಸಿಕೆ ಹಾಕಿಸುವಂತೆ ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಖಾಸಗಿ ಶಾಲಾ ಶುಲ್ಕ ವಿಚಾರದ ಬಗ್ಗೆ ಮಾತನಾಡಿದ ಲೋಕೇಶ್ ತಾಳಿಕಟ್ಟೆ, ಕೆಲ ಖಾಸಗಿ ಶಾಲಾ ಸಂಘಟನೆಗಳು ಕೋರ್ಟ್ ಮೆಟ್ಟಿಲು ಏರಿವೆ. ಶುಲ್ಕದ ವಿಚಾರ ಬಜೆಟ್ ಶಾಲೆಗಳಲ್ಲಿ ಇಲ್ಲ. ಶುಲ್ಕ ನಿಗದಿ ಸಮಿತಿಯನ್ನ ನಾವು ಸ್ವಾಗತ ಮಾಡುತ್ತೇವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿಚಾರವಾಗಿ ಸಚಿವರು ಬಹಳ ಆತುರ ಪಟ್ಟಿದ್ದಾರೆ. ಈಗಾಗಲೇ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳದೇ ಫಲಿತಾಂಶ ಪ್ರಕಟ ಮಾಡಲು ಮುಂದಾಗಿದೆ ಎಂದು ತಿಳಿಸಿದ್ದಾರೆ.
PUC ಫಲಿತಾಂಶಕ್ಕೆ ಏನೇನು ಪರಿಗಣನೆ : ಶಿಕ್ಷಣ ಇಲಾಖೆಗೆ ರುಪ್ಸಾ 3 ಪ್ರಮುಖ ಸಲಹೆ
ಖಾಸಗಿ ಶಾಲಾ ಒಕ್ಕೂಟದಲ್ಲಿ ಒಡಕು
ಖಾಸಗಿ ಶಾಲಾ ಒಕ್ಕೂಟದಲ್ಲಿ ಒಡಕು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸಂಘದ ಟೈಟಲ್ ವಿಚಾರವಾಗಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಆದ್ರೆ ನಕಲಿ ದಾಖಲೆ ಸೃಷ್ಠಿಸುವ ಮೂಲಕ ಹಾಲನೂರು ಲೆಪಾಕ್ಷಿ ರುಪ್ಸಾ ಸಂಘಟನೆ ಮಾಡಿದ್ದಾರೆ. ನಾನೇ ಅಧ್ಯಕ್ಷ ಅಂತ ಹೇಳಿಕೊಂಡಿದ್ದಾರೆ. ಆದ್ರೆ ಸಂಘಟನೆಯ ಕಾರ್ಯಕಾರಿ ಸಮಿತಿಯಲ್ಲಿ 17 ಜನ ಇದ್ದಾರೆ. ಆದ್ರೆ 17 ಜನರ ಅಭಿಪ್ರಾಯ ಪಡೆಯದೇ ಲೋಕೇಶ್ ತಾಳಿಕಟ್ಟೆ ಉಚ್ಛಾಟನೆ ಮಾಡಿದ್ದಾರೆ. ಲೇಪಾಕ್ಷಿ ಸ್ವಯಂ ಘೋಷಿತವಾಗಿ ಅಧ್ಯಕ್ಷ ಅಂತ ಹೇಳಿಕೊಂಡಿದ್ದಾರೆ, ಇದು ಎಷ್ಟರ ಮಟ್ಟಿಗೆ ಸರಿ?. ಅವರಲ್ಲಿ ಮೂರನೇ ಒಂದು ಭಾಗದಷ್ಟು ಬಹುಮತ ಇಲ್ಲ. ಲೇಪಾಕ್ಷಿ ಅವರು ಸಂಘದ ಸದಸ್ಯತ್ವನ್ನೇ ಪಡೆದಿಲ್ಲ ಹೀಗಾಗಿ ಸಂಘದ ಹೆಸರು ಬಳಕೆಯ ವಿಚಾರ ನ್ಯಾಯಾಲಯದಲ್ಲಿದೆ. ಯಾರ ಅನುಮತಿ ಪಡೆಯದೇ, ಯಾವುದೇ ದಾಖಲಾತಿ ಇಲ್ಲದೆ ಸ್ವಯಂ ಘೋಷಣೆ ಎಷ್ಟರ ಮಟ್ಟಿಗೆ ಸರಿ? ಕೊಟ್ರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸಂಘಟನೆಯ ರಾಜ್ಯಾಧ್ಯಕ್ಷ ಹಾಲನೂರು.ಎಸ್.ಲೇಪಾಕ್ಷಿ ಬಣದಿಂದ ಸುದ್ದಿಗೋಷ್ಠಿ ಮಾತನಾಡಿದ ಹಾಲನೂರು.ಎಸ್.ಲೇಪಾಕ್ಷಿ ಅವರು, ರಾಜ್ಯದ ಶೇ. 80 ರಷ್ಟು ಶಾಲೆಗಳಲ್ಲಿನ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ನಾಳೆಯಿಂದ ಆನ್‌ಲೈನ್ ಮೂಲಕ ತರಗತಿಗಳು ಶುರುವಾಗುತ್ತಿವೆ. ಇದು ಒಳ್ಳೆಯ ವಿಚಾರ, ಆದರೆ ಶಾಲೆ ಆರಂಭದ ಸರ್ಕಾರ ಮನಸ್ಸು ಮಾಡಬೇಕು. ವಿದ್ಯಾಗಮ ಅಥವಾ ಪಾಳಿ ರೂಪದಲ್ಲಿ ಶಾಲೆ ಆರಂಭಕ್ಕೆ ಖಾಸಗಿ ಶಾಲೆಗಳು ಒತ್ತಾಯ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಪರೀಕ್ಷೆ ಇಲ್ಲದೆ ದ್ವಿತೀಯ ಪಿಯುಸಿ ರಿಪೀಟರ್ಸ್ ಪಾಸ್?
ಖಾಸಗಿ ಶಾಲೆಗಳ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ನಡೆಸೋದಾಗಿ ಸರ್ಕಾರಕ್ಕೆ ಹಾಲನೂರು.ಎಸ್.ಲೇಪಾಕ್ಷಿ ಒಂದು ವಾರದ ಗಡುವು ನೀಡಿದ್ದಾರೆ.
ರುಪ್ಸಾ ಸಂಘಟನೆ ಬೇಡಿಕೆಗಳೇನು..?
* 2021-22 ಸಾಲಿನ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಉನ್ನತೀಕರಣ ವಿಷಯವು ತುಂಬಾ ನಿಧಾನಗತಿಯಲ್ಲಿ ಅನುಸರಿಸುತ್ತಿದೆ. ಇದರಿಂದ ಸುಮಾರು ಆರ್‌ಟಿಇ ಮಕ್ಕಳ ಮುಂದಿನ ತರಗತಿಗೆ ಅನ್ಯಾವಾಗುತ್ತಿದೆ. ಆರ್‌ಟಿಇ ಮಕ್ಕಳು ಬೀದಿಪಾಲಾಗುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯ
* 2019-20 ಮತ್ತು 2020-21ನೇ ಸಾಲಿನ ಆರ್‌ಟಿಇ ಹಣ ಇನ್ನೂ ಬಿಡುಗಡೆ ಆಗಿಲ್ಲ. ಆದ್ದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ತುಂಬಾ ನೋವನ್ನ ಅನುಭವಿಸುತ್ತಿದೆ. ಹೀಗಾಗಿ ಕೂಡಲೇ ಆರ್‌ಟಿಇ ಹಣ ಬಿಡುಗಡೆ ಮಾಡುವಂತೆ ಒತ್ತಾಯ
* ಖಾಸಗಿ ಶಾಲೆಗಳ ಶಿಕ್ಷಕರಿಗೂ ಘೋಷಿಸಿರುವ ಪ್ಯಾಕೇಜ್‌ಅನ್ನ ಕೂಡಲೇ ಶಿಕ್ಷಕರಿಗೆ ಮುಟ್ಟಿಸಬೇಕು. ಬೇಡಿಕೆ ಈಡೇರದಿದ್ದರೆ ಒಂದು ವಾರದ ಬಳಿ ಬೀದಿಗಿಳಿಯಲು ರುಪ್ಸಾ ಸಂಘಟನೆ ನಿರ್ಧಾರ