ಗೋಳ್ವಾಳ್ಕರ್‌, ಸಾವರ್ಕರ್‌ ಫೇಕ್‌ ದೇಶಭಕ್ತರು, ಅವರ ಪಾಠ ನಮಗ್ಯಾಕೆ: ಕುಂವೀ!

By Gowthami K  |  First Published Jun 8, 2023, 10:09 PM IST

ಗೋಳ್ವಾಳ್ಕರ್ ಸಾವರ್ಕರ್ ಇತ್ಯಾದಿ ಹುಸಿ ದೇಶ ಭಕ್ತರ ಪಾಠ ತೆಗೆಯಬೇಕು. ಈ ಪಾಠಗಳನ್ನು ಮಕ್ಕಳಿಗೆ ಬೋಧಿಸಬಾರದು ಎಂದು ಚಾಮರಾಜನಗರದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಆಗ್ರಹಿಸಿದ್ದಾರೆ.


ಚಾಮರಾಜನಗರ (ಜೂ.8): ಪ್ರತೀ 5 ವರ್ಷಕ್ಕೊಮ್ಮೆ ಪಠ್ಯಪುಸ್ತಕ ಬದಲಾವಣೆ ಮಾಡಬೇಕೆಂಬ ನಿಲುವು ತಂದಿರುವುದು ಬಿಜೆಪಿ ಹೊರತು ಅದು ಪ್ರಜಾಸತಾತ್ಮಕ ನಿಲುವಲ್ಲ. ಗೋಳ್ವಾಳ್ಕರ್ , ಸಾವರ್ಕರ್ ಇತ್ಯಾದಿ ಹುಸಿ ದೇಶ ಭಕ್ತರ ಪಾಠ ತೆಗೆಯಬೇಕು. ಈ ಪಾಠಗಳನ್ನು ಮಕ್ಕಳಿಗೆ ಬೋಧಿಸಬಾರದು. ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಬೇಕು ಎಂದು ಚಾಮರಾಜನಗರದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಮಾಡುತ್ತಿರುವುದು ಸರಿ ಇದೆ. ಎಡ ಬಲ ಅನ್ನುವ ಧೋರಣೆ ಅಲ್ಲ. ಸಂವಿಧಾನದಲ್ಲಿ ಏನು ಆಶಯವಿದೆ. ಆ ಆಶಯಕ್ಕೆ ಅನುಗುಣವಾಗಿ ಬರಗೂರು ರಾಮಚಂದ್ರಪ್ಪ ನೇತೃತ್ವ ಸಮಿತಿ ಪಠ್ಯಕ್ರಮ ಮಾಡಿತ್ತು. ಅದನ್ನು ಮುಂದುವರೆಸಬೇಕು ಅಷ್ಟೇ. ನಾನು ಅವರ ಪರ-ವಿರೋಧ ಎಂದಲ್ಲ. ಸಂವಿಧಾನ ಏನು ಹೇಳುತ್ತದೆ? ಸಂವಿಧಾನದ ಪರವಾಗಿ ಪಠ್ಯಕ್ರಮ ಇರಬೇಕು. ನಮ್ಮ ಮಕ್ಕಳಲ್ಲಿ ವೈಚಾರಿಕತೆಯನ್ನು ಬೆಳೆಸಬೇಕು. ಸನಾತನ ನೀತಿಯನ್ನು ಬೆಳೆಸುವುದಲ್ಲ. ಸರ್ವ ಜನರಿಗೆ ಒಳ್ಳೆಯದನ್ನು ಭಯಸಬೇಕು. ಬಸವಣ್ಣ ಹೇಳಿದಂತೆ ಇವನಾರವ ಇವನಾರವ ಎನ್ನಿಸದೆ, ಇವ ನಮ್ಮವ ಎನ್ನಿಸಯ್ಯ ಎಂಬುದು ಜಾರಿಯಾಗಬೇಕು. ಇದನ್ನು ಸರಕಾರ ಮಾಡಬೇಕು. ಇದು ಕರ್ತವ್ಯ ಎಂದಿದ್ದಾರೆ. 

Tap to resize

Latest Videos

KARNATAKA TEXTBOOK REVISION: ಶಾಲಾ ಪಠ್ಯದಿಂದ ಬನ್ನಂಜೆ ಆಚಾರ್ಯರ ಕೃತಿಗೆ ಕೋಕ್, ಶಿಷ್ಯನ ಬೇಸರ

ಹಿಂದಿನ ಸರ್ಕಾರ ಮನುಷ್ಯ ವಿರೋಧಿ, ದೇಶ ವಿರೋಧಿ, ಸಮಾಜ ವಿರೋಧಿ ಪಠ್ಯ ಅಳವಡಿಸಿದ್ದು ತಪ್ಪು. ನಮ್ಮ ಸಂವಿಧಾನಕ್ಕೆ ಮಾಡಿದ ಅಪಮಾನ. ಹೊಸ ಸರ್ಕಾರ ಇದನ್ನು ಬದಲಿ ಮಾಡಲಿ. ಬರಗೂರು ರಾಮಚಂದ್ರಪ್ಪ ನೇತೃತ್ವ ಸಮಿತಿಯ ಪಠ್ಯಕ್ರಮ ಮುಂದುವರೆಸಲಿ. ಪಠ್ಯಕ್ರಮ ಬದಲಾವಣೆ ಸರಿಯಿದೆ. ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಬಸವಣ್ಣನ ತತ್ವ ಪಾಲಿಸಬೇಕು. ಇದು ಸರ್ಕಾರದ ಕರ್ತವ್ಯ ಎಂದು ಕುಂ ವೀರಭದ್ರಪ್ಪ ಹೇಳಿಕೆ ನೀಡಿದ್ದಾರೆ.

16 ನೇ ಬೆದರಿಕೆ ಪತ್ರ:
ನನಗೆ ಈಗ್ಲೂ  ಬೆದರಿಕೆ ಪತ್ರ ಬರುತ್ತಿವೆ. ಇದೀಗ 16 ನೇ ಬೆದರಿಕೆ ಪತ್ರ ಬಂದಿದೆ. ಎಂದಿರುವ ಸಾಹಿತಿ ಕುಂ.ವೀರಭದ್ರಪ್ಪ, ಸನಾತನ ಮೌಲ್ಯ, ಹಿಂದುತ್ವ ವಾದವನ್ನು ವಿರೋಧಿಸಿದಾಗ ಈ ರೀತಿಯ ಪ್ರೇಮ ಪತ್ರಗಳು ಬರುತ್ತವೆ. ನಾನು ಇದನ್ನು ಬೆದರಿಕೆ ಪತ್ರ ಅಂದುಕೊಂಡಿಲ್ಲ, ಪ್ರೇಮ ಪತ್ರ ಅಂದ್ಕೊಂಡಿರುವೆ ಎಂದು ಹೇಳಿದ್ದಾರೆ.

10ನೇ ತರಗತಿಯ ಎಲ್ಲಾ 6 ಸಬ್ಜೆಕ್ಟ್‌ನಲ್ಲಿ 35 ಪಡೆದ ಮಗ, ಜಸ್ಟ್ ಪಾಸ್‌ಗೆ ಹೆತ್ತವರ ಮುಗಿಲು ಮುಟ್ಟಿದ

ರಾಜ್ಯದಲ್ಲಿನ ಗ್ಯಾರಂಟಿ ಜಾರಿ ವಿಚಾರದ ಬಗ್ಗೆ ಮಾತನಾಡಿದ ಅವರು, ಮೋದಿ ಸರ್ಕಾರ 10 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಶ್ರೀಮಂತರ ಸಾಲ ಮನ್ನಾ ಮಾಡಿದೆ. ಬಡವರಿಗೆ 10 ಕೆಜಿ ಅಕ್ಕಿ ಕೊಟ್ರೆ ಪ್ರಳಯವಾಗುತ್ತಾ. ಬಡವರಿಗೆ ಇದೀಗ ರಾಜ್ಯದಲ್ಲಿ 50 ಸಾವಿರ ಕೋಟಿ ಅಷ್ಟೇ ಖರ್ಚಾಗುತ್ತೆ. ಇದು ದೊಡ್ಡದಲ್ಲ ಬಡವರು, ಮಹಿಳೆಯರಿಗೆ ಕೊಡ್ತಿದ್ದೇವೆ. ಎಲ್ಲಾ ಲೇಖಕರು ಕೂಡಾ ಇದನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.

click me!