ಈಗಿನ ಪಠ್ಯ ಸಮಿತಿ ಜೊತೆ ಚರ್ಚೆಗೆ ಸಿದ್ಧ: ರೋಹಿತ್‌ ಚಕ್ರತೀರ್ಥ

By Kannadaprabha News  |  First Published Jun 17, 2023, 12:08 PM IST

ಪಠ್ಯ ಸೇರ್ಪಡೆ, ಪಠ್ಯ ತೆಗೆಯುವ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ಸರ್ವ ಸ್ವತಂತ್ರವಾಗಿರುತ್ತದೆ. ಆದರೆ, ವೀರ ಸಾವರ್ಕರ್‌ ಹಾಗೂ ಕೇಶವ ಬಲಿರಾಮ ಹೆಡ್ಗೇವಾರ್‌ ಸ್ವಾತಂತ್ರ್ಯ ಹೋರಾಟಗಾರರಲ್ಲ ಎನ್ನಲು ಯಾರಿಗೂ ಸಾಧ್ಯವಿಲ್ಲ. ಅದಕ್ಕೆ ಸೂಕ್ತ ದಾಖಲೆ ಒದಗಿಸಲು ಸಿದ್ಧನಿದ್ದೇನೆ. ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಸಲು ಪಠ್ಯ ಪುಸ್ತಕಕ್ಕೆ ಆ ಇಬ್ಬರು ದಿಗ್ಗಜರ ಪಾಠ ಸೇರಿಸಿದ್ದೇವು: ರೋಹಿತ್‌ ಚಕ್ರತೀರ್ಥ 


ಶಿವಮೊಗ್ಗ(ಜೂ.17):  ನನ್ನ ಅವಧಿಯ ಪರಿಷ್ಕರಣೆ ಸಮಿತಿ ಶಿಫಾರಸು ಮಾಡಿದ್ದ ಆ ಪಠ್ಯಪುಸ್ತಕ ಈಗ ಸರ್ಕಾರದ ಸ್ವತ್ತು. ಅದನ್ನ ತೆಗೆಯಿರಿ, ಇದನ್ನ ತೆಗೆಯಿರಿ ಎನ್ನಲು, ಇದನ್ನು ಯಾಕೆ ತೆಗೆದಿರಿ ಎಂದು ಪ್ರಶ್ನಿಸಲು ನಮಗೆ ಸಂಬಂಧವಿಲ್ಲ. ಆದರೆ, ಈಗಿನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಒಂದು ವೇಳೆ ಚರ್ಚೆಗೆ ಆಹ್ವಾನಿಸಿದರೆ ನಾನು ಪಾಲ್ಗೊಳ್ಳಲು ಸಿದ್ಧ ಎಂದು ಅಂಕಣಕಾರ ರೋಹಿತ್‌ ಚಕ್ರತೀರ್ಥ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯ ಸೇರ್ಪಡೆ, ಪಠ್ಯ ತೆಗೆಯುವ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ಸರ್ವ ಸ್ವತಂತ್ರವಾಗಿರುತ್ತದೆ. ಆದರೆ, ವೀರ ಸಾವರ್ಕರ್‌ ಹಾಗೂ ಕೇಶವ ಬಲಿರಾಮ ಹೆಡ್ಗೇವಾರ್‌ ಸ್ವಾತಂತ್ರ್ಯ ಹೋರಾಟಗಾರರಲ್ಲ ಎನ್ನಲು ಯಾರಿಗೂ ಸಾಧ್ಯವಿಲ್ಲ. ಅದಕ್ಕೆ ಸೂಕ್ತ ದಾಖಲೆ ಒದಗಿಸಲು ಸಿದ್ಧನಿದ್ದೇನೆ. ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಸಲು ಪಠ್ಯ ಪುಸ್ತಕಕ್ಕೆ ಆ ಇಬ್ಬರು ದಿಗ್ಗಜರ ಪಾಠ ಸೇರಿಸಿದ್ದೇವು ಎಂದು ಹೇಳಿದರು.

Tap to resize

Latest Videos

ಬಿಜೆಪಿ ಪರಿಷ್ಕರಿಸಿದ್ದ ಎಲ್ಲ ಪಾಠಗಳಿಗೂ ಕೊಕ್‌: ಈ ವರ್ಷ ಬರಗೂರು ಸಿದ್ಧಪಡಿಸಿದ್ದ ಪಠ್ಯ ಬೋಧನೆ

ನಾವು ಪರಿಷ್ಕರಣೆ ಮಾಡುವಾಗ ಹಿಂದಿನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರನ್ನೂ ಚರ್ಚೆಗೆ ಆಹ್ವಾನಿಸಿದ್ದೇವು. ನಮ್ಮ ಆಹ್ವಾನಕ್ಕೆ ಅವರು ಪ್ರತಿಕ್ರಿಯಿಸಿರಲಿಲ್ಲ. ಈಗಿನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಒಂದು ವೇಳೆ ಚರ್ಚೆಗೆ ಆಹ್ವಾನಿಸಿದರೆ ನಾನು ಪಾಲ್ಗೊಳ್ಳಲು ಸಿದ್ಧ. ಹೊಸದಾಗಿ ಸೇರಿಸಿರುವ ಪಠ್ಯಗಳಿಗೆ ಅವುಗಳನ್ನು ಸೇರಿಸಲು ಸ್ಪಷ್ಟಕಾರಣ ಕೊಡಲು ಸಿದ್ಧನಿದ್ದೇನೆ. ಈಗ ಮರು ಪಠ್ಯ ಪರಿಷ್ಕರಣೆಯನ್ನು ಜನ ಸಾಮಾನ್ಯರು ಒಪ್ಪಿಕೊಂಡರೆ ಒಳ್ಳೆಯದು. ಈ ವಿಚಾರದಲ್ಲಿ ಸರ್ಕಾರ ಪ್ರಜಾಪ್ರಭುತ್ವದ ರೀತಿಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟರೆ ನನ್ನ ಅಭ್ಯಂತರವಿಲ್ಲ ಎಂದರು.

click me!